ಸಾರಾಂಶ
ಮೃತರು ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಸುಮಾರು ನಾಲ್ಕೂವರೆ ಲಕ್ಷ ರು. ಸಾಲ ಪಡೆದಿದ್ದು ಹಾಗೂ ಸಂಘ ಸಂಸ್ಥೆಗಳಿಂದ, ಖಾಸಗಿ ವ್ಯಕ್ತಿಗಳಿಂದ ಸುಮಾರು 8 ಲಕ್ಷಗಳವರೆಗೆ ಸಾಲ ಪಡೆದಿದ್ದರು.
ರಾಮನಾಥಪುರ: ಹೆಣ್ಣೂರು ಕೊಂಗಳಲೆ ಗ್ರಾಮದ ಸೋಮಶೇಖರ ಬಿನ್ ಈರಯ್ಯ (46) ಸಾಲಬಾಧೆಯಿಂದ ಬೇಸತ್ತು ವಿಷ ಸೇವಿಸಿದ್ದ ಅವರನ್ನು ಅರಕಲಗೂಡು ತಾಲೂಕು ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು, ಇಲ್ಲಿನ ವೈದ್ಯರ ಸೂಚನೆ ಮೇರೆಗೆ ಹಾಸನ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಈರಯ್ಯ ಶುಕ್ರವಾರ ಸಂಜೆ ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಸುಮಾರು ನಾಲ್ಕೂವರೆ ಲಕ್ಷ ರು. ಸಾಲ ಪಡೆದಿದ್ದು ಹಾಗೂ ಸಂಘ ಸಂಸ್ಥೆಗಳಿಂದ, ಖಾಸಗಿ ವ್ಯಕ್ತಿಗಳಿಂದ ಸುಮಾರು 8 ಲಕ್ಷಗಳವರೆಗೆ ಸಾಲ ಪಡೆದಿದ್ದರು ಎಂಬುದಾಗಿ ಮೃತ ಕುಟುಂಬಸ್ಥರು ತಿಳಿಸಿದ್ದಾರೆ. ಮೃತರಿಗೆ ಒಂದು ಹೆಣ್ಣು, ಒಂದು ಗಂಡು ಮಗ ಇದ್ದು ಸ್ಥಳಕ್ಕೆ ತಾಲೂಕು ಕಚೇರಿಯ ಶಿರಸ್ತೇದಾರರಾದ ಸಿ.ಸ್ವಾಮಿ, ರಾಜಸ್ವ ನಿರೀಕ್ಷಕ ವಸಂತ್, ಪಿಡಿಒ ಹರೀಶ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.