22ರಂದು ಪಂಚಮುಖಿ ಆಂಜನೇಯ ದೇವಸ್ಥಾನದ ಲೋಕಾರ್ಪಣೆ

| Published : Jan 17 2024, 01:46 AM IST

ಸಾರಾಂಶ

ಬಾಗಲಕೋಟೆ: ನಗರದ ಮುಚಖಂಡಿ ಕ್ರಾಸ್ ನ ಪಂಚಮುಖಿ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಹಾಗೂ ಭವ್ಯ ಶೋಭಾಯಾತ್ರೆ, ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಜ.18 ರಿಂದ 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜ18ರಂದು ಬೆಳಗ್ಗೆ 10 ಗಂಟೆಗೆ ಕೊತ್ತಲೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಹೊರಡಲಿದ್ದು, ಕಲಾತಂಡಗಳು, ಜನಪದ ನೃತ್ಯಗಳು ಭಾಗವಹಿಸಲಿವೆ. ಜ.22ರಂದು ಬೆಳಗ್ಗೆ 11 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆ ನೆರವೇರಲಿದೆ ಎಂದು ಮಾರುತೇಶ್ವರ ದೇವಸ್ಥಾನದ ಸ್ವಾಗತ ಸಮಿತಿ ಅಧ್ಯಕ್ಷ ರವಿ ಕುಮಟಗಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ಮುಚಖಂಡಿ ಕ್ರಾಸ್ ನ ಪಂಚಮುಖಿ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಹಾಗೂ ಭವ್ಯ ಶೋಭಾಯಾತ್ರೆ, ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಜ.18 ರಿಂದ 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾರುತೇಶ್ವರ ದೇವಸ್ಥಾನದ ಸ್ವಾಗತ ಸಮಿತಿ ಅಧ್ಯಕ್ಷ ರವಿ ಕುಮಟಗಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ18ರಂದು ಬೆಳಗ್ಗೆ 10 ಗಂಟೆಗೆ ಕೊತ್ತಲೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಹೊರಡ ಲಿದ್ದು, ಟಾಂಗಾ ಸ್ಟ್ಯಾಂಡ್, ಪೊಲೀಸ್ ಗೇಟ್, ಎಂ.ಜಿ. ರೋಡ, ಬಸವೇಶ್ವರ ಸರ್ಕಲ್‌, ಕುಮಟಗಿ ಶೋ ರೂಂ, ಶಕ್ತಿ ಟಾಕೀಜ್‌, ವಾಸವಿ ಟಾಕೀಜ್‌, ಮಹಾವೀರ ರಸ್ತೆ ಕ್ರಾಸ್ ಕೆರೂಡಿ ಆಸ್ಪತ್ರೆ ರೋಡ, ಲಕ್ಷ್ಮೀ ನಗರ ಕ್ರಾಸ್, ಮುಚಖಂಡಿ ಕ್ರಾಸ್ ರೋಡ, ಮೂಲಕ ಮಾರುತಿ ಸರ್ಕಲ್‌ ಗೆ ತೆರಳಿದ್ದು, ಯಾತ್ರೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾತಂಡಗಳು, ಜನಪದ ನೃತ್ಯಗಳು ಭಾಗವಹಿಸಲಿವೆ ಎಂದರು.

ಜ.22ರಂದು ಬೆಳಗ್ಗೆ 11 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆ ನೆರವೇರಲಿದ್ದು, ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಬೂದೀಶ್ವರ ಸ್ವಾಮೀಜಿ, ಹುಚ್ಚೇಶ್ವರ ಸ್ವಾಮೀಜಿ, ಡಾ.ನೀಲಕಂಠ ಶಿವಾಚಾರ್ಯರು, ಡಾ.ಶಿವಕುಮಾರ ಶಿವಾನಂದ ಸ್ವಾಮೀಜಿ, ಪಂಡಿತ ಶ್ರೀ ಬಿಂದು ಮಾಧವಾಚಾರ್ಯ ನಾಗಸಂಪಿಗೆ, ಮೌನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶ್ರೀ ಮಾರುತೇಶ್ವರ ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಟಗೇರಿ ಅಧ್ಯಕ್ಷತೆ ವಹಿಸುವರು. ಸಚಿವ ಆರ್.ಬಿ. ತಿಮ್ಮಾಪುರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಎಚ್.ವೈ. ಮೇಟಿ, ಪಿ.ಎಚ್. ಪೂಜಾರ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಎಸ್.ಆರ್.ಪಾಟೀಲ ಪಾಲ್ಗೊಳ್ಳುವರು.

ಮಾರುತೇಶ್ವರ ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಟಗೇರಿ ಮಾತನಾಡಿ, ಅಯೋಧ್ಯೆಯಲ್ಲಿ ರಾಷ್ಟ್ರ ಪುರುಷ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯ ಶುಭ ಘಳಿಗೆಯಲ್ಲಿಯೇ ಇಲ್ಲಿಯೂ ಪಂಚಮುಖಿ ಹನುಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಆರ್. ಶಿಂಧೆ, ಕಾರ್ಯದರ್ಶಿ ಅರುಣ ಲೋಕಾಪೂರ, ಸ್ವಾಗತ ಸಮಿತಿ ಉಪಾಧ್ಯಕ್ಷ ಸಂತೋಷ ಹೊಕ್ರಾಣಿ, ಕಾರ್ಯದರ್ಶಿ ಅಶೋಕ ಮುತ್ತಿನಮಠ, ಸದಸ್ಯರಾದ ಶಿವುಕುಮಾರ ಮೇಲ್ನಾಡ, ವಿಜಯ ಸುಲಾಖೆ, ರಾಜು ಗೌಳಿ ಉಪಸ್ಥಿತರಿದ್ದರು.