ಸಾರಾಂಶ
ರೈತರ ಜೀವನಾಡಿಯಾದ ತುಂಗಭದ್ರಾ ನದಿಯಲ್ಲಿ ಸದಾ ನೀರು ಹರಿದರೆ ಜನಜಾನುವರುಗಳಿಗೆ ತುಂಬಾ ಅನುಕೂಲವಾಗಲಿದೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹತ್ತಾರು ದಿನಗಳಿಂದ ಚಿಕ್ಕಮಗಳೂರು, ಶಿವಮೊಗ್ಗದಾದ್ಯಂತ ವ್ಯಾಪಕ ಸುರಿದ ಮಳೆಯಿಂದ ಹಾಗೂ ತುಂಗಾ ಜಲಾಶದಿಂದ ತುಂಗಭದ್ರಾ ನದಿಗೆ ನೀರು ಬಿಟ್ಟದ್ದರಿಂದ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆ ಹೊನ್ನಾಳಿ ತಾಲೂಕು ಬಿಜೆಪಿ ಮುಖಂಡರು ಗುರುವಾರ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದರು.ಬಿಜೆಪಿ ಮುಖಂಡ ಎ.ಬಿ.ಹನಮಂತಪ್ಪ ಮಾತನಾಡಿ, ಕಳೆದ ವರ್ಷ ಮಳೆ ಇಲ್ಲದೆ ರೈತರು ಕಂಗಲಾಗಿದ್ದರು, ಆದರೆ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಒಳ್ಳೆ ಮಳೆಯಾಗಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಕಾಣುತ್ತಿದೆ. ರೈತರ ಜೀವನಾಡಿಯಾದ ತುಂಗಭದ್ರಾ ನದಿಯಲ್ಲಿ ಸದಾ ನೀರು ಹರಿದರೆ ಜನಜಾನುವರುಗಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಹಲವಾರು ದಿನಗಳ ಕಾಲ ಧಾರಾಕಾರವಾಗಿ ಸುರಿದ ಮಳೆಯಿಂದ ಅವಳಿ ತಾಲೂಕಿನಾದ್ಯಂತ ಮನೆಗಳು ಬಿದ್ದಿವೆ, ಮನೆ ಕಳೆದುಕೊಂಡ ಅನೇಕರು ಬೀದಿಗೆ ಬಿದ್ದಿದ್ದಾರೆ. ಅಂತಹವರಿಗೆ ಮನೆ ಕಟ್ಟಿಕೊಳ್ಳಲು ಸೂಕ್ತ ಪರಿಹಾರ ಸರ್ಕಾರ ಕೊಡಬೇಕು ಎಂದು ಒತ್ತಾಯಿಸಿದರು. ಇದೇ ರೀತಿ ಮಳೆಯಾದರೆ ಅವಳಿ ತಾಲೂಕಿನ ಎಲ್ಲಾ ರೈತರಿಗೆ ಉತ್ತಮ ಬೆಳೆಯಾಗುತ್ತದೆ. ಕೃಷಿ ಇಲಾಖೆ ಅಧಿಕಾರಿಗಳು ಸಹ ರೈತರಿಗೆ ಸಕಾಲಕ್ಕೆ ಗೊಬ್ಬರ, ಔಷಧಿ ಸಿಂಪಡಣೆ ಮಾಡುವ ಬಗ್ಗೆ ಸಲಹೆ ನೀಡಿ ಹಾಗೂ ಅವಳಿ ತಾಲೂಕಿನಲ್ಲಿ ನಕಲಿ ಬೀಜ ಮಾರಾಟವಾಗದಂತೆ ಎಚ್ಚರ ವಹಿಸಬೇಕು ಎಂದರು.ಬಿಜೆಪಿ ಮುಖಂಡರಾದ ಕೆ.ವಿ.ಚನ್ನಪ್ಪ, ಯಕ್ಕನಹಳ್ಳಿ ಜಗದೀಶ್, ಜಿಪಂ ಮಾಜಿ ಅಧ್ಯಕ್ಷರಾದ ದೀಪಾಜಗದೀಶ್, ಜಿಪಂ ಮಾಜಿ ಸದಸ್ಯ ಎಂ.ಆರ್. ಮಹೇಶ್, ದೊಡ್ಡೇರಿ ಸೋಮಣ್ಣ, ಚೀಲೂರು ಲೋಕೇಶ್, ನೆಲಹೊನ್ನೆ ದೇವರಾಜ್ಜ ಅಜಯ್‌ರೆಡ್ಡಿ ನೆಲಹೊನ್ನೆ ದೇವರಾಜ್ ಇತರರು ಇದ್ದರು.