ಚಿತ್ರನಟ ಗಣೇಶ್ ರಾವ್‌ರಿಂದ ಸಾರ್ಥಕ ಕೆಲಸ :ಶಾಸಕ ಆರ್ ನರೇಂದ್ರ

| Published : Feb 24 2025, 12:33 AM IST

ಚಿತ್ರನಟ ಗಣೇಶ್ ರಾವ್‌ರಿಂದ ಸಾರ್ಥಕ ಕೆಲಸ :ಶಾಸಕ ಆರ್ ನರೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ವೃದ್ದಾಶ್ರಮಗಳೇ ಹೆಚ್ಚುತ್ತಿರುವ ಈ ಸನ್ನಿವೇಶದಲ್ಲಿ ತಾವು ಹುಟ್ಟಿದ ಊರಿಗೆ, ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ಹೊಂದಿ ಗ್ರಾಮಸ್ಥರ ಸಹಕಾರ ಪಡೆದು ಶಾಲೆ ದತ್ತು ಪಡೆದು, ಬಸವ ಗದ್ದುಗೆ ನಿರ್ಮಿಸಿದ ಚಿತ್ರನಟ ಅವರ ಕಾರ್ಯವೈಖರಿ ಪ್ರಶಂಸನೀಯವಾದುದು ಎಂದು ಮಾಜಿ ಶಾಸಕ ಆರ್ ನರೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವೃದ್ದಾಶ್ರಮಗಳೇ ಹೆಚ್ಚುತ್ತಿರುವ ಈ ಸನ್ನಿವೇಶದಲ್ಲಿ ತಾವು ಹುಟ್ಟಿದ ಊರಿಗೆ, ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ಹೊಂದಿ ಗ್ರಾಮಸ್ಥರ ಸಹಕಾರ ಪಡೆದು ಶಾಲೆ ದತ್ತು ಪಡೆದು, ಬಸವ ಗದ್ದುಗೆ ನಿರ್ಮಿಸಿದ ಚಿತ್ರನಟ ಅವರ ಕಾರ್ಯವೈಖರಿ ಪ್ರಶಂಸನೀಯವಾದುದು ಎಂದು ಮಾಜಿ ಶಾಸಕ ಆರ್ ನರೇಂದ್ರ ಹೇಳಿದರು.

