ಜಿಲ್ಲೆಯಲ್ಲಿ ರಕ್ತ ಸಂಗ್ರಹಣೆ ಪ್ರಮಾಣ ಕುಸಿತ

| Published : May 21 2024, 12:40 AM IST

ಸಾರಾಂಶ

ರಕ್ತ ಸಂಗ್ರಹಣೆಯ ಪ್ರಮಾಣದ ಗಣನೀಯವಾಗಿ ಕುಸಿದಿದ್ದು, ಕೆಲವು ತುರ್ತು ಸಂದರ್ಭದಲ್ಲಿ ಅಗತ್ಯ ಗುಂಪಿನ ರಕ್ತದ ಕೊರತೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ರಕ್ತದಾನಕ್ಕೆ ಮುಂದಾಗಲಿ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಜಿಲ್ಲೆಯಲ್ಲಿ ರಕ್ತದ ಅಭಾವ ಹೆಚ್ಚಾಗುದ್ದು ಬೇಡಿಕೆಗೆ ತಕ್ಕಷ್ಟು ರಕ್ತ ಸಂಗ್ರಹಣೆ ಸಾಧ್ಯವಾಗುತ್ತಿಲ್ಲ. ಕೋವಿಡ್ ನಂತರ ಹಲವಾರು ಮಂದಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಹೀನರಾಗಿದ್ದು ರಕ್ತದಾನ ಮಾಡಲು ಹಿಂಜರಿಯುತ್ತಿರುವುದೇ ರಕ್ತದಾನ ಹಿನ್ನೆಡೆಗೆ ಕಾರಣ ಎಂದು ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಕಾರ್ಯದರ್ಶಿ ನಾರಾಯಣ ರೆಡ್ಡಿ ಹೇಳಿದರು.

ತೆಲುಗು ಚಿತ್ರನಟ ಜ್ಯೂನಿಯರ್ ಎನ್‌ಟಿಆರ್‌ರ ಹುಟ್ಟುಹಬ್ಬದ ಪ್ರಯುಕ್ತ ಯಂಗ್ ಟೈಗರ್ ಎನ್‌ಟಿಆರ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ರಕ್ತ ಸಂಗ್ರಹಣೆ ಪ್ರಮಾಣ ಕುಸಿತ

ರಕ್ತ ಸಂಗ್ರಹಣೆಯ ಪ್ರಮಾಣದ ಗಣನೀಯವಾಗಿ ಕುಸಿದಿದ್ದು, ಕೆಲವು ತುರ್ತು ಸಂದರ್ಭದಲ್ಲಿ ಅಗತ್ಯ ಗುಂಪಿನ ರಕ್ತದ ಕೊರತೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ರಕ್ತದಾನದ ಮಹತ್ವವನ್ನು ಅರಿತು ಪ್ರಾಣವನ್ನು ಉಳಿಸುವ ಈ ಕಾಯಕದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸುವುದರ ಜೊತೆಗೆ ಮತ್ತೊಬ್ಬರನ್ನು ಈ ಮಹತ್ತರ ಕಾರ್ಯದತ್ತ ಪ್ರೇರಿಸುವಂತಹ ಕಾರ್ಯಕ್ಕೆ ಮುಂದಾಗಬೇಕೆAದು ಕರೆಯಿತ್ತರು. ಸಂಘ ಸಂಸ್ಥೆಗಳು, ಸ್ವಸಹಾಯ ಸಂಘ, ಶ್ರೀಶಕ್ತಿ ಸಂಘಗಳು ಇದರತ್ತ ಗಮನ ಹರಿಸಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಸಲ್ಲಿಸಬೇಕಾಗಿದೆ ಎಂದರು.

ಯಂಗ್ ಟೈಗರ್ ಎನ್‌ಟಿಆರ್ ಅಭಿಮಾನಿಗಳ ಸಂಘದ ಬಾಲಾಜಿ ಮಾತನಾಡಿ ಆರೋಗ್ಯವಂತ ವ್ಯಕ್ತಿ ಪ್ರತಿ ೩ ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡುವುದರ ಮೂಲಕ ದೇಹವನ್ನು ಮತ್ತಷ್ಟು ಚೈತನ್ಯಗೊಳಿಸಬಹುದಾಗಿದೆ. ರಕ್ತದಾನದಿಂದ ಮತ್ತೊಬ್ಬರ ಪ್ರಾಣ ಉಳಿಸಿದ ಆತ್ಮತೃಪ್ತಿ ನಮ್ಮದಾಗುವುದರಿಂದ ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕೆಂದರು.

110 ಯೂನಿಟ್‌ ರಕ್ತ ಸಂಗ್ರಹ

ಶಿಬಿರದಲ್ಲಿ ೧೧೦ ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಈ ಸಂದರ್ಭದಲ್ಲಿ .ಶ್ರೀಕಾಂತ್, ಜಗದೀಶ್, ಪರಮೇಶ್, ಸುಹಾಸ್, ಭಾರ್ಗವ್, ಮಧು ಮತ್ತಿತರರು ಉಪಸ್ಥಿತರಿದ್ದರು.