ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಋಣಿ: ರಾಧಾಕೃಷ್ಣ ದೊಡ್ಡಮನಿ

| Published : Mar 29 2024, 12:49 AM IST

ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಋಣಿ: ರಾಧಾಕೃಷ್ಣ ದೊಡ್ಡಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಬೇರೆಯವರ ಬಗ್ಗೆ ಮಾತನಾಡುವುದಕ್ಕಿಂತ ನಮ್ಮ ಸರಕಾರದ ಸಾಧನೆ ಜನರಿಗೆ ತಿಳಿಸಿ ಮತ ಕೇಳಬೇಕು. ಕಲಬುರ್ಗಿ ಕ್ಷೇತ್ರಕ್ಕೆ ಇತಿಹಾಸವಿದೆ. ಹೆಸರಾಂತ ಮಹನೀಯರು ಇಲ್ಲಿ ಆಯ್ಕೆಯಾಗಿ ಹೋಗಿದ್ದಾರೆ. ನನ್ನನ್ನು ಈಗ ಅಭ್ಯರ್ಥಿಯಾಗಿ ಮಾಡಿದ್ದಾರೆ. ನೀವೆಲ್ಲ ನನಗೆ ಆರಿಸಿ ಕಳಿಸಿ ಎಂದು ಮನವಿ ಮಾಡಿದ್ರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರ್ಗಿ ಲೋಕಸಭೆ ಕ್ಷೇತ್ರದಿಂದ ಮೊದಲು ಲೋಕಸಭೆ ಸದ್ಯರಾದವರು ಸ್ವಾಮೀ ರಮಾನಂದ ತೀರ್ಥರು, ನಂತರದಲ್ಲಿ ವೀರೇಂದ್ರ ಪಾಟೀಲ್‌, ಧರಂಸಿಂಗ್‌, ಸಿಎಂ ಸ್ಟಿಫನ್‌ ಹೀಗೆ ಘಟಾನುಘಟಿಗಳೇ ಇಲ್ಲಿಂದ ಗೆದ್ದಿದ್ದಾರೆ. ಇಂತಹ ಪ್ರತಿಷ್ಠಿತ ಕಣದಿಂದ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷಕ್ಕೆ ತಾವು ಸದಾ ಋಣಿ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಹೇಳಿದರು.

ಕಲಬುರ್ಗಿಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.

ಬೇರೆಯವರ ಬಗ್ಗೆ ಮಾತನಾಡುವುದಕ್ಕಿಂತ ನಮ್ಮ ಸರಕಾರದ ಸಾಧನೆ ಜನರಿಗೆ ತಿಳಿಸಿ ಮತ ಕೇಳಬೇಕು. ಕಲಬುರ್ಗಿ ಕ್ಷೇತ್ರಕ್ಕೆ ಇತಿಹಾಸವಿದೆ. ಹೆಸರಾಂತ ಮಹನೀಯರು ಇಲ್ಲಿ ಆಯ್ಕೆಯಾಗಿ ಹೋಗಿದ್ದಾರೆ. ನನ್ನನ್ನು ಈಗ ಅಭ್ಯರ್ಥಿಯಾಗಿ ಮಾಡಿದ್ದಾರೆ. ನೀವೆಲ್ಲ ನನಗೆ ಆರಿಸಿ ಕಳಿಸಿ ಎಂದು ಮನವಿ ಮಾಡಿದ್ರು.

ಸಚಿವರಾದ ಪ್ರಿಯಾಂಕ್ ಖರ್ಗೆ ಮಾತನಾಡಿ, ಕಳೆದ ಸಲ ಖರ್ಗೆ ಅವರನ್ನು ಸೋಲಿಸಿ ಜಾಧವ್ ಅವರನ್ನು ಗೆಲ್ಲಿಸಿದ್ರು. ಜನರು ಕಲಬುರ್ಗಿ ಎಂಪಿಯನ್ನು ನಿರೀಕ್ಷಿಸಿದ್ದರು ಆದ್ರೆ ಸಿಕ್ಕಿದ್ದು ಚಿಂಚೋಳಿ ಎಂಪಿ. ಅವರು ೫ ವರ್ಷದಲ್ಲಿ ಏನು ಮಾಡಿದ್ದಾರೆಂದು ಪ್ರಶ್ನಿಸಿದರು.

