ಕಾಡಾನೆ ಹಿಂಡಿನಿಂದ ದಾಂದಲೆ, ಬೆಳೆ ನಷ್ಟ

| Published : Dec 22 2024, 01:30 AM IST

ಸಾರಾಂಶ

ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂದಲೆ ನಡೆಸಿ ಬತ್ತದ ಬೆಳೆಗಳನ್ನು ಧ್ವಂಸಗೊಳಿಸಿ ತೋಟದ ಗೇಟುಗಳನ್ನು ಮುರಿದು ಹಾಕಿ ಹಾನಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂದಲೆ ನಡೆಸಿ ಬತ್ತದ ಬೆಳೆಗಳನ್ನು ಧ್ವಂಸಗೊಳಿಸಿ ತೋಟದ ಗೇಟುಗಳನ್ನು ಮುರಿದು ಹಾಕಿ ಹಾನಿಗೊಳಿಸಿರುವ ಘಟನೆ ಬಾಡಗ ಬಾಣಂಗಾಲ ಘಟ್ಟದಲ್ಲಿ ನಡೆದಿದೆ.

ಬಾಡಗ ಬಾಣಂಗಲ ಗ್ರಾಮದ ಎಂ.ಸಿ. ಮುತ್ತಣ್ಣ ಎಂಬುವರಿಗೆ ಸೇರಿದ ಚೌಡ್ರಂಜಿ ಕಾಫಿ ತೋಟದೊಳಗೆ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂದಲೆ ನಡೆಸಿ ಬತ್ತದ ಬೆಳೆಗಳನ್ನು ತಿಂದು ತುಳಿದು ಕಟಾವಿಗೆ ಬಂದಿರುವ ಬತ್ತದ ಬೆಳೆಗಳು ನಾಶವಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಅಲ್ಲದೆ ಕಾಫಿ ತೋಟದೊಳಗೆ ಅಳವಡಿಸಿದ್ದ ಕಬ್ಬಿಣದ ಗೇಟನ್ನು ಕೂಡ ಕಾಡಾನೆಗಳು ಮುರಿದು ಹಾಕಿ ಹಾನಿಗೊಳಿಸಿದೆ. ಹಾಗಾಗಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ ಎಂದು ತೋಟದ ಮಾಲೀಕರಾದ ಎಂ.ಸಿ. ಮುತ್ತಣ್ಣ ತಿಳಿಸಿದ್ದಾರೆ. ಈ ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂದಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದಾಗಿ ಕೃಷಿಕರಿಗೆ ಹಾಗೂ ಬೆಳಗಾರರಿಗೆ ನೆಮ್ಮದಿಯಿಲ್ಲದಂತಾಗಿದ್ದು ಕೂಡಲೆ ಕಾಡಾನೆಗಳ ದಾಳಿಯಿಂದ ನಷ್ಟ ಸಂಭವಿಸಿದ ಬೆಳೆಗಾರರಿಗೆ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.