ಬೀದರ್‌ನಲ್ಲಿ ಗಣೇಶ ಉತ್ಸವ ಅದ್ದೂರಿ ಆಚರಣೆಗೆ ನಿರ್ಧಾರ: ಈಶ್ವರ ಖಂಡ್ರೆ

| Published : Jul 28 2025, 12:30 AM IST

ಬೀದರ್‌ನಲ್ಲಿ ಗಣೇಶ ಉತ್ಸವ ಅದ್ದೂರಿ ಆಚರಣೆಗೆ ನಿರ್ಧಾರ: ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಐತಿಹಾಸಿಕ ರಾಮಮಂದಿರದಲ್ಲಿ ಭಾನುವಾರ ಗಣೇಶ ಉತ್ಸವ ವಿಜೃಂಭಣೆಯಿಂದ ಆಚರಿಸಲು ಗಣೇಶ ಮಹಾ ಮಂಡಳಿ ಸಭೆ ಸೇರಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ನಗರದ ಐತಿಹಾಸಿಕ ರಾಮಮಂದಿರದಲ್ಲಿ ಭಾನುವಾರ ಗಣೇಶ ಉತ್ಸವ ವಿಜೃಂಭಣೆಯಿಂದ ಆಚರಿಸಲು ಗಣೇಶ ಮಹಾ ಮಂಡಳಿ ಸಭೆ ಸೇರಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಈ ವರ್ಷದ ಗಣೇಶ ಮಹಾ ಮಂಡಳಿಯ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗಣೇಶ ಉತ್ಸವದ ಗೌರವ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ, ಅಧ್ಯಕ್ಷರಾಗಿ ನಗರಸಭೆ ಸದಸ್ಯರಾದ ಚಂದ್ರಶೇಖರ ಪಾಟೀಲ್‌ ಗಾದಗಿ, ಪ್ರಧಾನ ಕಾರ್ಯದರ್ಶಿಯಾಗಿ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬಾಬು ವಾಲಿ ಅವರನ್ನು ನೇಮಕ ಮಾಡಲಾಯಿತು.

ಪ್ರಸಕ್ತ ಸಾಲಿನ ಗಣೇಶ ಮಹಾ ಮಂಡಳ ಪದಾಧಿಕಾರಿಗಳಲ್ಲಿ ಸಚಿವ ಈಶ್ವರ ಖಂಡ್ರೆ ಗೌರವಾಧ್ಯಕ್ಷರು, ಚಂದ್ರಶೇಖರ ಪಾಟೀಲ್‌ ಗಾದಗಿ ಅಧ್ಯಕ್ಷರು, ಬಾಬು ವಾಲಿ ಪ್ರಧಾನ ಕಾರ್ಯದರ್ಶಿ, ಈಶ್ವರಸಿಂಗ್‌ ಠಾಕೂರ, ರೇವಣ್ಣಸಿದ್ದಪ್ಪ ಜಲಾದೆ, ಜಯರಾಜ ಖಂಡ್ರೆ, ದೀಪಕ್‌ ವಾಲಿ, ರಾಜು ಚಿದ್ರಿ, ಮಹೇಶ ಪಾಲಂ, ಬಸವರಾಜ ಪವಾರ, ಸತೀಶ ಮೊಟ್ಟಿ, ಸುನೀಲ ದಳವೆ, ಮನೋಹರ ದಂಡೆ, ನರೇಶ ಗೌಳಿ, ಗೋರಖನಾಥ ಗೌಳಿ ಎಲ್ಲರೂ ಉಪಾಧ್ಯಕ್ಷರಾಗಿರುತ್ತಾರೆ.

ಡಾ. ರಜನೀಶ ವಾಲಿ ಖಜಾಂಚಿಯಾಗಿರುತ್ತಾರೆ. ಸುಭಾಷ ಮಡಿವಾಳ, ವೀರಶೆಟ್ಟಿ ಪಾಟೀಲ್‌ ನೌಬಾದ, ಭರತ ಶೆಟಕಾರ್‌, ಅರುಣ ಬಸವನಗರ, ಮಹೇಶ್ವರ ಸ್ವಾಮಿ, ನಿಲೇಶ ರಕ್ಷಾಳ, ವಿರೇಶ ಸ್ವಾಮಿ, ಸುನೀಲ ದಳವೆ, ಶ್ರೀಮಂತ ಸಪಾಟೆ, ನವೀನ್‌ ರೋಷನ ವರ್ಮಾ, ಗಣೇಶ ಬೋಸ್ಲೆ, ಮುನ್ನಾ ಆರ್ಯ, ರಾಜಾರಾಮ ಚಿಟ್ಟಾ, ದೇವೇಂದ್ರ ಎಮ್ಮೆಕರ್‌, ಸನ್ನಿ ಪಾಟೀಲ್‌ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು.

ಸ್ವಾಗತ ಸಮಿತಿ ಅಧ್ಯಕ್ಷರಾಗಿ ನಂದ ಕಿಶೋರ್ ವರ್ಮಾ, ಸುಭಾಷ ಚೋಳಕರ್ ಹಾಗೂ ಚಂದ್ರಶೇಖರ ಗಾದಾ ಕಾರ್ಯದರ್ಶಿ, ನಗರ ಅಲಂಕಾರ ಸಮಿತಿ ಅದ್ಯಕ್ಷರಾಗಿ ಹಣಮಂತ ಬುಳ್ಳಾ, ಮೆರವಣಿಗೆ ಸಮಿತಿ ಗೌರವಾಧ್ಯಕ್ಷರಾಗಿ ಸೂರ್ಯಕಾಂತ ಶೆಟಕಾರ, ಅಧ್ಯಕ್ಷರಾಗಿ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿಯಾಗಿ ಶಶಿ ಹೊಸಳ್ಳಿ, ನವೀನ ಚಿಟ್ಟಾ, ಆನಂದ ಘಂಟೆ, ಕೈಲಾಶ ಕಾಜಿ, ಸಂಜು ಜೀರ್ಗೆ, ನಾಗರಾಜ ಹುಲಿ ಹಾಗೂ ಕಲ್ಯಾಣ ರಾವ್‌ ಬಿರಾದರ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು.