ಸಾರಾಂಶ
ಇಳಕಲ್ಲ ನಗರದ ಜೇಸಿ ಶಾಲೆಯ ಹತ್ತಿರದ ೨೫ ಅಡಿ ಎತ್ತರದ ಬೃಹತ್ ಶಿವನ ಮೂರ್ತಿ ಹಾಗೂ ೧೨ ಅಡಿ ಎತ್ತರದ ಬಸವಣ್ಣನ ಮೂರ್ತಿನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು.
ಇಳಕಲ್ಲ:ನಗರದ ಜೇಸಿ ಶಾಲೆಯ ಹತ್ತಿರದ ೨೫ ಅಡಿ ಎತ್ತರದ ಬೃಹತ್ ಶಿವನ ಮೂರ್ತಿ ಹಾಗೂ ೧೨ ಅಡಿ ಎತ್ತರದ ಬಸವಣ್ಣನ ಮೂರ್ತಿನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು. ಹತ್ತು ದಿನಗಳ ಹಿಂದೆ ಕೊಲ್ಲೂರ ಮೂಕಾಂಬಿಕ ದೇವಸ್ಥಾನದ ಹತ್ತು ಜನ ಅರ್ಭಕರನ್ನು ಕರೆದು ಪ್ರಾಣ ಪ್ರತಿ಼ಷ್ಠಾನ ಕಾರ್ಯಕ್ರಮ ನಡೆದಿತ್ತು. ಇಂದಿನಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗಿನ ಜಾವ ೫ ಗಂಟೆಗೆ ಶಿವನ ದೇವಸ್ಥಾನದಲ್ಲಿರುವ ಬೃಹತ್ ಶಿವ, ಗಣೇಶ ಹಾಘೂ ಬಸವಣ್ಣನ ಮೂರ್ತಿಗಳಿಗೆ ವಿಶೇಷ ಪೂಜೆಗಳು ನಡೆದವು. ಶಿವರಾತ್ರಿ ಅಂಗವಾಗಿ ಭಕ್ತರು ತಂಡೋಪ ತಂಡವಾಗಿ ಬಂದು ಶಿವನಿಗೆ ಪೂಜೆ ಸಲ್ಲಿಸಿ ಹರಕೆ ಪೂರೈಸಿದರು. ಶಿವರಾತ್ರಿ ಬೆಳಗಿನ ಜಾವದವರೆಗೂ ಭಜನೆ, ಸಂಗೀತ ಕಾರ್ಯಕ್ರಗಳು ನಡೆದವು.