ನಿಕ್ಷಿತಾ ಮತ್ತು ನಿತೇಶ ನಾಯ್ಕ ದಂಪತಿಗೆ 2 ವರ್ಷ 8 ತಿಂಗಳ ಗಂಡು ಮಗುವಿದೆ. ಮದುವೆಯಾದ ಬಳಿಕ ಕಳೆದ ಒಂದು ವರ್ಷದಿಂದ ಪತಿ ಹಾಗೂ ಅವರ ಮನೆಯವರು ಮಗಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಮಂಗಲಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಕಾರವಾರ: ತಾಲೂಕಿನ ಹೊಸಾಳಿ ಗ್ರಾಮದ ದುಮ್ಮನಶಿಟ್ಟಾದಲ್ಲಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಗಂಡನ ಮನೆಯವರ ಕಿರುಕುಳವೇ ಸಾವಿಗೆ ಕಾರಣ ಎಂದು ಮೃತಳ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪತಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ದುಮ್ಮನಶಿಟ್ಟಾದ ನಿಕ್ಷಿತಾ ಅಲಿಯಾಸ್ ಅಕ್ಷತಾ ನಾಯ್ಕ(34) ಮೃತಪಟ್ಟ ಮಹಿಳೆ. ಅವರ ತಾಯಿ ಮಂಗಲಾ ಮೂಡಂಗಿ ನೀಡಿದ ದೂರಿನ ಮೇರೆಗೆ ಪತಿ ನಿತೇಶ ನಾಯ್ಕ, ಅತ್ತೆ ರಾಧಾ ಹಾಗೂ ಪತಿಯ ಸಹೋದರ ಸತೀಶ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ನಿಕ್ಷಿತಾ ಮತ್ತು ನಿತೇಶ ನಾಯ್ಕ ದಂಪತಿಗೆ 2 ವರ್ಷ 8 ತಿಂಗಳ ಗಂಡು ಮಗುವಿದೆ. ಮದುವೆಯಾದ ಬಳಿಕ ಕಳೆದ ಒಂದು ವರ್ಷದಿಂದ ಪತಿ ಹಾಗೂ ಅವರ ಮನೆಯವರು ಮಗಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಮಂಗಲಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಮಗಳ ಸಾವಿಗೆ ಗಂಡನ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿರುವ ತಾಯಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಿತ್ತಾಕುಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.