ವಿಮಾನ ನಿಲ್ದಾಣ, ಹೈವೇ, ಜಯದೇವ್ ಎಲ್ಲ ಮಾಡಿದ್ದೆ ನಾವು. ಮೋದಿ ಏನು ಮಾಡಿದ್ದಾರೆ. ಮೋದಿ ಗ್ಯಾರಂಟಿ ಎನ್ನುತ್ತಾರೆ. ರೈತರ ಆತ್ಮಹತ್ಯೆ, ಬೆಲೆ ಏರಿಕೆ, ಆರ್ಥಿಕ ಅಸಮಾನತೆ ಮೋದಿ ಗ್ಯಾರಂಟಿಯಾಗಿದೆ. ಕಳೆದ ಸಲ ಖರ್ಗೆಯುವರನ್ನು ಸೋಲಿಸಿ ಕಲಬುರ್ಗಿ ಭವಿಷ್ಯ ಹಾಳು ಮಾಡಿಕೊಂಡಿದ್ದೇವೆ. ಈ ಸಲ ಹಾಗಾಗಬಾರದು ಎಂದರು.

ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ರಾಧಾಕೃಷ್ಣ ಜನರೊಂದಿಗೆ ಬೆರೆಯುವ ಸರಳ ವ್ಯಕ್ತಿಯಾಗಿದ್ದಾರೆ. ನಾವೆಲ್ಲ ಸೇರಿ ಅವರನ್ನು ಅಭ್ಯರ್ಥಿಯಾಗಿ ಮಾಡಿದ್ದೇವೆ. ನಾವು ನೀವೆಲ್ಲ ಸೇರಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾತನಾಡಿ, ಮಲ್ಲಿಕಾರ್ಜುನ್ ಖರ್ಗೆ ಅವ್ರು ಚುನಾವಣೆಗೆ ನಿಂತಿದ್ರೆ 2 ಲಕ್ಷ ಮತಗಳಿಂದ ಗೆಲ್ಲುತ್ತಿದ್ದರು, ಆದ್ರೆ ಅವ್ರಿಗೆ ದೇಶದ ಎಲ್ಲ ಕಡೆ ಕೆಲ್ಸ ಮಾಡಬೇಕು ಹಾಗಾಗಿ ನಿಂತಿಲ್ಲ. ಅವ್ರೇ ಇಲ್ಲಿ ಅಭ್ಯರ್ಥಿ ಎಂದು ತಿಳಿದು ನಾವು ರಾಧಾಕೃಷ್ಣರನ್ನ ಗೆಲ್ಲಿಸಬೇಕಿದೆ ಎಂದರು.

ಸಚಿವ ಶರಣಬಸಪ್ಪ ದರ್ಷನಾಪೂರ್, ಅತಿಯಾದ ಆತ್ಮವಿಶ್ವಾಸದಿಂದ ನಮಗೆ ಕಳೆದ ಸಲ ಸೋಲಾಯಿತು. ಈ ಸಲ ಚುನಾವಣೆ ಹಗುರವಾಗಿ ತೆಗೆದುಕೊಳ್ಳಬಾರದು ಎಂದರೆ, ಸಿಎಂ ಸಲಹೆಗಾರ ಬಿಆರ್ ಪಾಟೀಲ್ ವೈಚಾರಿಕ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆ ಚುನಾವಣೆಗೆ ನಿಂತಿಲ್ಲವಾದರೂ ಇಂಡಿಯಾ ಕೂಟದಿಂದ ಪ್ರ ಧಾನಿಯಾಗಲಿ ಎಂದರು.

ಎಂಎಲ್‌ಸಿ ತಿಪ್ಪಣ್ಣ ಕಮಕನುರು, ಅಲ್ಲಂಪ್ರಭು ಪಾಟೀಲ್‌, ಎಂವೈ ಪಾಟೀಲ್‌, ಬಾಬೂರಾವ ಚಿಂಚನ್‌ಸೂರ್‌, ರೇವುನಾಯಕ ಬೆಳಮಗಿ ಮಾತನಾಡಿ ರಾಧಾಕೃಷ್ಣ ಅವರು ಹೆಚ್ಚಿನ ಮತಗಳಿಂದ ಗೆಲ್ಲಲಿದ್ದಾರೆಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಡೇವಿಡ್ ಸಿಮಾಯನ್, ಭಾಗನಗೌಡ ಸಂಕನುರು ಇದ್ದರು.