ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿಮೂಲ್ಕಿ ಸಮುದಾಯ ಅರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ನಗರ ಪಂಚಾಯಿತಿ ಮಾಸಿಕ ಸಭೆಯಲ್ಲಿ ಚರ್ಚೆ ನಡೆಯಿತು.ಕಟ್ಟದಂಗಡಿ ಬಳಿಯ ನಾರಾಯಣಗುರು ಪಾರ್ಕ್, ನ.ಪಂ. ಕಚೇರಿ ಹಿಂಭಾಗದ ಪಾರ್ಕ್ ಮತ್ತು ಗಾಂಧಿ ಮೈದಾನದಲ್ಲಿ ರಾತ್ರಿ ವೇಳೆ ಮಧ್ಯ ಮತ್ತು ಗಾಂಜಾ ವ್ಯಸನಿಗಳ ಹಾವಳಿ ಕಂಡುಬಂದಿದೆ. ಪೋಲಿಸ್ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧ್ಯಕ್ಷ ಸತೀಶ್ ಅಂಚನ್ ಮತ್ತು ಮುಖ್ಯಾಧಿಕಾರಿ ಮಧುಕರ್ ಕೆ. ಪೋಲಿಸ್ ಇಲಾಖೆಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ಸಹಾಯಕ ಉಪ ನಿರೀಕ್ಷಕ ಹರಿಶೇಖರ್ ಮಾತನಾಡಿ, ಸಮಸ್ಯೆಯ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುವುದುದೆಂದು ತಿಳಿಸಿದರು.ನಗರ ಪಂಚಾಯಿತಿ ವ್ಯಾಪ್ತಿಯ ವಿಜಯ ಸನ್ನಿಧಿ ಸಂಕೀರ್ಣ ಮತ್ತು ಕೊಕ್ಕರಕಲ್ ಬಳಿ ಸರ್ವಿಸ್ ರಸ್ತೆ ಚರಂಡಿಗಳಲ್ಲಿ ತ್ಯಾಜ್ಯ ನೀರು ಹರಿಯುತ್ತಿದ್ದು, ದುರ್ವಾಸನೆಯಿಂದ ನಡೆದಾಡಲೂ ಕಷ್ಟ. ಸೂಕ್ತ ಕ್ರಮಕ್ಕಾಗಿ ಸದಸ್ಯರಾದ ಯೋಗೀಶ್ ಕೋಟ್ಯಾನ್ ಮತ್ತು ಬಾಲಚಂದ್ರ ಕಾಮತ್ ಆಗ್ರಹಿಸಿದರು.ಮಂಗಳೂರಿನಿಂದ ಬಪ್ಪನಾಡುವರೆಗೆ ವಾರದೊಳಗೆ ಸರ್ಕಾರಿ ಶಟಲ್ ಬಸ್ಸು ಸೇವೆ ಆರಂಭಗೊಳ್ಳಲಿದೆ ಎಂದು ಸದಸ್ಯೆ ವಿಮಲಾ ಪೂಜಾರಿ ಮಾಹಿತಿ ನೀಡಿದರು. ಲ್ಕಿಯಿಂದ ಮೂಡುಬಿದಿರೆ ಮತ್ತು ಕಟೀಲು, ಬಜಪೆಗೂ ಬಸ್ಸು ಸೇವೆ ಆರಂಭಿಸುವಂತೆ ಮನವಿ ಮಾಡಲಾಯಿತು.ಮೂಲ್ಕಿ ನಗರಕ್ಕೆಮಂಜೂರಾದ ಅಗ್ನಿಶಾಮಕ ದಳವು ಉಳ್ಳಾಲಕ್ಕೆ ಮಂಜೂರಾದ ಬಗ್ಗೆ ಸದಸ್ಯರಾದ ಪುತ್ತುಬಾವ, ಯೋಗೀಶ್ ಕೋಟ್ಯಾನ್, ಬಾಲಚಂದ್ರ ಕಾಮತ್, ವಿಮಲಾ ಪೂಜಾರಿ ಮಾತನಾಡಿ ಸೂಕ್ತ ಉತ್ತರ ನೀಡುವಂತೆ ಆಗ್ರಹಿಸಿದರು. ಸಭೆಯಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ವಾಣಿಜ್ಯ ಮಳಿಗೆಗಳಿಗೆ ಕಳೆದ ಸಭೆಯಲ್ಲಿ ಮಾಸಿಕ ದರ ನಿಗದಿಪಡಿಸಿ ನಿರ್ಣಯ ಕೈಗೊಂಡುರು.36ಲಕ್ಷ ಗುರಿ ಹೊಂದಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಮತ್ತು ನಪಂ ಸದಸ್ಯರಿಂದ ತೀವ್ರ ವಿರೋಧ ಬಂದ ಬಳಿಕ ಮಾಸಿಕ ದರ ಮರುನಿಗದಿಪಡಿಸಲಾಗಿದ್ದು, ರು. 12ಲಕ್ಷ ಸಂಗ್ರಹದ ಗುರಿ ಹೊಂದಲಾಗಿದೆ. ಹೊಟೇಲ್‌ಗೆ ರು. 300(ಮಾಸಿಕ), ಕ್ಯಾಂಟೀನ್, ಬೇಕರಿ, ಫಾಸ್ಟ್‌ಫುಡ್, ಆಸ್ಪತ್ರೆ, ಮೆಡಿಕಲ್, ಹಾರ್ಡ್‌ವೇರ್ ಶಾಪ್, ಸರ್ವಿಸ್ ಸ್ಟೇಶನ್, ಗ್ಯಾರೇಜ್, ಅಟೋಮೊಬೈಲ್ ಅಂಗಡಿ, ಹೂವಿನ ಅಂಗಡಿ, ಮರದ ಮಿಲ್, ಗೋದಾಮು, ಗುಡಿ ಕೈಗಾರಿಕೆಗಳಿಗೆ ಮಾಸಿಕ ರು.150, ವಸತಿ ಗೃಹ, ವೈನ್ ಶಾಪ್, ರೆಸ್ಟೋರೆಂಟ್, ಬಟ್ಟೆ ಶೋರೂಮ್, ಸೂಪರ್ ಮಾರ್ಕೆಟ್‌ಗಳಿಗೆ ಮಾಸಿಕ ರು.600, ತರಕಾರಿ ಅಂಗಡಿ, ಹಣ್ಣಿನ ಅಂಗಡಿಗಳಿಗೆ ಮಾಸಿಕ ರು.300, ಮಾಂಸದ ಅಂಗಡಿ, ಬಟ್ಟೆ ಮಾರಾಟ, ಚಪ್ಪಲಿ ಅಂಗಡಿ, ಟೀ ಸ್ಟಾಲ್, ಕ್ಲಿನಿಕ್, ಐಸ್‌ಕ್ರೀಮ್-ಜ್ಯೂಸ್ ಅಂಗಡಿ, ಇತರ ಉದ್ದಿಮೆಗಳಿಗೆ ಮಾಸಿಕ ರು. 100ನಿಗದಿಪಡಿಸಿ ಸರ್ವನುಮತದಿಂದ ಅಂಗೀಕರಿಸಲಾಯಿತು.
ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಕೇಂದ್ರವಾಗಿ ಮಾಡುವಂತೆ ಮೂಲ್ಕಿ ನಗರ ಪಂಚಾಯಿತಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.