ಸಾರಾಂಶ
ದೇವಾಲಯ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಕೆ.ಆರ್.ನಾಗರಾಜ್ ಶೆಟ್ಟಿ, ಅಧ್ಯಕ್ಷ ಕೆ.ಆರ್.ಚಂದ್ರಶೇಖರ್, ಕಾರ್ಯದರ್ಶಿ ವಿದ್ಯಾರ್ಥಿ ಭಂಡಾರ ಸುರೇಶ್, ಖಜಾಂಚಿ ಕೆ. ಆರ್.ಮಹೇಶ್ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಸೇವಾ ಸೌಲಭ್ಯಗಳನ್ನು ಭಕ್ತರಿಗೆ ಕಲ್ಪಿಸಿಕೊಟ್ಟಿದ್ದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೇಮಗಿರಿ ರಸ್ತೆಯ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಆಷಾಢ ಮಾಸದ 4ನೇ ಶುಕ್ರವಾರದ ಅಂಗವಾಗಿ ದೇವಿಗೆ ರುದ್ರಾಕ್ಷಿಗಳಿಂದ ಅಲಂಕಾರ ಮಾಡಿ ಲೋಕಕಲ್ಯಾಣಾರ್ಥವಾಗಿ ಪೂಜೆ ಸಲ್ಲಿಸಲಾಯಿತು.ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪೂಜೆಯಲ್ಲಿ ಭಾಗವಹಿಸಿ ಚೌಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ದೇವಾಲಯ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಕೆ.ಆರ್.ನಾಗರಾಜ್ ಶೆಟ್ಟಿ, ಅಧ್ಯಕ್ಷ ಕೆ.ಆರ್.ಚಂದ್ರಶೇಖರ್, ಕಾರ್ಯದರ್ಶಿ ವಿದ್ಯಾರ್ಥಿ ಭಂಡಾರ ಸುರೇಶ್, ಖಜಾಂಚಿ ಕೆ. ಆರ್.ಮಹೇಶ್ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಸೇವಾ ಸೌಲಭ್ಯಗಳನ್ನು ಭಕ್ತರಿಗೆ ಕಲ್ಪಿಸಿಕೊಟ್ಟಿದ್ದರು.ಪಟ್ಟಣದ ವಿವಿಧ ಬಡಾವಣೆಗಳು ಮತ್ತು ತಾಲೂಕಿನ ಹಲವು ಭಾಗಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ತಾಯಿ ಚೌಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಧನ್ಯತಾಭಾವವನ್ನು ಮೆರೆದರು.
ದೇವಾಲಯದ ಪ್ರಧಾನ ಅರ್ಚಕ ವೇದಬ್ರಹ್ಮ ರವಿಶಾಸ್ತ್ರಿ ಮಾತನಾಡಿ, ಜುಲೈ 24ರ ಭೀಮನ ಅಮಾವಾಸ್ಯೆಯಂದು, ತಾಯಿ ಶ್ರೀಚೌಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಕೋರಿದರು.