ದೀಪದ ಹುಳುಗಳು ಕೃತಿ ಲೋಕಾರ್ಪಣೆ

| Published : Jan 09 2024, 02:00 AM IST

ಸಾರಾಂಶ

ಬಾದಾಮಿ: ನೆಲೆ ಪ್ರಕಾಶನ ಸಂಸ್ಥೆ ಸಿಂದಗಿ ವತಿಯಿಂದ ವ್ಹಿ.ಟಿ.ಪೂಜಾರ ಅವರು ಬರೆದ ದೀಪದ ಹುಳುಗಳು ನಾಟಕ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ನಗರದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಜರುಗಿತು.

ಬಾದಾಮಿ: ನೆಲೆ ಪ್ರಕಾಶನ ಸಂಸ್ಥೆ ಸಿಂದಗಿ ವತಿಯಿಂದ ವ್ಹಿ.ಟಿ.ಪೂಜಾರ ಅವರು ಬರೆದ ದೀಪದ ಹುಳುಗಳು ನಾಟಕ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ನಗರದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಜರುಗಿತು.

ಖ್ಯಾತ ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪೂರ ಕೃತಿ ಲೋಕಾರ್ಪಣೆ ಮಾಡಿದರು. ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಕನ್ನಡ ಅಧ್ಯಾಪಕ ಡಾ.ರಾಜಶೇಕರ ಹಳೆಮನೆ ಕೃತಿ ಪರಿಚಯ ಮಾಡಿ ಮಾತನಾಡಿದರು. ಖ್ಯಾತ ವೈದ್ಯ ಡಾ.ಎಚ್.ಎಫ್.ಯೋಗಪ್ಪನ್ನವರ, ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಸಿಂದಗಿಯ ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ಉಪಸ್ಥಿತರಿದ್ದರು.