ಸಾರಾಂಶ
ರಾಮನಗರ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ರಾಮನಗರದ ರಂಗರಾಯನದೊಡ್ಡಿ ಕೆರೆಯಲ್ಲಿ ದೋಣಿ ವಿಹಾರಕ್ಕೆ ನಾಳೆ (ಸೆ.27)ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿರುವ ಹಿನ್ನಲೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಪ್ರಾಯೋಗಿಕವಾಗಿ ದೋಣಿ ವಿಹಾರ ನಡೆಸಿದರು.

ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯ ರಾಮನಗರ ಕ್ಷೇತ್ರ ವ್ಯಾಪ್ತಿಯ ರಂಗರಾಯನದೊಡ್ಡಿ ಕೆರೆ, ಮರಳವಾಡಿ ಹೋಬಳಿಯ ರಾವುತನ ಹಳ್ಳಿಕೆರೆ, ಮಾಗಡಿ ಕ್ಷೇತ್ರ ವ್ಯಾಪ್ತಿಯ ಬಿಡದಿ ಹೋಬಳಿಯ ನಲ್ಲಿಗುಡ್ಡೆ ಕೆರೆ ಮತ್ತು ವೈ.ಜಿ.ಗುಡ್ಡ ಕೆರೆಗಳಲ್ಲಿ ದೋಣಿ ವಿಹಾರ ನಡೆಸಲು ಉದ್ದೇಶಿಸಲಾಗಿದೆ.ಈ ನಾಲ್ಕು ಕೆರೆಗಳ ಪೈಕಿ ರಂಗರಾಯನದೊಡ್ಡಿ ಕೆರೆಯಲ್ಲಿ ದೋಣಿ ವಿಹಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಚಾಲನೆ ನೀಡುವರು. ಪೆಟಲ್ ಬೋಟ್ , ಸ್ಪೀಡ್ ಬೋಟ್ , ಜೆಟ್ ಸಿ ಹಾಗೂ ಬನಾನ್ ಬೋಟ್ ಗಳು ಪ್ರವಾಸಿಗರ ದೋಣಿ ವಿಹಾರಕ್ಕೆ ಖುಷಿ ನೀಡಲಿದೆ.
ಪ್ರಾಯೋಗಿಕವಾಗಿ ನಡೆದ ದೋಣಿ ವಿಹಾರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರೊಂದಿಗೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಪೌರಾಯುಕ್ತ ಜಯಣ್ಣ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮತ್ತಿತರರು ಇದ್ದರು.---------------------------
26ಕೆಆರ್ ಎಂಎನ್ 7.ಜೆಪಿಜಿರಾಮನಗರದ ರಂಗರಾಯನದೊಡ್ಡಿ ಕೆರೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ದೋಣಿ ವಿಹಾರ ನಡೆಸಿದರು.
--------------------------