ಅಧಿಕಾರದ ಒತ್ತಡದಿಂದ ಮಾನವೀಯ ಮೌಲ್ಯ ಕುಸಿತ: ನ್ಯಾ.ಜಯಂತಕುಮಾರ್‌

| Published : Apr 07 2024, 01:47 AM IST

ಅಧಿಕಾರದ ಒತ್ತಡದಿಂದ ಮಾನವೀಯ ಮೌಲ್ಯ ಕುಸಿತ: ನ್ಯಾ.ಜಯಂತಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರದ ಒತ್ತಡಗಳಿಗೆ ಸಿಲುಕಿ ಪ್ರಾಮಾಣಿಕತೆ, ಮೌಲ್ಯ, ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ. ಜಯಂತಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಅಧಿಕಾರದ ಒತ್ತಡಗಳಿಗೆ ಸಿಲುಕಿ ಪ್ರಾಮಾಣಿಕತೆ, ಮೌಲ್ಯ, ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ. ಜಯಂತಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.ತುಮಕೂರು ವಿವಿಯು ಶನಿವಾರ ಆಯೋಜಿಸಿದ್ದ ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಮಗ್ರತೆಯನ್ನು ಸಾಧಿಸುವ ಬದುಕನ್ನುತೊರೆದು, ನೀತಿ-ನಿಯಮ, ಮಾನವೀಯ ಮೌಲ್ಯಗಳನ್ನು ಮರೆತು ಅಶಿಸ್ತಿನ ಬದುಕನ್ನು ಬಾಳುತ್ತಿದ್ದೇವೆ ಎಂದರು.ಕೆಲ ಕಾಲ ಮಾತನ್ನು ನಿಲ್ಲಿಸಿ ಪರಿಸರ ಹಾಗೂ ಸಮಾಜದ ನೋವು, ಅಸಮಾಧಾನ ಮತ್ತು ಸಮಸ್ಯೆಗಳನ್ನು ಆಲಿಸೋಣ.ಆಗಷ್ಟೇ ಅರಿವಿಗೆ ಬಾರದ ಎಷ್ಟೋ ಸಂಗತಿಗಳು ವಿದ್ಯೆಯ ರೂಪದಲ್ಲಿ ನಮ್ಮನ್ನು ತಲುಪಲಿವೆ ಎಂದು ತಿಳಿಸಿದರು.ಮಾನವೀಯ ಮೌಲ್ಯಗಳಿಗೆ ಬೆಲೆ ಕಟ್ಟಿದಾಗ ಮಾತ್ರ ಬದುಕಿನ ಮೌಲ್ಯಗಳು ಕುಸಿಯುತ್ತವೆ. ಕೇವಲ ಮಾಹಿತಿ ಪಡೆಯುವ ವಿದ್ಯೆಗಿಂತ ಅರಿವು ಅನುಭವಕ್ಕೆ ಬರುವ ವಿದ್ಯೆಯನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಮಾತನಾಡಿ, ವಕೀಲರಾದವರು ಕಕ್ಷಿದಾರನಿಗೆ ಮಾತನಾಡಲು ಅವಕಾಶ ಕೊಟ್ಟು ಸಮಸ್ಯೆಗಳನ್ನು ಸಂಪೂರ್ಣವಾಗಿ ಆಲಿಸಬೇಕು.ನ್ಯಾಯಾಧೀಶರು ತೀರ್ಪು ಪ್ರಕಟಿಸುವ ಬದಲು ನ್ಯಾಯ ಒದಗಿಸಬೇಕು ಎಂದರು.ಬಸವಣ್ಣಅವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ವಚನವೇ ಇಂದಿನ ಕಾನೂನು ಅಧ್ಯಯನದ ಪುಸ್ತಕಗಳಾಗಿವೆ ಎಂದರು.ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಜ್ಞಾನ ಅಧ್ಯಯನದಿಂದ ಬರುತ್ತದೆ.ಮೌಲ್ಯಗಳು ಅನುಭವದಿಂದ ಬರುತ್ತವೆ. ಶಿಕ್ಷಕರಿಂದ ಮೌಲ್ಯಾಧಾರಿತ ಶಿಕ್ಷಣ ಸಿಗುವುದು ಅಪರೂಪವಾಗಿದೆ ಎಂದರು.ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಎ. ಮೋಹನ್‌ರಾಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಹಣಕಾಸು ಅಧಿಕಾರಿಪ್ರೊ. ಪಿ. ಪರಮಶಿವಯ್ಯ ಉಪಸ್ಥಿತರಿದ್ದರು.