ಸಾರಾಂಶ
- ಪತ್ರಿಕಾ ದಿನಾಚರಣೆಗೆ ನಿರ್ಧಾರ: ಪತ್ರಕರ್ತ ಸಂಘ ಅಧ್ಯಕ್ಷ ವೀರೇಶ್ ಪ್ರಸಾದ್ ಮಾಹಿತಿ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜುಲೈ 20ರಂದು ಬೆಳಗ್ಗೆ 12 ಗಂಟೆಗೆ ಪಟ್ಟಣದ ಶ್ರೀ ಈಶ್ವರಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಪತ್ರಿಕಾ ದಿನ ಸಮಾರಂಭವನ್ನು ನಡೆಸಲು ಗುರುವಾರ ತಾಲೂಕು ಅಧ್ಯಕ್ಷ ವೀರೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧರಿಸಲಾಯಿತು.ಸಂಘದ ವತಿಯಿಂದ ಕಳೆದ ವರ್ಷದಿಂದ ಕೆಳದಿ ರಾಣಿ ಚನ್ನಮ್ಮಾಜಿ ಮಾಧ್ಯಮ ಪ್ರಶಸ್ತಿಯನ್ನು ನೀಡಲು ಆರಂಭಿಸಿದ್ದು, ಈ ವರ್ಷ ಸಂತೆಬೆನ್ನೂರು ಗ್ರಾಮ ನಿವಾಸಿ, ಹಿರಿಯ ಪತ್ರಕರ್ತ ಎಚ್.ವಿ. ನಟರಾಜ್ ಅವರಿಗೆ ಪ್ರಶಸ್ತಿ ನೀಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಪತ್ರಕರ್ತರ ಸಂಘದ ಕಚೇರಿಯ ಆಧುನೀಕರಣಕ್ಕೆ 2022ರಲ್ಲಿ ಈ ಹಿಂದಿನ ಸರ್ಕಾರದಿಂದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ₹5 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದರು. ಈ ಹಣ ಮತ್ತು ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಸಂಘದ ಕಚೇರಿಯನ್ನು ಆಧುನೀಕರಣಗೊಳಿಸಲಾಗಿದೆ ಎಂದರು.ಆಧುನೀಕರಣಗೊಂಡ ಸಂಘದ ಕಚೇರಿ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ ನೆರವೇರಿಸುವರು. ಪತ್ರಿಕಾ ದಿನಾಚರಣೆ ಸಮಾರಂಭದ ಉದ್ಘಾಟನೆಯನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನೆರವೇರಿಸುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿರೇಶ್ ಪ್ರಸಾದ್ ವಹಿಸುವರು ಎಂದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಹಿಮಾ ಜೆ. ಪಟೇಲ್, ದಾವಣಗೆರೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಫಕ್ರುದ್ದೀನ್ ಅವರನ್ನು ಆಹ್ವಾನಿಸಲು ಸಭೆ ತಿರ್ಮಾನಿಸಿತು.
ಸಮಾರಂಭದಲ್ಲಿ ಅಪಘಾತದಲ್ಲಿ ಮೃತರಾದ ಪತ್ರಕರ್ತ ರಾಜು ಅವರ ಪತ್ನಿ ರೇಖಾ ರಾಜು ಅವರನ್ನು ಸನ್ಮಾನಿಸಲು ನಿರ್ಧರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪ್ರಸನ್ನ ಸಂಘದ ಕಚೇರಿಯ ಆಧುನೀಕರಣಗೊಳಿಸಿದ ಜಮಾ-ಖರ್ಚು ವರದಿ ಮಂಡಿಸಿದರು.ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಸತೀಶ್ ಎಂ.ಪವಾರ್, ಬಾ.ರಾ. ಮಹೇಶ್, ಸದಸ್ಯರಾದ ಮಹಾರುದ್ರಪ್ಪ, ಟಿ.ಎನ್. ಜಗದೀಶ್, ಎಸ್.ಜೆ. ಕಿರಣ್, ಲಿಂಗರಾಜ್, ದೇವರಾಜ್, ರಘು, ಪುನೀತ್, ಶಿವಲಿಂಗ ಸ್ವಾಮಿ, ಕಾಶಿಸ್ವಾಮಿ, ಎಂ.ಅಣ್ಣೋಜಿ ರಾವ್, ಸಂತೋಷ್, ಅಲ್ತಾಫ್ ಸಭೆಯಲ್ಲಿ ಭಾಗವಹಿಸಿದ್ದರು. ಅಣ್ಣೋಜಿ ರಾವ್ ಸ್ವಾಗತಿಸಿ, ವಂದಿಸಿದರು.
- - - -11ಕೆಸಿಎನ್‌ಜಿ2:ಚನ್ನಗಿರಿ ತಾಲೂಕು ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ವೀರೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.