ದೀವರ ಸಮುದಾಯದ ಕಲೆ ಮತ್ತು ಸಂಸ್ಕೃತಿಯನ್ನು ಭವಿಷ್ಯದ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಡಿ.೨೧ರಂದು ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೀವರ ಹಳೇಪೈಕ ದೀವರ ಸಂಸ್ಕೃತಿ ಸಂವಾದ ಬಳಗದ ಸಂಚಾಲಕ ಶ್ರೀಧರ್ ಡಿ.ಪಿ.ಈಡೂರು ಹೇಳಿದರು.
ಸೊರಬ: ದೀವರ ಸಮುದಾಯದ ಕಲೆ ಮತ್ತು ಸಂಸ್ಕೃತಿಯನ್ನು ಭವಿಷ್ಯದ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಡಿ.೨೧ರಂದು ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೀವರ ಹಳೇಪೈಕ ದೀವರ ಸಂಸ್ಕೃತಿ ಸಂವಾದ ಬಳಗದ ಸಂಚಾಲಕ ಶ್ರೀಧರ್ ಡಿ.ಪಿ.ಈಡೂರು ಹೇಳಿದರು.ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಧೀರ ದೀವರ ಬಳಗ ಹಾಗೂ ನಾವು ದೀವರ ಸೊರಬ ಬಳಗದ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಆಧುನಿಕ ಕಾಲಘಟ್ಟದಲ್ಲಿ ದೀವರ ಕಲೆ, ಸಂಸ್ಕೃತಿ ಅಳಿವಿನಂಚಿನಲ್ಲಿದ್ದು, ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ. ಈ ದೃಷ್ಟಿಯಿಂದ ಕಳೆದು ನಾಲ್ಕೈದು ವರ್ಷಗಳಿಂದ ಹಳೇಪೈಕ ದೀವರ ಸಾಂಸ್ಕೃತಿಕ ಸಂವಾದ ಬಳಗದಿಂದ ರಾಜ್ಯಮಟ್ಟದ ಭೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಪ್ರದರ್ಶನ ಹಾಗೂ ಧೀರ ದೀವರು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಡಿ.೨೧ರಂದು ನಡೆಯುವ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಬೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನ ಬೆಳಗ್ಗೆ ೧೦ ಗಂಟೆಗೆ ಹೊಸನಗರ ತಾಲೂಕು ಕಾರ್ತಿಕೇಯ ಪೀಠದ ಶ್ರೀ ಶ್ರೀ ಯೋಗೇಂದ್ರ ಅವಧೂತರು, ಬ್ರಹ್ಮಶ್ರೀ ನಾರಾಯಣಗುರು ಮಹಾ ಸಂಸ್ಥಾನ, ನಿಟ್ಟೂರಿನ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಕುವೆಂಪು ವಿವಿ ಹಣಕಾಸು ಅಧಿಕಾರಿ ಪ್ರೊ.ರಮೇಶ್, ಮಾಜಿ ಸಚಿವ ಹರತಾಳು ಹಾಲಪ್ಪ, ವಾಣಿಜ್ಯ ತೆರಿಗೆ ಉಪ ಆಯುಕ್ತ ಹೊಳೆಯಪ್ಪ ಭಾಗವಹಿಸಲಿದ್ದು, ದೀವರ ಸಾಂಸ್ಕೃತಿಕ ವೈಭವ ಸಮಿತಿ ಸಂಚಾಲಕ ನಾಗರಾಜ್ ನೇರಿಗೆ, ಸಮಿತಿ ಸಂಚಾಲಕ ಡಿ.ಪಿ.ಶ್ರೀಧರ್ ಈಡೂರು, ಧೀರ ದೀವರು ಬಳಗದ ಸಂಚಾಲಕ ಸುರೇಶ್ ಕೆ.ಬಾಳೆಗುಂಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ನಡೆಯುವ ಧೀರ ದೀವರು ಪುರಸ್ಕಾರ ಮತ್ತು ರಾಜ್ಯಮಟ್ಟದ ಚಿತ್ತಾರಗಿತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಸಮಾರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಮಾರೋಪ ನುಡಿಯನ್ನಾಡಲಿದ್ದು, ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಲನಚಿತ್ರ ಗೀತೆ ರಚನೆಕಾರ ಕವಿರಾಜ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್, ರಾಮಮನೋಹರ ಲೋಹಿಯಾ ಟ್ರಸ್ಟ್‌ನ ಡಾ.ರಾಜನಂದಿನಿ ಕಾಗೋಡು, ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಮಹಿಳಾ ಸಂಘದ ಗೌರವ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀ ಶ್ರೀಧರ್.ಆರ್. ಹುಲ್ತಿಕೊಪ್ಪ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಗುಡ್ಡಗಾಡು ಜನರ ಲಕ್ಷಣಗಳನ್ನು ಹೊಂದಿರುವ ದೀವರ ಜನಾಂಗಕ್ಕೆ ಸರ್ಕಾರದಿಂದ ಪೂರ್ಣಪ್ರಮಾಣದ ಸೌಲಭ್ಯಗಳು ಸಿಕ್ಕಿಲ್ಲ. ಈ ಜನಾಂಗದ ಹೆಣ್ಣುಮಕ್ಕಳು ಬಿಡಿಸುವ ಹಸೆ ಚಿತ್ತಾರಕ್ಕೆ ರಾಜ್ಯ ಮನ್ನಣೆ ದೊರೆತಿದೆ. ಪ್ರಕೃತಿಯೊಂದಿಗೆ ಸಹ ಜೀವನ ನಡೆಸುವ ಜನಾಂಗವು ಸೂರ್ಯ, ಚಂದ್ರನನ್ನು ದೇವರು ಎಂದೇ ಪೂಜೆ ಮಾಡುತ್ತಿದೆ. ೭೦ರ ದಶಕದಲ್ಲಿ ಬಂಗಾರಪ್ಪ ಅವರು ಶಾಸಕರಾದ ನಂತರ ರಾಜಕೀಯ ಶಕ್ತಿ ಪಡೆದ ದೀವರ ಜನಾಂಗವು ಜಾಗೃತಿಗೊಂಡು ಒಂದು ಸಮೂಹವಾಗಿ ಕೆಲಸ ಮಾಡುತ್ತಿದೆ ಎಂದರು.ಬದಲಾದ ಸ್ಥಿತಿಯಲ್ಲಿ ದೀವರ ಅಸ್ಮಿತೆ ಉಳಿದಿಲ್ಲ. ಮುಂದುವರಿದ ಈಡಿಗ ಜನಾಂಗದ ಜೊತೆಗೆ ಸೇರಿ ನಮ್ಮ ಸಮುದಾಯದ ಪ್ರಾದೇಶಿಕ ಮಹತ್ವ ಕಳೆದುಹೋಗುವ ಭೀತಿ ಎದುರಾಗಿದೆ. ನಮ್ಮನ್ನು ನಾವು ಹೊರಜಗತ್ತಿಗೆ ಗುರುತಿಸಿಕೊಳ್ಳಬೇಕಾದರೆ ನಮ್ಮ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಅಗತ್ಯವಿದ್ದು, ಸಮಾಜ ಬಾಂಧವರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ನಾವು ದೀವರ ಬಳಗದ ಉಪಾಧ್ಯಕ್ಷ ಹಾಗೂ ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ, ನಾಗೇಶ್ ರಾಜೀವನಗರ ಹಾಜರಿದ್ದರು.