ಮುಖ್ಯ ಅತಿಥಿ ಸಾಹಿತಿ ಸಂಶೋಧಕ ಡಾ. ಶ್ರೀವತ್ಸ ಎಸ್ ವಟಿ ನಮ್ಮ ಪರಂಪರೆಯ ದಾಸ ಸಾಹಿತ್ಯ ಪ್ರಕಾರಗಳ ಪರಿಚಯಕ್ಕಾಗಿ ನಡೆಸಿರುವ ಪ್ರಯತ್ನವನ್ನು ಮೆಚ್ಚಿ, ಸರಳವಾಗಿ ಸಮಗ್ರವಾಗಿ ರಚನೆ ಮಾಡಲ್ಪಟ್ಟಿರುವ ಪಠ್ಯಗಳ ವಿಷಯ ವಿಚಾರಗಳು ಮನನೀಯವಾಗಿದೆ. ಆಸಕ್ತರು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು. ಸಾಹಿತ್ಯಿಕವಾಗಿ ಇಂಥ ಪ್ರಯತ್ನಗಳು ಭಾಷಾ ಬೆಳವಣಿಗೆಗೂ ಪೂರಕ ಜ್ಞಾನ ವೃದ್ಧಿಗೂ ಸಹಕಾರಿ ಎಂದರು. ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಶ್ರೀ ಸುಧೀಂದ್ರ ಆಚಾರ್ಯರು ಬೇಲೂರು ವೈಕುಂಠ ದಾಸರ ನೆಲೆವೀಡಾಗಿದೆ. ಅನೇಕ ದಾಸವರೇಣ್ಯರು ಸಂಧಿಸಿದ ಕ್ಷೇತ್ರವಾಗಿದೆ. ಇಲ್ಲಿ ಈ ರೀತಿಯ ಕಾರ್ಯಕ್ರಮ ನಡೆಸುತ್ತಿರುವುದು ಸ್ವಾಗತ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು ಶ್ರೀ ಸತ್ಯಾತ್ಮತೀರ್ಥರಿಂದ ಸ್ಥಾಪಿತಗೊಂಡ ಸೌರಭ ಸಾಹಿತ್ಯ ವಿದ್ಯಾಲಯವು ಇಂದು ವಿಶ್ವದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳನ್ನು ಹೊಂದಿದ್ದು ದಾಸ ಸಾಹಿತ್ಯ ಪರಂಪರೆ ಆಚಾರ ವಿಚಾರಗಳ ಕುರಿತು ಅರಿವು ಮೂಡಿಸುವುದು ಮುಖ್ಯ ಗುರಿಯಾಗಿದೆ ಎಂದು ಸೌರಭ ದಾಸ ಸಾಹಿತ್ಯ ವಿದ್ಯಾಲಯ ಕೊಪ್ಪಳ ಅಧ್ಯಕ್ಷ ಹಾಗೂ ಪ್ರಾಂಶುಪಾಲರಾದ ಶ್ರೀ ಪ್ರಮೋದ್ ಆಚಾರ್ ಪೂಜಾರ್‌ ತಿಳಿಸಿದರು. ವಿದ್ಯಾಲಯದ ದಶಮಾನೋತ್ಸವ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನ ಮಠದ ಪ್ರವಚನ ಮಂದಿರದಲ್ಲಿ ನಡೆಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಆನ್ಲೈನ್ ಮೂಲಕ ಪಾಠ ಪ್ರವಚನಗಳನ್ನು ನೀಡಿ ಶಿಕ್ಷಣ ದೊರಕಿಸಿಕೊಡಲಾಗುತ್ತದೆ. ಕಲಿಕೆಯಲ್ಲಿ ಗಂಭಿರತೆ ಇರಬೇಕೆಂಬ ಉದ್ದೇಶದಿಂದ ಮಾತ್ರ ಪರೀಕ್ಷೆಗಳನ್ನು ವಿಶ್ವದಾದ್ಯಂತ ಏಕ ಕಾಲದಲ್ಲಿ ನಡೆಸಲಾಗುತ್ತದೆ, ಇದುವೇ ವೈಶಿಷ್ಟ ಎಂದು ಬಣ್ಣಿಸಿ, ಪರೀಕ್ಷೆ ಇಲ್ಲಿ ಸ್ವಯಂ ಕಲಿಕಾ ಮಾಪನವಾಗಿದ್ದು, ಇಲ್ಲಿ ಅನುತ್ತೀರ್ಣತೆಯ ಅಳುಕು ಇಲ್ಲದೆ ಜ್ಞಾನ ಸಾಧನೆ ಉದ್ದೇಶ ಮಾತ್ರ ಅಡಗಿದೆ ಎಂದರು. ನಮ್ಮ ಪರಂಪರೆಯಲ್ಲಿ ಯತಿ ವರೇಣ್ಯರು, ಹರಿದಾಸ ದಾಸಿಯರು ಸಾಕಷ್ಟು