ದ್ವೈತ ಮತ ಸಂಸ್ಥಾಪಕ, ಕನ್ನಡಿಗರಾದ ಮಧ್ವಾಚಾರ್ಯರ ಜಯಂತಿ ಆಚರಿಸಲು ಮುಂದಾಗಿ ಅಧಿಕೃತ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕಲಬುರಗಿ ಜಿಲ್ಲಾ ಬ್ರಾಹ್ಮಣ ಸಂಘಟನೆ, ಸತ್ಯಾತ್ಮ ಸೇನೆ ಮುಖಂಡರು ಸ್ವಾಗತಿಸಿ, ಇದು ಸಕಲ ಸನಾತನ ಸಂಸ್ಕೃತಿಯ ಸಜ್ಜನ ಸಮುದಾಯಕ್ಕೆ ಸಂತಸ ತಂದಿದೆ ಎಂದು ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿದ್ವೈತ ಮತ ಸಂಸ್ಥಾಪಕ, ಕನ್ನಡಿಗರಾದ ಮಧ್ವಾಚಾರ್ಯರ ಜಯಂತಿ ಆಚರಿಸಲು ಮುಂದಾಗಿ ಅಧಿಕೃತ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕಲಬುರಗಿ ಜಿಲ್ಲಾ ಬ್ರಾಹ್ಮಣ ಸಂಘಟನೆ, ಸತ್ಯಾತ್ಮ ಸೇನೆ ಮುಖಂಡರು ಸ್ವಾಗತಿಸಿ, ಇದು ಸಕಲ ಸನಾತನ ಸಂಸ್ಕೃತಿಯ ಸಜ್ಜನ ಸಮುದಾಯಕ್ಕೆ ಸಂತಸ ತಂದಿದೆ ಎಂದು ಶ್ಲಾಘಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಂಘದ ಮುಖಂಡ, ಉತ್ತರಾದಿ ಮಠಾಧಿಕಾರಿ ರಾಮಾಚಾರ್ ಘಂಟಿ, ಪಂ. ಗುರುಮದ್ವಾಚಾರ್ಯ ನವಲಿ, ಪಾಂಡುರಂಗ ದೇಶಮುಖ ಅವರು, ಭಾರತೀಯ ಸನಾತನ ಧರ್ಮ, ತತ್ತ್ವಶಾಸ್ತ್ರ, ಆಧ್ಯಾತ್ಮಿಕತೆ ಹಾಗೂ ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಕೊಡುಗೆ ನೀಡಿರುವ ಕನ್ನಡದ ಆಚಾರ್ಯ ಜಗದ್ಗುರು ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಎಂಬ ಬಹು ದಿನಗಳ ಬೇಡಿಕೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಂದಿಸಿ ಆದೇಶ ಹೊಡಿಸಿರುವುದನ್ನು ಇಡೀ ಸಮಾಜ ಸ್ವಾಗತಿಸಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಡಾ. ಅಜಯ್ ಸಿಂಗ್, ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರು ಪಾಟಲ್ ಸಹಿತ ಎಲ್ಲಾ ಸಚಿವರು ಶಾಸಕರು ನಮ್ಮ ಬೇಡಿಕೆಗೆ ಬೆಂಬಲಿಸಿರೋದು ಖುಷಿ ಕೊಟ್ಟಿದೆ ಎಂದು ಮುಖಂಡರು ಹೇಳಿದರು.ಸೆ.16 ರಂದು ಕಲಬುರಗಿಯಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದಿಂದ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮುಖಾಂತರ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಭೇಟಿ ಮಾಡಿಮ್ವರ ಜಯಂತಿ ಆಚರಣೆಗೆ ಮನವಿ ಸಲ್ಲಿಸಿದ್ದೇವು. ಕೇವಲ 25 ದಿನದಲ್ಲೇ ನಮ್ಮ ಮನವಿಗೆ ಸ್ಪಂದನೆ ದೊರಕಿರುವುದು ಸಂತಸ ತಂದಿದೆ ಎಂದರು.ಪ್ರತಿ ವರ್ಷ ವಿಜಯದಶಮಿ ದಿನವೇ ಮಧ್ವ ಜಯಂತಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಅ. 21 ರಂದು ಮಧ್ವ ಜಯಂತಿ ಇದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈಗಾಗಲೇ ಅಧಿಕೃತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಧ್ವ ಜಯಂತಿ ಆಚರಿಸುವ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ನಿರ್ಧಾರವನ್ನು ದೇಶಾದ್ಯಂತವಿರುವ ವಿಪ್ರ ಸಮಾಜ ಸ್ವಾಗತಿಸಿದೆ.
