ಸಾರಾಂಶ
ಈ ಬಾರಿ ಕಾರ್ಕಳದ ಸಾಣೂರುನಲ್ಲಿರುವ ಪಾಟ್ ಫ್ಯಾಕ್ಟರಿಯಲ್ಲಿ ದೀಪಾವಳಿಗೆಂದೇ ವಿಶೇಷವಾಗಿ ತಯಾರಿಸಲಾದ ಸುಮಾರು 15 ಲೀಟರ್ ಎಣ್ಣೆ ಹಿಡಿಯುವ ಆವೆ ಮಣ್ಣಿನಿಂದ ತಯಾರಿಸಲಾದ ಬೃಹತ್ ದೀಪವನ್ನು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಪರ್ಕಳದ ಸ್ವಾಗತ ಫ್ರೆಂಡ್ಸ್ ವತಿಯಿಂದ ದೀಪಾವಳಿಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು.ಈ ಬಾರಿ ಕಾರ್ಕಳದ ಸಾಣೂರುನಲ್ಲಿರುವ ಪಾಟ್ ಫ್ಯಾಕ್ಟರಿಯಲ್ಲಿ ದೀಪಾವಳಿಗೆಂದೇ ವಿಶೇಷವಾಗಿ ತಯಾರಿಸಲಾದ ಸುಮಾರು 15 ಲೀಟರ್ ಎಣ್ಣೆ ಹಿಡಿಯುವ ಆವೆ ಮಣ್ಣಿನಿಂದ ತಯಾರಿಸಲಾದ ಬೃಹತ್ ದೀಪವನ್ನು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ಕರ್ನಾಟಕದಾದ್ಯಂತ 50ಕ್ಕೂ ಹೆಚ್ಚು ಕಡೆಗಳ್ಲಲಿ ಕೇವಲ 5 ಸೆಂಟ್ಸ್‌ನಲ್ಲಿ 350ಕ್ಕೂ ಹೆಚ್ಚು ಮರಗಳನ್ನು ಬೆಳೆಯುವ ಮಿಯಾವಾಕಿ ವನಗಳನ್ನು ಪ್ರೇರಣೆಯಾದ ಕಟಪಾಡಿಯ ಮಹೇಶ್ ಶೆಣೈ ಹಾಗೂ ವಿಕಲಚೇತನ ಈಜುಪಟು ಸರಳೆಬೆಟ್ಟಿನ ರಾಜಶೇಖರ ಪಿ. ಶ್ಯಾಮ ರಾವ್ ಅವರನ್ನು ಸನ್ಮಾನಿಸವಾಯಿತು.ಕಾರ್ಯಕ್ರಮದಲ್ಲಿ ಸ್ವಾಗತ ಫ್ರೆಂಡ್ಸ್ ಅಧ್ಯಕ್ಷ ಪಿ. ಮೋಹನ್ ದಾಸ್ ನಾಯಕ್, ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳಬೆಟ್ಟು, ಸರಕಾರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀದೇವಿ, ಸ್ಥಳೀಯರಾದ ಜಯ ಶೆಟ್ಟಿ ಬನ್ನಂಜೆ, ಸುಧೀರ್ ಶೆಟ್ಟಿ ಹಿರಿಯಡ್ಕ, ಸುಬ್ರಹ್ಮಣ್ಯ ಪಾಟೀಲ್, ವೆಂಕಟೇಶ್ ಶೆಟ್ಟಿಗಾರ್ ಮುಂತಾದವರಿದ್ದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡದ ಹಾಡುಗಳನ್ನು ಹಾಡಿ ರಂಜಿಸಿದ ಗಾಯಕ ಉಮೇಶ್ ಮಣಿಪಾಲ, ಸುಪ್ರೀತಾ ಮಣಿಪಾಲ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ನಂತರ ಸಿಹಿ ತಿಂಡಿ ಹಂಚಲಾಯಿತು. ಪರಿಸರ ಸ್ನೇಹಿ ಪಟಾಕಿ ಸಿಡಿಸಲಾಯಿತು.