ವ್ಯಕ್ತಿಗೆ ಸಾವಿದೆ, ಮಠ ಮಾನ್ಯಗಳಿಗಲ್ಲ: ಕಿಲ್ಲೆ ಬೃಹನ್ಮಠ ಶ್ರೀ ಅಭಿಮತ

| Published : Dec 01 2024, 01:33 AM IST

ವ್ಯಕ್ತಿಗೆ ಸಾವಿದೆ, ಮಠ ಮಾನ್ಯಗಳಿಗಲ್ಲ: ಕಿಲ್ಲೆ ಬೃಹನ್ಮಠ ಶ್ರೀ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ತಾಲೂಕಿನ ಹೊಪಸೇಟೆಯ ಕೆಂಪಿನ ಮಠದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಸಾಂಗವಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಅನೇಕ ವರ್ಷಗಳ ಇತಿಹಾಸ ಹೊಂದಿರುವ ಹೊಸಪೇಟೆಯ ಕೆಂಪಿನ ಮಠದಲ್ಲಿ ಗತವೈಭವ ಮರುಕಳಿಸಿದೆ. ವ್ಯಕ್ತಿಗೆ ಸಾವಿದೆ. ಮಠ ಮಾನ್ಯಗಳಿಗಲ್ಲ. ಭಕ್ತರು ಕೆಂಪಿನ ಮಠವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಮನವಿ ಮಾಡಿದರು.ತಾಲೂಕಿನ ಹೊಸಪೇಟೆ ಗ್ರಾಮದ ಕೆಂಪಿನ ಮಠದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಕಾಲಗರ್ಭದಲ್ಲಿ ಎಷ್ಟೋ ಘಟನೆಗಳು ನಡೆಯುತ್ತಿರುತ್ತವೆ. ಶಕುನಿಯಿಂದ ಮಹಾಭಾರತಕ್ಕೆ ಮಹತ್ವ ಸಿಕ್ಕರೆ, ರಾಮಾಯಣದಲ್ಲಿ ರಾವಣ ಪ್ರವೇಶದಿಂದ ಮೆರುಗು ಬಂತು. ಕೊಂಡಿ ಮಂಚಣ್ಣ ಬಸವಣ್ಣನ ವಚನಗಳ ಮಂಥನವಾದಾಗಲೇ ಅದಕ್ಕೆ ನಿಜವಾದ ಅರ್ಥ ಸಿಕ್ಕಿತು. ಹಾಗೆಯೇ ಕೆಟ್ಟದ್ದಾಗಿದೆ ಎಂದು ಚಿಂತಿಸುವುದಕ್ಕಿಂತ ಅದರಿಂದ ನಾವು ಗಟ್ಟಿಯಾಗುವುದನ್ನು ಕಲಿಯಬೇಕು ಎಂದು ತಿಳಿಸಿದರು.ನವಲಕಲ್ ಮಠದ ಶ್ರೀ ಸೋಮನಾಥ ಸ್ವಾಮೀಜಿ ಮಾತನಾಡಿ, ಹಾನಗಲ್ ಕುಮಾರ ಸ್ವಾಮಿಗಳೇ ಖುದ್ದು ತಮ್ಮ ಸ್ವರೂಪದಲ್ಲಿ ಈ ಮಠಕ್ಕೆ ಉತ್ತರಾಧಿಕಾರಿಯಾಗಿ ಬಂದಿದ್ದಾರೆ. ಭಕ್ತರು ಮನಸು ಮಾಡಿದರೆ ಹೊಸಪೇಟೆಯಲ್ಲಿ ಮತ್ತೊಂದು ವಿಜಯನಗರ ಸಾಮ್ರಾಜ್ಯ ಸೃಷ್ಟಿಸಬಹುದು. ನೀಲಗಲ್ ಮಠದ ಶ್ರೀ ಡಾ. ಪಂಚಾಕ್ಷರಿ ಶಿವಾಚಾರ್ಯರು, ಸುವರ್ಣಗಿರಿ ವಿರಕ್ತಮಠದ ಶ್ರೀ ಮಹಾಲಿಂಗ ಶಿವಾಚಾರ್ಯರು, ಶ್ರೀ ಬೂದಿಬಸವ ಶಿವಾಚಾರ್ಯರು, ಕೆಂಪಿನ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಯದ್ದಲದೊಡ್ಡಿ ಶ್ರೀಗಳು, ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದ ನಿರಡಗುಂ ಮಠದ ಶ್ರೀ ಪಂಚಮಸಿದ್ದಲಿಂಗ ಶಿವಾಚಾರ್ಯರು, ಶ್ರೀ ಮಂಡಗಿರಿಯ ಕಲ್ಮಠ ಸಂಸ್ಥಾನದ ಶ್ರೀ ಗುರುಸಿದ್ಧ ದೇವರು ಸಾನ್ನಿಧ್ಯ ವಹಿಸಿದ್ದರು.ಮರ್ಚೆಡ್‌ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಯರಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹ್ಮದ್ ನಿಜಾಮುದ್ದೀನ್, ಈಶಾನ್ಯ ಕರ್ನಾಟಕ ವಾಲ್ಮೀಕಿ ನಾಯಕರ ಸಂಘದ ನಿರ್ದೇಶಕ ಶಿವರಾಜ್ ಬಿ. ಪಾಟೀಲ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.