ಸಾರಾಂಶ
ಕೂಡಲೇ ಕ್ಷಮೆ ಯಾಚಿಸುವಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಶಹೀದ್ ಅಷ್ಫಾಕ್ ಉಲ್ಲ ಖಾನ್ ವೆಲ್ಫೇರ್ ಸಂಘಟನೆ ಆಗ್ರಹ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮುಧೋಳದಲ್ಲಿ ಗಣೇಶ ವಿಸರ್ಜನೆಯ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸ್ವಾತಂತ್ರ್ಯ ಹೋರಾಟಗಾರ ಹಜರತ್ ಟಿಪ್ಪು ಸುಲ್ತಾನ್‌ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಶಹೀದ್ ಅಷ್ಫಾಕ್ ಉಲ್ಲ ಖಾನ್ ವೆಲ್ಫೇರ್ ಸಂಘಟನೆಯವರು ನಗರದ ಅಶೋಕ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಕಾರ್ಯಕರ್ತರು, ಪದಾಧಿಕಾರಿಗಳು ಕೂಡಲೇ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು. ಬಸನಗೌಡ ಪಾಟೀಲ್ ಯತ್ನಾಳ ಪದೇ ಪದೇ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡುತ್ತಿದ್ದಾರೆ. ಟಿಪ್ಪುಸುಲ್ತಾನ್ ಅವರಿಗೆ ನಿಂದಿಸುತ್ತಾರೆ. ಇದರಿಂದ ಮುಸ್ಲಿಂ ಸಮುದಾಯವನ್ನು ಹಿಯಾಳಿಸಲಾಗುತ್ತಿದ್ದು, ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.
ಕೋಮುಗಲಭೆ ಉಂಟು ಮಾಡುವ ಹಾಗೂ ರಾಜ್ಯದಲ್ಲಿ ಶಾಂತಿ ಕದಡುವ ಕಾರ್ಯವನ್ನು ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.ಕೊಪ್ಪಳ ಶಹೀದ್ ಅಷ್ಫಾಕ್ ಉಲ್ಲ ಖಾನ್ ವೆಲ್ಫೇರ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಅಜರುದ್ದಿನ್, ಕೊಪ್ಪಳ ಹೆಲ್ಪಿಂಗ್ ಹ್ಯಾಂಡ್ಸ್ ಟೀಮ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖಂಡರಾದ ಫಾರೂಕ್ ಅತ್ತಾರ, ತೌಸೀಫ್ ಮೊಳೆಕೊಪ್ಪ, ಅರ್ಷದ್ ಶೇಖ್, ಸೂಹೆಲ್ ಡೆಕ್ಕನ್, ಖಲಿಲ್ ಡಿ.ಕೆ., ಇಮ್ರಾನ್ ಅಧೋನಿ, ರಿಯಾಜ್ ಮನಿಯರ್, ಎಂ.ಡಿ. ಹುಸೇನ್, ನಾಸಿರ್ ಹುಸೇನಿ, ಸಲೀಮ್ ಖಾದ್ರಿ, ನಿಜಾಮ್ ಮೊಳೆಕೊಪ್ಪ, ಮೌಲಾನ ಮೊಹಮ್ಮದ ಅಲಿ, ಜಿಲಾನ್, ಆಸಿಫ್ ಅಲಿ ಕರ್ಕೇಹಳ್ಳಿ, ಸಾಧಿಕ್ ಕತ್ತಾರ್ ಹಾಗೂ ಶಹಿದ್ ಅಷ್ಫಾಕ್ ಉಲ್ಲ ಖಾನ್ ವೆಲ್ಫೇಯರ್ ಕಮಿಟಿ ಸದಸ್ಯರು ಇದ್ದರು.