ಕೊಡಗಿನಲ್ಲಿ ತುಳು ಸಮ್ಮೇಳನ ನಡೆಸಲು ನಿರ್ಧಾರ

| Published : Jan 16 2024, 01:48 AM IST

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ತುಳುಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಂದೇ ವೇದಿಕೆಯಡಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ ತುಳು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯ ಎಲ್ಲ ತುಳುಭಾಷಿಕ ಸಮುದಾಯದ ಮುಖಂಡರು ಹಾಗೂ ತುಳು ಭಾಷಿಕ ಜನಾಂಗ ಭಾಂದವರು ಸಮ್ಮೇಳನದಲ್ಲಿ ತೊಡಗಿಸಿಕೊಳ್ಳುವಂತೆ ಬಿ.ಬಿ.ಐತ್ತಪ್ಪ ರೈ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾ, ತಾಲೂಕು ಮತ್ತು ಹೋಬಳಿ ಸಮಿತಿಯ ಪದಾಧಿಕಾರಿಗಳ ಸಭೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತುಳು ಸಮ್ಮೇಳನ ನಡೆಸುವ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ಕೊಡಗು ಜಿಲ್ಲೆಯಲ್ಲಿ ತುಳುಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಂದೇ ವೇದಿಕೆಯಡಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ ತುಳು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯ ಎಲ್ಲ ತುಳುಭಾಷಿಕ ಸಮುದಾಯದ ಮುಖಂಡರು ಹಾಗೂ ತುಳು ಭಾಷಿಕ ಜನಾಂಗ ಭಾಂದವರು ಸಮ್ಮೇಳನದಲ್ಲಿ ತೊಡಗಿಸಿಕೊಳ್ಳುವಂತೆ ಬಿ.ಬಿ.ಐತ್ತಪ್ಪ ರೈ ಮನವಿ ಮಾಡಿದರು.

ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ತುಳುನಾಡಿನ ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳ ಮೆರವಣಿಗೆಯನ್ನು ಆಕರ್ಷಣೀಯಗೊಳಿಸಬೇಕು. ತುಳುನಾಡಿನ ಪ್ರಸಿದ್ಧ ಕಲಾವಿದರನ್ನು ಆಹ್ವಾನಿಸುವ ಮೂಲಕ ಸಮ್ಮೇಳನವನ್ನು ವರ್ಣರಂಜಿತಗೊಳಿಸಬೇಕು. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತುಳುಭಾಷಿಕ ಸಮುದಾಯದ ಪ್ರಮುಖರ ಮತ್ತು ಜಿಲ್ಲೆಯ ತುಳುಕೂಟದ ಪದಾಧಿಕಾರಿಗಳ ಸಭೆ ನಡೆಸಿ ಸಮಾಲೋಚನೆ ಮಾಡಬೇಕು. ಮುಂದಿನ ಸಭೆಯಲ್ಲಿ ಸಮ್ಮೇಳನದ ಯಶಸ್ಸಿಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲು ಸಭೆ ನಿರ್ಧಾರ ಕೈಗೊಂಡಿತು.

ತುಳುವೆರ ಜನಪದ ಕೂಟದ ಜಿಲ್ಲಾ ಉಪಾಧ್ಯಕ್ಷ ಬಿ.ವೈ.ಆನಂದ ರಘು, ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಸಂಘಟನಾ ಕಾರ್ಯದರ್ಶಿ ರಾಜೀವ್ ಲೋಚನ, ಖಜಾಂಚಿ ಪ್ರಭು ರೈ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಕೆ.ಜಿ.ರಾಮಕೃಷ್ಣ, ಮಡಿಕೇರಿ ತಾಲೂಕು ಸಂಚಾಲಕ ಪ್ರಸಾದ್ ಬಿಳಿಗೇರಿ, ಸದಸ್ಯರಾದ ಸಂಧ್ಯಾ ಗಣೇಶ್ ರೈ, ಲೀಲಾ ಶೇಷಮ್ಮ, ಕವಿತಾ ಕುಂದರ್, ಬಿ.ಎಸ್.ಜಯಪ್ಪ, ಕೆ.ಆರ್.ವಿಜಯ, ಜಗದೀಶ್ ಆಚಾರ್ಯ, ಗಿರೀಶ್ ರೈ, ಚಂದ್ರಶೇಖರ್ ಕುಲಾಲ್, ಸಾವಿತ್ರಿ, ಪ್ರಕಾಶ್ ಆಚಾರ್ಯ, ಅಶೋಕ ಆಚಾರ್ಯ, ಸುಧೀರ್, ಬಿ.ಎಸ್.ಪುರುಷೊತ್ತಮ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು. ಪಿ.ಎಂ.ರವಿ ನಿರೂಪಿಸಿದರು. ಬಿ.ಎಸ್.ಜಯಪ್ಪ ವಂದಿಸಿದರು.