ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆ: ಹರ್ಷ

| Published : Jan 20 2024, 02:00 AM IST

ಸಾರಾಂಶ

ಗುಳೇದಗುಡ್ಡ: 12ನೇ ಶತಮಾನದಲ್ಲಿ ಇಡಿ ಮಾನವಕುಲದ ಒಳಿತಿಗಾಗಿ, ಸಮಾನತೆಗಾಗಿ ಶ್ರಮಪಟ್ಟ ವಿಶ್ವ ಜ್ಯೋತಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಪಟ್ಟಣದ ಶ್ರೀ ಗುರುಸಿದ್ದೇಶ್ವರ ಬೃಹನ್ನಠದ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಅಭಿನಂದಿಸಿದ್ದಾರೆ.

ಗುಳೇದಗುಡ್ಡ: 12 ನೇ ಶತಮಾನದಲ್ಲಿ ಇಡಿ ಮಾನವಕುಲದ ಒಳಿತಿಗಾಗಿ, ಸಮಾನತೆಗಾಗಿ ಶ್ರಮಪಟ್ಟ ವಿಶ್ವ ಜ್ಯೋತಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಪಟ್ಟಣದ ಶ್ರೀ ಗುರುಸಿದ್ದೇಶ್ವರ ಬೃಹನ್ನಠದ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಅಭಿನಂದಿಸಿದ್ದಾರೆ.

ಪಟ್ಟಣದ ಬಸವಕೇಂದ್ರದ ಅಧ್ಯಕ್ಷ ಎಚ್.ಎಸ್.ಹುಳಿಪಲ್ಲೇದ, ಕಾರ್ಯದರ್ಶಿ ಮುರುಗೇಶ ಶೇಖಾ, ಪ್ರೊ.ಸಿದ್ದಲಿಂಗಪ್ಪ ಪರಗುಂಡಿ, ಎಂ.ಪಿ. ನೀಲಕಂಠಮಠ, ಪುತ್ರಪ್ಪ ಬೀಳಗಿ, ಮಹಾಲಿಂಗಪ್ಪ ಕರನಂದಿ, ಶ್ರೀಕಾಂತ ಗಡೇದ ಹಾಗೂ ಸುರೇಶ ರಾಜನಾಳ ಇತರೆ ಸದಸ್ಯರು ಶುಕ್ರವಾರ ಸಭೆ ಸೇರಿ ವಿಶ್ವಗುರು ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ರಾಜ್ಯ ಸರ್ಕಾರಕ್ಕೆ ಅಭಿನಂದಿಸಿದರು.