ಸಾರಾಂಶ
ಬಿಸಿಲು, ಚಳಿ, ಗಾಳಿ ಎನ್ನದೇ ದಿನನಿತ್ಯ ಸೂರ್ಯಹುಟ್ಟುವ ಸಮಯದಲ್ಲೇ ಎದ್ದು ಕೆಲಸ ಮಾಡುವ ಕಾಯಕಯೋಗಿಗಳಾಗಿದ್ದು ಅವರ ನೋವು ನಲಿವಿಗೆ, ಕುಟುಂಬದ ನಿರ್ವಹಣೆಗೆ ಸರ್ಕಾರ ಮುಂದಾಗಬೇಕಾಗಿರುವುದು ಅನಿವಾರ್ಯ. ಆದ್ದರಿಂದ ಸಮ್ಮೇಳನ ನಡೆಸಲು ರಾಜ್ಯಾಧ್ಯಕ್ಷ ಶಂಭುಲಿಂಗರವರ ಆದೇಶದಂತೆ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಬಜೆಟ್ ಮುನ್ನ ಸರ್ಕಾರದ ಗಮನ ಸೆಳೆಯಲು ಮಾಡುತ್ತಿರುವ ಕಾರ್ಯಕ್ರಮ ವಿತರಕರ ಹಿತದೃಷ್ಠಿ ಕಾಯಲು ವಿತರಕರು ಒಗ್ಗೂಡಬೇಕು ಎಂದು ಕಿರಣ್ ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಮಾರ್ಚ್ ೨ರಂದು ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ನಡೆಸಲು ಮುಂದಾಗಿದ್ದು, ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕಿರಣ್‌ರವರ ನೇತೃತ್ವದಲ್ಲಿ ಜರುಗಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಿರಣ್ ಅವರು ಬಿಸಿಲು, ಚಳಿ, ಗಾಳಿ ಎನ್ನದೇ ದಿನನಿತ್ಯ ಸೂರ್ಯಹುಟ್ಟುವ ಸಮಯದಲ್ಲೇ ಎದ್ದು ಕೆಲಸ ಮಾಡುವ ಕಾಯಕಯೋಗಿಗಳಾಗಿದ್ದು ಅವರ ನೋವು ನಲಿವಿಗೆ, ಕುಟುಂಬದ ನಿರ್ವಹಣೆಗೆ ಸರ್ಕಾರ ಮುಂದಾಗಬೇಕಾಗಿರುವುದು ಅನಿವಾರ್ಯ. ಆದ್ದರಿಂದ ಸಮ್ಮೇಳನ ನಡೆಸಲು ರಾಜ್ಯಾಧ್ಯಕ್ಷ ಶಂಭುಲಿಂಗರವರ ಆದೇಶದಂತೆ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಬಜೆಟ್ ಮುನ್ನ ಸರ್ಕಾರದ ಗಮನ ಸೆಳೆಯಲು ಮಾಡುತ್ತಿರುವ ಕಾರ್ಯಕ್ರಮ ವಿತರಕರ ಹಿತದೃಷ್ಠಿ ಕಾಯಲು ವಿತರಕರು ಒಗ್ಗೂಡಬೇಕು. ಈ ನಿಟ್ಟಿನಲ್ಲಿ ಬೇರೆ ಬೇರೆ ಜಿಲ್ಲೆಯಿಂದ ಆಗಮಿಸುವ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆತಿಥ್ಯವನ್ನು ನಮ್ಮ ಜಿಲ್ಲೆಯ ಸದಸ್ಯರು ನಿರ್ವಹಿಸಬೇಕಾಗಿರುವುದರಿಂದ ಅಂದು ಬೆಳಗ್ಗೆ ೯ ಘಂಟೆಗೆ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮ, ತಿಂಡಿ ಊಟದ ವ್ಯವಸ್ಥೆ ಹಾಗೂ ವಿತರಕರ ಮಕ್ಕಳಿಗೆ ಕ್ರೀಡಾಕೂಟ, ಹಿರಿಯ ವಿತರಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ.
ಸಮ್ಮೇಳನದ ಸಮಿತಿಯ ನಿರ್ವಾಹಕರು ಅಂದು ಕಡ್ಡಾಯವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಮತ್ತು ಬೆಳಗ್ಗೆ ೮ ಗಂಟೆಗೆ ಚನ್ನರಾಯಪಟ್ಟಣದ ೪೦ ಅಡಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಆಗಮಿಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.