ಸಾರಾಂಶ
ಹರಿಹರಪು ಸಚ್ಚಿದಾನಂದಶ್ರೀ ಗಳಿಂದ ಪ್ರಾಣಪ್ರತಿಷ್ಠಾಪನೆ: ಶಾಂತ ಬೀರೂರು ದೇವರಾಜ್ ಕನ್ನಡಪ್ರಭ ವಾರ್ತೆ,ಬೀರೂರು.
ಪಟ್ಟಣದ ಅಶೋಕ ನಗರದ ಅಂಚೇರ ಬೀದಿ ಭಕ್ತರ ಆರಾದ್ಯ ದೇವತೆ ಶ್ರೀ ಪ್ಲೇಗಿನಮ್ಮ ಶಕ್ತಿ ಸ್ವರೂಪಿಣಿಯಾಗಿ ದುರ್ಗಾ ಪರಮೇಶ್ವರಿ ಸ್ವರೂಪದಲ್ಲಿ ಪ್ರತಿಷ್ಠಾಪನೆಗೊಳ್ಳಿದ್ದು ಫೆ.21 ಮತ್ತು 22ರಂದು ದೇವಾಲಯದ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷೆ ಶಾಂತಬೀರೂರು ದೇವರಾಜ್ ತಿಳಿಸಿದರು.ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದ ಲಕ್ಷ್ಮಿನೃಸಿಂಹ ಪೀಠದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳಿಂದ ಅಮ್ಮನವರಿಗೆ ಪ್ರಾಣಪ್ರತಿಷ್ಠಾಪನೆ, ಕುಂಭಾಭಿಷೇಕ, ಕಳಶಾರೋಹಣ ನೇರವೇರಲಿದೆ ಎಂದು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
ಕಳೆದ 12 ವರ್ಷಗಳ ಹಲವು ಅಡೆತಡೆಗಳ ನಡುವೆಯೂ ಭಕ್ತರು ಮತ್ತು ಗುರುಗಳ ಆಶಯದಂತೆ ಭವ್ಯ ದೇಗುಲ ಪೂರ್ಣ ಗೊಂಡಿದೆ. ಚಿಕ್ಕ ಹೆಂಚಿನ ಮನೆಯಲ್ಲಿದ್ದ ಅಮ್ಮನವರ ವಿಗ್ರಹದ ಸ್ಥಳದಲ್ಲಿ ನೂತನವಾಗಿ ಮಹಾಬಲಿಪುರಂ ಬಳಿಯ ಶಿಲ್ಪಿ ತಮಿಳ್ ವಣ್ಣನ್ ಒಂದುಕಾಲು ಟನ್ ತೂಕದ ಕೃಷ್ಣ ಶಿಲೆಯ 61 ಇಂಚಿನ ದುರ್ಗಾಪರಮೇಶ್ವರಿ ದೇವಿ ವಿಗ್ರಹಕ್ಕೆ ಸುಂದರವಾದ ರೂಪಕೊಟ್ಟಿದ್ದಾರೆ ಎಂದರು.ಪ್ರತಿಷ್ಠಾಪನೆ ಪೂರ್ವಭಾವಿಯಾಗಿ ದೇವಿ ಶಿಲಾಪ್ರತಿಮೆಗೆ ಜಲಾವಾಸ, ಧಾನ್ಯವಾಸ, ವಸ್ತ್ರವಾಸ, ಪುಷ್ಪವಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ತಿಪಟೂರಿನ ನಿವೃತ್ತ ಇಂಜಿನಿಯರ್ ಸತ್ಯನಾರಾಯಣ ಗುಪ್ತಾ ರವರ ಮಾರ್ಗದರ್ಶನದಲ್ಲಿ ಕಲಾವಿದ ಶಿವಮೊಗ್ಗದ ಶಿಲ್ಪಿ ಕಾಶೀನಾಥ್ ಬಳಗದಿಂದ ದೇವಾಲಯದ ಒಳ ಮತ್ತು ಹೊರಭಾಗದಲ್ಲಿ ಸುಂದರ ಮೂರ್ತಿಗಳನ್ನು ಕೆತ್ತನೆ ಮೂಡಿ ಬಂದಿದೆ. ವಿಶಾಲವಾದ ಗರ್ಭಗುಡಿ ಮತ್ತು ಮುಖಮಂಟಪ ಆವರಣ ಭಕ್ತ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಫೆ.21ರ ಬುಧವಾರ ಸಂಜೆ 4ಗಂಟೆಗೆ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪಟ್ಟಣದ ಶ್ರೀ ರಂಬಾಪುರಿ ಶಾಖಾ ಮಠದ ಸಮೀಪ ಪುರಪ್ರವೇಶಿಸಲಿದ್ದು, 330ಕ್ಕೂ ಹೆಚ್ಚಿನ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ಚಂಡೆಮೇಳ, ವೀರಗಾಸೆ ಹಾಗೂ ವಿವಿಧ ಕಲಾ ತಂಡಗಳ ಮೂಲಕ ಸಾರೋಟು ರಥದ ಮೂಲಕ ಗುರುಗಳನ್ನು ಪಟ್ಟಣದ ರಾಜಬೀದಿ ಮೂಲಕ ದೇವಾಲಯ ಆವರಣಕ್ಕೆ ಆಹ್ವಾನಿಸಲಾಗುವುದು ಎಂದರು.ಪಟ್ಟಣದ ಶ್ರೀ ಪಟ್ಟಾಭಿರಾಮ ಶ್ರೀಚಂದ್ರಮೌಳೀಶ್ವರ ದೇವಾಲಯದಲ್ಲಿ ಧೂಳಿಪಾದ ಪೂಜೆ, ವಿವಿಧ ಸಮಾಜದ ಗಣ್ಯರಿಂದ ಗುರುಗಳಿಗೆ ಭಕ್ತಿ ಸಮರ್ಪಣೆ ಹಾಗೂ ಶ್ರೀ ಗಳಿಂದ ಆಶೀರ್ವಚನ ನಡೆಯಲಿದ್ದು ಜೈನ ಸಮುದಾಯ ಭವನದಲ್ಲಿ ಪೂಜೆ ನೆರವೇರಿಸಲಿದ್ದಾರೆ ಎಂದು ಹೇಳಿದರು.ಫೆ.22ರ ಗುರುವಾರ ಬೆಳಗ್ಗೆ 7ಕ್ಕೆ ದೇವತಾ ವಿಗ್ರಹ ಪ್ರಾಣಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ, ಗುರುಗಳ ಅಮೃತ ಹಸ್ತದಿಂದ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಪಟ್ಟಣದ ರಂಭಾಪುರಿ ಶಾಖಾ ಮಠದ ಶ್ರೀ ರುದ್ರ ಮುನಿ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳುವರು, ಸಾಹಿತಿ ಚಟ್ನಳ್ಳಿ ಮಹೇಶ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜನಪ್ರತಿ ನಿಧಿಗಳು, ಟ್ರಸ್ಟ್ ಸದಸ್ಯರು, ಭಕ್ತವೃಂದ ಪಾಲ್ಗೊಳ್ಳಲಿದ್ದಾರೆ. ಭಕ್ತಾಧಿ ಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ದೇವಾಲಯ ಸಮಿತಿ ಮುಖಂಡ ಬೀರೂರು ದೇವರಾಜ್ ಹಾಗೂ ಟ್ರಸ್ಟ್ ನ ಸದಸ್ಯರು ಇದ್ದರು.18 ಬೀರೂರು 1
ಬೀರೂರು ಪಟ್ಟಣದ ಅಂಚೇರ ಬೀದಿಯಲ್ಲಿ ನೂತನವಾಗಿ ಲೋಕಾರ್ಪಣೆಗೆ ಸಿದ್ದವಾಗಿರುವ ಶ್ರೀದುರ್ಗಾಪರಮೇಶ್ವರಿ ದೇಗುಲ.18 ಬೀರೂರು 2
ಶ್ರೀದುರ್ಗಾಪರಮೇಶ್ವರಿ ದೇವಾಲಯದ ಟ್ರಸ್ಟ್ ಅಧ್ಯಕ್ಷೆ ಶಾಂತ ದೇವರಾಜ್;Resize=(128,128))
;Resize=(128,128))
;Resize=(128,128))
;Resize=(128,128))