ಪ್ರಸಕ್ತ ಸಾಲಿನ ಗಣೇಶ ಚತುರ್ಥಿ ಸೆ.14ರಂದು ಪ್ರತಿಷ್ಠಾಪನೆಗೊಂಡು ಸೆ.18 ರಂದು ವಿಸರ್ಜನೆಗೊಳಿಸಲು ನಗರದ ಐತಿಹಾಸಿಕ ರಾಮಮಂದಿರದಲ್ಲಿ ನಡೆದ ಗಣೇಶ ಮಹಾ ಮಂಡಲ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
- ಬೀದರ್‌ನಲ್ಲಿ ಜರುಗಿದ ಮಹಾಮಂಡಲ ಸಭೆಯಲ್ಲಿ ಸರ್ವಾನುಮತಕನ್ನಡಪ್ರಭ ವಾರ್ತೆ ಬೀದರ್
ಪ್ರಸಕ್ತ ಸಾಲಿನ ಗಣೇಶ ಚತುರ್ಥಿ ಸೆ.14ರಂದು ಪ್ರತಿಷ್ಠಾಪನೆಗೊಂಡು ಸೆ.18 ರಂದು ವಿಸರ್ಜನೆಗೊಳಿಸಲು ನಗರದ ಐತಿಹಾಸಿಕ ರಾಮಮಂದಿರದಲ್ಲಿ ನಡೆದ ಗಣೇಶ ಮಹಾ ಮಂಡಲ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಗಣೇಶ ಮಹಾ ಮಂಡಳಿಯ ಗೌರವಾಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಅಧ್ಯಕ್ಷರಾಗಿ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿಯಾಗಿ ಬಾಬು ವಾಲಿಯವರನ್ನು ಆಯ್ಕೆ ಮಾಡಲಾಯಿತು.
ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಬಾಬು ವಾಲಿ ಮಾತನಾಡಿ ಈ ವರ್ಷದ ವೇದಿಕೆಗೆ ಪ್ರತಿ ವರ್ಷ ತಮ್ಮದೇ ಆದ ಕೊಡುಗೆ ನೀಡುತ್ತಿದ್ದ ಪ್ರಕಾಶ ನಂದಗೌಳಿ, ನಾಗಶೆಟ್ಟಿ ಧರಂಪೂರೆ ಅವರ ಹೆಸರು ಇಡಬೇಕೆಂಬ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲಾ ಪದಾಧಿಕಾರಿಗಳು ಮತ್ತು ಸಾರ್ವಜನಿಕ ಗಣೇಶ ಮಂಡಳಿಯ ಅಧ್ಯಕ್ಷರು ಸದಸ್ಯರು ಸಮ್ಮತಿ ನೀಡಿದರು.ಐದು ದಿನಗಳ ಗಣೇಶ ಪ್ರತಿಷ್ಠಾಪನೆ ನಡುವೆ ಸೆ.17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಿದ್ದು, ಅಂದು ಎಲ್ಲಾ ಸಾರ್ವಜನಿಕ ಗಣೇಶ ಮಂಡಳಿಗಳು ಧ್ವಜಾರೋಹಣ ನಡೆಸಬೇಕು, ಮತ್ತು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ್ಯಗೊಳಿಸಲು ಹೋರಾಡಿದ ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸಾರ್ವಜನಿಕರಲ್ಲಿ ಒಗ್ಗಟ್ಟು ಮೂಡಿಸಲು ದೇಶಾದ್ಯಂತ ಗಣೇಶ ಚತುರ್ಥಿ ಆಚರಣೆ ಹುಟ್ಟುಹಾಕಿದ ಬಾಲ ಗಂಗಾಧರ್ ತಿಲಕ್ ಅವರ ಭಾವಚಿತ್ರವನ್ನು ತಪ್ಪದೇ ಅಳವಡಿಸಬೇಕು ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಪಾಟೀಲ ಗಾದಗಿ ಮಾತನಾಡಿ, ಈ ವರ್ಷ ಪ್ರತಿ ವರ್ಷಗಿಂತಲೂ ಅದ್ದೂರಿಯಾಗಿ ಆಚರಿಸೋಣ, ಮೆರವಣಿಗೆ ದಿನದಂದು ಎಲ್ಲಾ ಗಣೇಶ ಮಂಡಳಿಗಳು ಸಮಯಕ್ಕೆ ಸರಿಯಾಗಿ ಗಣೇಶಗಳನ್ನು ತರಬೇಕು ಎಂದರು.ಸಭೆಯ ಅಧ್ಯಕ್ಷತೆ ನಂದಕೀಶೋರ ವರ್ಮಾ ವಹಿಸಿದರು. ಗಣೇಶ ಮಹಾ ಮಂಡಳಿಯ ಉಪಾಧ್ಯಕ್ಷರಾಗಿ ಈಶ್ವರ ಸಿಂಗ್ ಠಾಕೂರ್, ರೇವಣಸಿದ್ದಪ್ಪಾ ಜಲಾದೆ, ದೀಪಕ್ ವಾಲಿ ಮತ್ತಿತರರು, ಕಾರ್ಯದರ್ಶಿಯಾಗಿ ಸುಭಾಷ ಮಡಿವಾಳ, ಖಜಾಂಚಿಯಾಗಿ ರಜನೀಶ ವಾಲಿ ಆಯ್ಕೆಯಾದರು.
ಚೌಬಾರಾ ಬಳಿಯ ಸ್ವಾಗತ ಸಮಿತಿಯ ಆಧ್ಯಕ್ಷರಾಗಿ ನಂದಕೀಶೋರ್ ವರ್ಮಾ ಅವರನ್ನು ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಭೂಷಣ ಪಾಠಕ್, ಕಾರ್ಯದರ್ಶಿಯಾಗಿ ಸುಭಾಷ ಚೋಳಕರ, ಚಂದ್ರಶೇಖರ ಗಾದಾ, ವಿಶಾಲ ಪ್ರಕಾಶ್ ನಂದಗೌಳಿ ಅವರನ್ನು ಆಯ್ಕೆ ಮಾಡಲಾಯಿತು.ನಗರ ಅಲಂಕಾರ ಸಮಿತಿ ಅಧ್ಯಕ್ಷರಾಗಿ ಹಣಮಂತ ಬುಳ್ಳಾ,ಮೆರವಣಿಗೆ ಸಮಿತಿ ಗೌರವಾಧ್ಯರಾಗಿ ಸೂರ್ಯಕಾಂತ ಶೆಟಕಾರ, ಅಧ್ಯಕ್ಷರಾಗಿ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿಯಾಗಿ ಶಶಿ ಹೊಸಳ್ಳಿ ಆಯ್ಕೆ ಮಾಡಲಾಯಿತು.
ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಸ್ವಾಗತಿಸಿ ವಂದಿಸಿದರು.ಗಣೇಶ ಭೋಸ್ಲೆ ನಿರೂಪಿಸಿದರು.--
ಚಿತ್ರ 19ಬಿಡಿಆರ್56ಬೀದರಿನಲ್ಲಿ ಗಣೇಶ ಮಹಾ ಮಂಡಲ ಸಭೆ ಬುಧವಾರ ಜರುಗಿತು.
