ಸಾರಾಂಶ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ಸಭೆ ಬಳಿಕ ವಿಧಾನಸೌಧದಿಂದ ಹೊರ ನಡೆದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೊಂದಲಕ್ಕೆ ಒಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು ಹತ್ತಲು ಮುಂದಾದ ಘಟನೆ ನಡೆಯಿತು.
ಕನ್ನಡಪ್ರಭ ವಾರ್ತೆ, ಬೆಂಗಳೂರುಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ಸಭೆ ಬಳಿಕ ವಿಧಾನಸೌಧದಿಂದ ಹೊರ ನಡೆದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೊಂದಲಕ್ಕೆ ಒಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು ಹತ್ತಲು ಮುಂದಾದ ಘಟನೆ ನಡೆಯಿತು.
ಕೆಂಗಲ್ ದ್ವಾರದ ಮುಂದೆ ನಿಂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಚಾಲಕ ಡಿ.ಕೆ. ಶಿವಕುಮಾರ್ ಅವರು ಬಂದ ತಕ್ಷಣ ಅಲರ್ಟ್ ಆದರು. ಇದರಿಂದ ತನ್ನದೇ ಕಾರು ಎಂದು ಭಾವಿಸಿ ಡಿ.ಕೆ. ಶಿವಕುಮಾರ್ ಕಾರು ಹತ್ತಲು ಬಾಗಿಲು ತೆಗೆಯಲು ಮುಂದಾದರು. ತಕ್ಷಣ ಎಚ್ಚೆತ್ತ ಡಿ.ಕೆ. ಶಿವಕುಮಾರ್ ಅವರ ಗನ್‌ಮ್ಯಾನ್ ಅವರು ಉಪಮುಖ್ಯಮಂತ್ರಿಗಳ ಕಾರಿನ ಬಳಿಗೆ ಕರೆದುಕೊಂಡು ಹೋದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))