ಸಾರಾಂಶ
ಶವ ಸಂಸ್ಕಾರ ಮಾಡಲು ಮಳೆ ಅಡ್ಡಿ ಬಂದ ಕಾರಣ ಕೆಲ ಹೊತ್ತು ಶವವನ್ನು ರಸ್ತೆ ಮೇಲೆ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಲೋಕಾಪುರ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದಿದೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಶವ ಸಂಸ್ಕಾರ ಮಾಡಲು ಮಳೆ ಅಡ್ಡಿ ಬಂದ ಕಾರಣ ಕೆಲ ಹೊತ್ತು ಶವವನ್ನು ರಸ್ತೆ ಮೇಲೆ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಲೋಕಾಪುರ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದಿದೆ.ಕೆಲವು ದಿನಗಳ ಹಿಂದೆ ಪಟ್ಟಣದ ಬ್ರಿಡ್ಜ್ ಹತ್ತಿರವಿರುವ ಶವಾಗಾರಕ್ಕೆ ಕಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶವಾಗಾರದ ಶೆಡ್ ಕಿತ್ತು ಹೋಗಿದ್ದು, ಅದನ್ನು ಪಟ್ಟಣ ಪಂಚಾಯತಿ ಅಧಿಕಾರಿಗಳು ದುರಸ್ತಿ ಮಾಡಿಸಿಲ್ಲ. ಶನಿವಾರ ಪಟ್ಟಣದ ನಿವಾಸಿ ದುರಗವ್ವ ಪಾಚಂತ ಎಂಬ ಮಹಿಳೆ ನಿಧನ ಹೊಂದಿದ್ದರಿಂದ ಅಂತ್ಯಸಂಸ್ಕಾರ ಮಾಡಲು ಪಟ್ಟಣದ ಬ್ರಿಡ್ಜ್ ಹತ್ತಿರ ಇರುವ ಶವಾಗಾರಕ್ಕೆ ತರುವ ಹೊತ್ತಿಗೆ ಮಳೆ ಬಂದಿದೆ. ಆಗ ಶವ ದಹಿಸಲು ಸಮಸ್ಯೆ ಆಗಿ ಕುಟುಂಬಸ್ಥರು ಕೆಲ ಹೊತ್ತು ಶವವನ್ನು ರಸ್ತೆ ಮೇಲೆ ಇಟ್ಟು ಪ್ರತಿಭಟನೆ ನಡೆಸಿದರು.
ನಂತರ ಸಮಾಜದ ಹಿರಿಯರು ಚರ್ಚಿಸಿ ಶವ ಸಂಸ್ಕಾರವನ್ನು ಮಳೆಯಲ್ಲಿಯೇ ನಡೆಸಿದರು. ಮಳೆಯಲ್ಲಿ ಶವ ಸಂಸ್ಕಾರ ನೆರವೇರಿಸಿದ್ದು, ಈ ಕುರಿತು ಪಟ್ಟಣ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕುಟುಂಬಸ್ಥರು ಮತ್ತು ಸಮಾಜದವರು ಹೇಳಿದ್ದಾರೆ. ಲೋಕಾಪುರ ಪಟ್ಟಣದಲ್ಲಿ ಶವಾಗಾರದಲ್ಲಿ ಶೆಡ್ ಇಲ್ಲದ್ದರಿಂದ ಮಳೆಯಲ್ಲಿ ಸಾರ್ವಜನಿಕರು ಶವ ಸಂಸ್ಕಾರ ಮಾಡಿದರು.;Resize=(128,128))
;Resize=(128,128))
;Resize=(128,128))