ಅವರು ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಸರ್ಕಾರಿ ಶಾಲೆ ದತ್ತು ಸ್ವೀಕಾರ ಮತ್ತು ಗ್ರಾಮದಲ್ಲಿ ಗುರುಮಲ್ಲೇಶ್ವರರ ಬಸವ ಗದ್ದುಗೆ ನಿರ್ಮಿಸಿದ ನೆನಪಿನಾರ್ಥ ಸಂಪ್ರೋಕ್ಷಣೋತ್ಸವ ಸಮಾರಂಭಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಇಂದು ಲಕ್ಷಾಂತರ ಮಂದಿ ಗ್ರಾಮ ತೊರೆದವರು ತಮ್ಮ ಹುಟ್ಟಿದ ಊರನ್ನೆ ಮರೆತಿದ್ದಾರೆ, ಜೊತೆಗೆ ತಂದೆ, ತಾಯಿ, ಗುರುಗಳನ್ನೆ ಮರೆತ ನಿದರ್ಶನಗಳಿವೆ. ಆದರೆ ಬೆಂಗಳೂರಿನಲ್ಲಿ ಚಿತ್ರನಟರಾಗಿ ಖ್ಯಾತರಾಗಿದ್ದರೂ ಸಹಾ ಹುಟ್ಟಿದ ಊರನ್ನು ಮರೆತಿಲ್ಲ, ಹಳೆಯ ಗುರುಗಳು, ಹಿತೈಷಿಗಳನ್ನು ಮರೆತಿಲ್ಲ, ತಮ್ಮ ತಂದೆ ತಾಯಿಯವರ ಹೆಸರಿನಲ್ಲಿ ಬಸವ ಗದ್ದುಗೆ ನಿರ್ಮಿಸಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಮುಂದಾಗಿರುವುದು ಹೆಮ್ಮೆ ಪಡುವಂತದ್ದಾಗಿದೆ ಎಂದರು. ತಾಲೂಕು ಅನೇಕ ಕಲಾವಿದರ ತವರೂರು, ನಮ್ಮವರೆ ಆದ ಎಸ್. ಮಹೇಂದರ್, ಮಹೇಶ್ ಬಾಬು, ಮಿಮಿಕ್ರಿ ಗೋಪಿ, ಚೇತನ್ ಸೇರಿದಂತೆ ಅನೇಕ ನಮ್ಮೂರ ಕೀತಿ೯ ಹೆಚ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ನಟರಾಗಿ ಗಣೇಶ ರಾವ್ ಉತ್ತಮ ಹೆಜ್ಜೆ ಇಟ್ಟಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮಧುವನಹಳ್ಳಿ ಶಿವಕುಮಾರ್ ಮಾತನಾಡಿ, ಹೊಂಡರಬಾಳು ಗ್ರಾಮ ಪುಟ್ಟಗ್ರಾಮವಾದರೂ ಸಹಾ ಇಲ್ಲಿರುವ ವಿವಿಧ ಕೋಮಿನ ಜನತೆ ಒಗ್ಗಟ್ಟಾಗಿದ್ದಾರೆ. ಈ ಗ್ರಾಮದಲ್ಲಿ ಓದಿದ ಗಣೇಶ್ ರಾವ್ ಅವರು ಹಲವು ವರುಷಗಳಿಂದಲೂ ಇಲ್ಲಿ ಸತ್ಕಾರ್ಯ ಮಾಡಿಕೊಂಡು ಬಂದು ಇಂದು ದೇಗುಲ ನಿರ್ಮಿಸಿ,ಸರ್ಕಾರಿ ಶಾಲೆ ದತ್ತು ಸ್ವೀಕಾರ ಮಾಡಿರುವುದು ಪುಣ್ಯದ ಕೆಲಸ ಎಂದರು. ನಟ ಗಣೇಶ್ ರಾವ್ ತಮ್ಮ ತಂದೆ ಹೆಸರಿನಲ್ಲಿ ನಿರ್ಮಿಸಿರುವ ಗುರುಮಲ್ಲೇಶ್ವರ ಬಸವಗದ್ದುಗೆಯನ್ನು ಸಾಲೂರು ಮಠಾಧ್ಯಕ್ಷರಾದ ಡಾ.ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ತಾಪಂನ ಮಾಜಿ ಸದಸ್ಯ ಸಿದ್ದಪ್ಪಾಜಿ, ಗ್ರಾಪಂ ಸದಸ್ಯ ಸಿದ್ದಪ್ಪಸ್ವಾಮಿ, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ವಾಸು, ಬಿ ಆರ್ ಸಿ ಮಹದೇವಕುಮಾರ್, ನಟ ಮಳವಳ್ಳಿ ಸಾಯಿಕೖಷ್ಣ, ರಾಷ್ಟ್ರೀಯ ವಾಲಿಬಾಲ್ ಪಟು ಸುರೇಶ್ ಸಿಂಧೆ, ವಲಯ ಅರಣ್ಯಾಧಿಕಾರಿ ಅನಂತರಾಜು, ಉಪ ವಲಯ ಅರಣ್ಯಾಧಿಕಾರಿ ಮಹೇಶ್, ಹಳ್ಳಿಕಾರ್ ಮಲ್ಲೇಶ್, ಬೆಂಗಳೂರಿನ ಖಾಸಗಿ ಸಂಸ್ಥೆಯ ಅಧ್ಯಕ್ಷ ಮನೋಜ್ ಕುಮಾರ್, ಚಿಕ್ಕತಾಂಡಶೆಟ್ಟಿ, ರಾಜಣ್ಣ, ಮಹದೇವಸ್ವಾಮಿ, ಪರಂಗುಬ್ಬಿ, ಚಲನಚಿತ್ರ ನಿರ್ದೇಶಕರುಗಳಾದ ವಿಕ್ಟರಿ ವಾಸು, ಕೋಲಾರ ನಾಗೇಶ್, ಓಂಕಾರ್ ಪುರುಷೋತ್ತಮ್, ಆನಂದ್, ವೆಂಕಟರಾಂ, ಹರ್ಷಪ್ಪ ಇನ್ನಿತರರಿದ್ದರು.

ಕೋಟ್....

ನಾನು ಹೊಂಡರಬಾಳು ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ನಿರ್ವಹಿಸಿ ನಿವೃತ್ತಿಯಾಗಿ ಇಂದಿಗೆ 32 ವರ್ಷವಾಗಿದೆ. ಈ ನಡುವೆ ಸಹ ಬಡ ಮಕ್ಕಳಿಗೆ ಶುಲ್ಕ ಪಾವತಿಸುವ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ. ನಟ ಗಣೇಶರಾವ್ ನನ್ನ ಶಿಷ್ಯ, ಆತನಿಗೆ ಪಾಠ ಹೇಳಿಕೊಟ್ಟು ಹಲವು ದಶಕಗಳೇ ಸಂದಿವೆ, ಹಾಗಿದ್ದರೂ ಸಹಾ ಪ್ರತಿವರ್ಷ ನನ್ನ ಯೋಗಕ್ಷೇಮ ವಿಚಾರಿಸಿ ಶಿಕ್ಷಕರ ದಿನಾಚರಣೆಗೆ ಶುಭಕೋರುವುದು ಮರೆತಿಲ್ಲ ಎಂದರು.

- ಲಕ್ಷ್ಮಣರಾವ್, ಹಿರಿಯ ನಿವೖತ್ತ ಶಿಕ್ಷಕರು