ಮಂಡ್ಯ ಮೂಲ ಕಾಂಗ್ರೆಸ್ನ ಭದ್ರಕೋಟೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಂಪುಗಾರಿಕೆಗೆ ಅವಕಾಶ ಕೊಡದೆ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕು. ಹೈಕಮಾಂಡ್ ನಿಮ್ಮನ್ನು ನಂಬಿ ಜವಾಬ್ದಾರಿ ಕೊಟ್ಟಿದೆ. ಅದಕ್ಕೆ ಜೀವ ತುಂಬಿ ಕೆಲಸ ಮಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಕುಮಾರ್ ಕೊಪ್ಪ ನೇತೃತ್ವದ ನಿಯೋಗ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಕುಶಲೋಪರಿ ಹಾಗೂ ದಸರಾ ಶುಭಾಶಯ ಕೋರಿದರು.ನಿಯೋಗವನ್ನು ಕುರಿತು ಮಾತನಾಡಿದ ಖರ್ಗೆ ಅವರು, ಮಂಡ್ಯ ಮೂಲ ಕಾಂಗ್ರೆಸ್ನ ಭದ್ರಕೋಟೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಂಪುಗಾರಿಕೆಗೆ ಅವಕಾಶ ಕೊಡದೆ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕು. ಹೈಕಮಾಂಡ್ ನಿಮ್ಮನ್ನು ನಂಬಿ ಜವಾಬ್ದಾರಿ ಕೊಟ್ಟಿದೆ. ಅದಕ್ಕೆ ಜೀವ ತುಂಬಿ ಕೆಲಸ ಮಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಸಲಹೆ ನೀಡಿದರು. ಎಲ್ಲಾ ಸಮಾಜದವರನ್ನು ಪಕ್ಷದಲ್ಲಿ ಸಕ್ರಿಯಗೊಳಿಸುವ ಕರ್ತವ್ಯಕ್ಕೆ ಮುಂದಾಗುವಂತೆ ಮಾರ್ಗದರ್ಶನ ನೀಡಿದರು.
ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಕೊಪ್ಪ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ ಅಧ್ಯಕ್ಷ ಡಾ.ಎಲ್.ಮೂರ್ತಿ, ಹೊಸಗಾವಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ಮಹೇಶ್, ಎಂ.ಕ್ರಾಂತಿ ಸಿಂಹ ಇದ್ದರು.ದಸರಾ ಮ್ಯಾರಥಾನ್: ವಿಜೇತರಿಗೆ ಬಹುಮಾನ ವಿತರಣೆಶ್ರೀರಂಗಪಟ್ಟಣ:ದಸರಾ ಅಂಗವಾಗಿ ಪಟ್ಟಣದ ತಾಲೂಕು ಕ್ರೀಡಾಂಗಣದಿಂದ ಕರಿಘಟ್ಟ ಬೆಟ್ಟದ ತಪ್ಪಲಿನವರೆಗೆ ನಡೆದ ಮ್ಯಾರಥಾನ್ ವಿಜೇತರಾದ ವಿವಿಧ ವಯೋಮಾನದ ಪುರುಷರು ಮತ್ತು ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.
ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆದು ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ ನಗದು ಬಹುಮಾನ, ಜಿಲ್ಲಾಡಳಿತದಿಂದ ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ವಿತರಿಸಲಾಯಿತು.20 ವರ್ಷ ಪುರುಷರ ಓಟ ವಿಭಾಗ: ಎಚ್.ಡಿ.ದೊರೆ-ಪ್ರಥಮ, ಭರತ್ ರೆಡ್ಡಿ- ದ್ವಿತಿಯ, ಪ್ರಸಾದ್-ತೃತೀಯ, ಭೋಪಯ್ಯ- ನಾಲ್ಕನೇ ಸ್ಥಾನ, ಮಹಿಳೆಯರ ಓಟ ವಿಭಾಗ ಜಯಶ್ರೀ-ಪ್ರಥಮ, ದಿವ್ಯಶ್ರೀ- ದ್ವಿತಿಯ, ಉನ್ನತಿ-ತೃತೀಯ ಹಾಗೂ ಸಿಂಚನ-ನಾಲ್ಕನೇ ಸ್ಥಾನ ಪಡೆದರು.21 ರಿಂದ 50 ವರ್ಷ ಒಳಪಟ್ಟ ಪುರುಷರ ವಿಭಾಗ: ಪುರುಷೋತ್ತಮ್-ಪ್ರಥಮ, ಸುಮಂತ್ ಕುಮಾರ್-ದ್ವಿತೀಯ, ಸಿದ್ದಲಿಂಗೇಶ್-ತೃತೀಯ ಹಾಗೂ ಷಣ್ಮುಖ-ನಾಲ್ಕನೇ ಸ್ಥಾನ, ಮಹಿಳೆಯರ ವಿಭಾಗ; ಹರ್ಷಿತಾ -ಪ್ರಥಮ ,ಅನನ್ಯ- ದ್ವಿತಿಯ , ಪಿ.ಅಂಜು-ತೃತಿಯ ಸ್ಥಾನ.51 ವರ್ಷ ಮೇಲ್ಪಟ್ಟ ಪುರುಷರ ವಿಭಾಗ;ರವಿಕುಮಾರ್-ಪ್ರಥಮ, ಬಾಲಚಂದ್ರ- ದ್ವಿತೀಯ ಹಾಗೂ ಆರ್.ಸೋಮಶೇಖರ್- ತೃತೀಯ.
ಮಹಿಳೆಯರ ವಿಭಾಗ - ವಿಜಯ-ಪ್ರಥಮ, ಲತಾ-ದ್ವಿತಿಯ, ವೈ.ಆರ್.ಲತಾ-ತೃತೀಯ ಹಾಗೂ ಮಂಜುಳಾ-ನಾಲ್ಕನೇ ಸ್ಥಾನ ಗಳಿಸಿದರು.