ಜನರಿದ್ದಾರೆ. ಅವರುಗಳ ಪರಿಚಯ, ಸಾಧನೆಗಳ ಅರಿವು ನಮ್ಮಲ್ಲಿ ಸಾಕಷ್ಟು ಇಲ್ಲ. ಇವುಗಳ ಪರಿಚಯವನ್ನು ಜನಸಾಮಾನ್ಯರಿಗೆ ಒದಗಿಸಿಕೊಡುವುದು ಈ ವಿದ್ಯಾಲಯದ ಗುರಿಯಾಗಿದೆ. ಎಲ್ಲರೂ ಈ ವಿದ್ಯಾಲಯದ ಕಾರ್ಯ ಚಟುವಟಿಯಲ್ಲಿ ಪಾಲ್ಗೊಂಡು ತಮ್ಮ ಜ್ಞಾನ ವನ್ನು ಸುಧಾರಿಸಿಕೊಂಡು ಪರಂಪರೆಯ ಅರಿವನ್ನು ಮಾಡಿಕೊಳ್ಳಬಹುದೆಂದು ಕರೆ ನೀಡಿದರು. ಮುಖ್ಯ ಅತಿಥಿ ಸಾಹಿತಿ ಸಂಶೋಧಕ ಡಾ. ಶ್ರೀವತ್ಸ ಎಸ್ ವಟಿ ನಮ್ಮ ಪರಂಪರೆಯ ದಾಸ ಸಾಹಿತ್ಯ ಪ್ರಕಾರಗಳ ಪರಿಚಯಕ್ಕಾಗಿ ನಡೆಸಿರುವ ಪ್ರಯತ್ನವನ್ನು ಮೆಚ್ಚಿ, ಸರಳವಾಗಿ ಸಮಗ್ರವಾಗಿ ರಚನೆ ಮಾಡಲ್ಪಟ್ಟಿರುವ ಪಠ್ಯಗಳ ವಿಷಯ ವಿಚಾರಗಳು ಮನನೀಯವಾಗಿದೆ. ಆಸಕ್ತರು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು. ಸಾಹಿತ್ಯಿಕವಾಗಿ ಇಂಥ ಪ್ರಯತ್ನಗಳು ಭಾಷಾ ಬೆಳವಣಿಗೆಗೂ ಪೂರಕ ಜ್ಞಾನ ವೃದ್ಧಿಗೂ ಸಹಕಾರಿ ಎಂದರು. ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಶ್ರೀ ಸುಧೀಂದ್ರ ಆಚಾರ್ಯರು ಬೇಲೂರು ವೈಕುಂಠ ದಾಸರ ನೆಲೆವೀಡಾಗಿದೆ. ಅನೇಕ ದಾಸವರೇಣ್ಯರು ಸಂಧಿಸಿದ ಕ್ಷೇತ್ರವಾಗಿದೆ. ಇಲ್ಲಿ ಈ ರೀತಿಯ ಕಾರ್ಯಕ್ರಮ ನಡೆಸುತ್ತಿರುವುದು ಸ್ವಾಗತ ಎಂದು ತಿಳಿಸಿದರು. ತಾಲೂಕು ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ಮಂಜುನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿ ಇಂದಿರಮ್ಮ, ಗಮಕಿ ನಳಿನ ವಾದಿರಾಜ, ಸುಜಾತ ಮರಳಿ ಹತ್ವಾರ ಮಾತನಾಡಿದರು. ಮಧ್ವ ಮಂಡಳಿ ಅಧ್ಯಕ್ಷ ರಘುಕುಮಾರ್, ಕಾರ್ಯದರ್ಶಿ ಕೇಶವ ಹತ್ವಾರ, ಸೌಮ್ಯ ನಾಯಕಿ ಗಮಕಶಾಲಾ ಪ್ರಾಚಾರ್ಯ ನವರತ್ನ ಎಸ್ ವಟಿ, ಮದ್ವಪತಿ ಭಜನಾ ಮಂಡಳಿ ಅಧ್ಯಕ್ಷ ಭಾರತೀ ಧನ್ಯ , ಪೂರ್ಣ ಪ್ರಜ್ಞ ವಿದ್ಯಾಕೇಂದ್ರದ ಕಾರ್ಯದರ್ಶಿ ಮುರಳಿ ಹತ್ವಾರ್ ಮತ್ತಿತರರು ಪಾಲ್ಗೊಂಡಿದ್ದರು.

ವಿದ್ಯಾಲಯದ ಸಂಚಾಲಕ ವಾಸುದೇವ ಧನ್ಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ, ನಿರೂಪಣೆ ಮಾಡಿದರು. ವಿದ್ಯಾಲಯದ ವಿವಿಧ ವರ್ಗಗಳಲ್ಲಿ ಕಲಿಕೆ ನಡೆಸಿ, ಉತ್ತೀರ್ಣತೆ ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.