*ಕನ್ನಡ ನೆಲದಲ್ಲೇ ಅವತರಿಸಿದ ಆಚಾರ್ಯರು: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂ.ಗುರುಮಧ್ವಾಚಾರ್ಯ ನವಲಿ, ಈಶ ದಾಸ ಭಾವದಿಂದ ಭಕ್ತಿಯ ಪರಾಕಾಷ್ಟೆಯೇ ಮುಕ್ತಿಗೆ ಸಾಧನವೆಂಬ ಪರಮ ಸಿದ್ದಾಂತವನ್ನು ಪ್ರಚಾರ ಮಾಡಿದ ಕನ್ನಡದ ನೆಲದಲ್ಲಿಯೇ ಅವತರಿಸಿದ ಆಚಾರ್ಯ ಮಧ್ವರ ಜಯಂತಿಯು ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆಚರಿಸಲು ಆದೇಶ ಬಂದದ್ದು ಸಕಲ ಸನಾತನ ಸಂಸ್ಕೃತಿಯ ಸಜ್ಜನ ಸಮುದಾಯಕ್ಕೆ ಸಂತಸ ನೀಡಿದೆ ಎಂದರು.ಶ್ರೀ ಮಧ್ವಾಚಾರ್ಯರ ತತ್ತ್ವ, ವಿಚಾರಧಾರೆ ಮತ್ತು ಆದರ್ಶಗಳನ್ನು ಮಧ್ವ ಪರಂಪರೆಯ ಆಚಾರ್ಯರು, ಮಠಾಧೀಶರು ಹಾಗೂ ಭಕ್ತರು ಇಂದಿಗೂ ನಿರಂತರವಾಗಿ ಸಮಾಜದಲ್ಲಿ ಪ್ರಚಾರಪಡಿಸುತ್ತಿದ್ದಾರೆ. ಅವರು ಪ್ರತಿಪಾದಿಸಿದ ದ್ವೈತ ಸಿದ್ಧಾಂತವು ಕರ್ನಾಟಕದ ಮಾತ್ರವಲ್ಲದೆ ದೇಶದಾದ್ಯಂತ ಧಾರ್ಮಿಕ ಹಾಗೂ ತತ್ತ್ವಶಾಸ್ತ್ರೀಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದು ಆಚಾರ್ಯರ ತತ್ವಗಳ ಮಹತ್ವ ವಿವರಿಸಿದರು.ಆಚಾರ್ಯರ ಪರಂಪರೆಯು ಧಾರ್ಮಿಕ ಜ್ಞಾನ, ನೈತಿಕ ಮೌಲ್ಯಗಳು, ಆಧ್ಯಾತ್ಮಿಕ ಚಿಂತನೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇಂತಹ ಮಹನೀಯಕ ಜಯಂತಿ ಸರ್ಕಾರ ಆಚಿಸಲು ಮುಂದಾಗಿರೋದು ನಾವು ಸ್ವಾಗತಿಸುತ್ತೇವೆ ಎಂದು ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಪಾಂಡುರಂಗ ದೇಶಮುಖ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸತ್ಯಾತ್ಮ ಸೇನಾ ಉಪಾಧ್ಯಕ್ಷ ವಿನೂತ ಕುಲಕರ್ಣಿ, ಶ್ರೀನಿವಾಸ ದೇಸಾಯಿ, ಪ್ರಶಾಂತ ಕುಲಕರ್ಣಿ, ಜಯತೀರ್ಥ ಜೋಶಿ ನಾರಾಯಣ ಪೂಜಾರ, ಲಕ್ಷ್ಮಾಣಚಾರ್ಯ ಗಂಗಾವತಿ, ರಘೋತ್ತಮ ಘಂಟಿ, ರಾಘವೇಂದ್ರ ಕೋಗನೂರ್ ಇದ್ದರು.ಶಾಸಕ ಅಲ್ಲಂಪ್ರಭು ಪಾಟೀಲ್ ಸ್ವಾಗತ: ಪ್ರತಿವರ್ಷ ವಿಜಯದಶಮಿ ದಿನ ಬರುವ ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ರಾಜ್ಯಮಟ್ಟದಲ್ಲಿ ಅಧಿಕೃತವಾಗಿ ಆಚರಿಸುವಂತೆ ಆದೇಶ ಹೊರಬಿದ್ದಿರುವುದನ್ನು ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಸ್ವಾಗತಿಸಿದರು. ಈ ಐತಿಹಾಸಿಕ ಆದೇಶಕ್ಕೆ ಕಾರಣರಾದ ಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಡಾ. ಅಜಯ್ಸಿಂಗ್ ಅವರಿಗೆ ಅಭಿನಂದನೆ ಸಲ್ಲಿಸಿದರು.ಜಯಂತಿಯ ಅಂಗವಾಗಿ ಸರ್ಕಾರದ ವತಿಯಿಂದ ಅಧಿಕೃತ ಕಾರ್ಯಕ್ರಮ ಆಯೋಜಿಸಿ, ಶ್ರೀ ಮಧ್ವಾಚಾರ್ಯರ ಜೀವನ, ತತ್ತ್ವಶಾಸ್ತ್ರ ಹಾಗೂ ಕೊಡುಗೆಗಳ ಕುರಿತು ವಿಚಾರ ಸಂಕಿರಣ, ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ, ಅವರ ಮಹಾನ್ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಂಬಂಧಿಸಿದ ಇಲಾಖೆ ಕ್ರಮ ಕೈಗಳ್ಳಲಿದೆ ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.