ಶಂಕರಾಚಾರ್ಯರಿಂದ ಸನಾತನ ಧರ್ಮದ ರಕ್ಷಣೆ: ಬ್ರಹ್ಮಾನಂದ ಸ್ವಾಮೀಜಿ

| Published : Mar 31 2024, 02:08 AM IST

ಶಂಕರಾಚಾರ್ಯರಿಂದ ಸನಾತನ ಧರ್ಮದ ರಕ್ಷಣೆ: ಬ್ರಹ್ಮಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ವಿನಾಶದ ಅಂಚಿನಲ್ಲಿದ್ದ ಸನಾತನ ಧರ್ಮ ರಕ್ಷಿಸಿದ್ದು ಶಂಕರಾಚಾರ್ಯರು. ಶಂಕರಾಚಾರ್ಯರು ಸನಾತನ ಧರ್ಮದ ವೇದ ಮತ್ತು ಇತಿಹಾಸ ಸಂರಕ್ಷಣೆ ಮಾಡಿ ತನ್ಮೂಲಕ ಧರ್ಮ ಸಂರಕ್ಷಣೆ ಮಾಡದೆ ಹೋಗಿದ್ದರೆ ನಾವು ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವುದು ಕಷ್ಟವಾಗಿತ್ತು. ಅಂತಹ ಮಹತ್ಕಾರ್ಯ ಮಾಡಿರುವ ಶಂಕರಾಚಾರ್ಯರು ಸದಾ ಸ್ಮರಣೀಯರು.

ಕನ್ನಡಪ್ರಭ ವಾರ್ತೆ ಸಾಗರ

ಆದಿ ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಸದೃಢವಾಗಿರುವುದರಿಂದ ಸನಾತನ ಧರ್ಮವು ಯಾರೂ ಅಲ್ಲಾಡಿಸದಷ್ಟು ಗಟ್ಟಿಯಾಗಿದೆ ಎಂದು ಸಿದ್ದಾಪುರ ಶಿರಳಗಿ ರಾಜಾರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.

ಇಲ್ಲಿನ ಶಂಕರಮಠದಲ್ಲಿ ಸಾಗರ ಶೃಂಗೇರಿ ಶಂಕರ ಮಠದ ೨೫ನೇ ವಾರ್ಷಿಕೋತ್ಸವ ರಜತ ಶಂಕರ ಹಾಗೂ ಭಾರತೀ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕರಿಸಿದ ೫೦ನೇ ವರ್ಷದ ಸುವರ್ಣ ಭಾರತೀ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ವೇದ ಮತ್ತು ಉಪನಿಷತ್ತಿನಲ್ಲಿ ಸನಾತನ ಧರ್ಮಕ್ಕೆ ಸ್ಪಷ್ಟ ಮತ್ತು ನಿಖರವಾದ ವ್ಯಾಖ್ಯಾನ ನೀಡಲಾಗಿದೆ ಎಂದರು.

ವಿನಾಶದ ಅಂಚಿನಲ್ಲಿದ್ದ ಸನಾತನ ಧರ್ಮ ರಕ್ಷಿಸಿದ್ದು ಶಂಕರಾಚಾರ್ಯರು. ಶಂಕರಾಚಾರ್ಯರು ಸನಾತನ ಧರ್ಮದ ವೇದ ಮತ್ತು ಇತಿಹಾಸ ಸಂರಕ್ಷಣೆ ಮಾಡಿ ತನ್ಮೂಲಕ ಧರ್ಮ ಸಂರಕ್ಷಣೆ ಮಾಡದೆ ಹೋಗಿದ್ದರೆ ನಾವು ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವುದು ಕಷ್ಟವಾಗಿತ್ತು. ಅಂತಹ ಮಹತ್ಕಾರ್ಯ ಮಾಡಿರುವ ಶಂಕರಾಚಾರ್ಯರು ಸದಾ ಸ್ಮರಣೀಯರು ಎಂದು ಹೇಳಿದರು.

ಶ್ರೀಮಠದಿಂದ ನೀಡುವ ಶಾರದಾ ಪ್ರಸಾದ ಪುರಸ್ಕಾರ ಸ್ವೀಕರಿಸಿದ ಹೊಸಗುಂದ ಉಮಾಮಹೇಶ್ವರ ಟ್ರಸ್ಟ್‌ ಟ್ರಸ್ಟಿ ಸಿ.ಎಂ.ಎನ್. ಶಾಸ್ತ್ರಿ ಮಾತನಾಡಿ, ಪುರಾತನ ಹೊಸಗುಂದ ದೇವಸ್ಥಾನ ಪುನರುಜ್ಜೀವನಗೊಳಿಸುವ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದ್ದರೂ, ದೇವರು ಹಾಗೂ ಗುರುಗಳ ಆಶೀರ್ವಾದದಿಂದ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಪರಿಸರದ ನಡುವಿನ ಹೊಸಗುಂದ ಕ್ಷೇತ್ರ ಮಾದರಿಯಾಗಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಸನ್ಮಾನ, ಪ್ರಶಸ್ತಿಗಾಗಿ ಯಾವುದೇ ಕೆಲಸ ಮಾಡುವುದಿಲ್ಲ ಎಂದರು.

ವೈ.ವಿ.ದಂತಿ, ಕೆ.ವಿ.ಜಯರಾಮ್, ಗುಂಡಪ್ಪ ಗೌಡ, ಟಿ.ವಿ.ಪಾಂಡುರಂಗ ಇನ್ನಿತರರಿದ್ದರು. ಸತ್ಯನಾರಾಯಣ ಸ್ವಾಗತಿಸಿದರು. ಅಶ್ವಿನಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮ.ಸ.ನಂಜುಂಡಸ್ವಾಮಿ ಅಭಿನಂದನಾ ಭಾಷಣ ಮಾಡಿದರು. ಪ್ರೊ.ಕೆ.ಆರ್.ಕೃಷ್ಣಯ್ಯ ಅಭಿನಂದನಾ ಪತ್ರ ವಾಚಿಸಿದರು. ಜಾಹ್ನವಿ ವೆಂಕಟೇಶ್ ವಂದಿಸಿದರು. ಸವಿತಾ ಶ್ರೀಕಾಂತ್ ನಿರೂಪಿಸಿದರು.