‘ಸರ್ಕಾರಗಳ ದ್ವಿಮುಖ ನೀತಿಗೆ ಕೃಷಿ ವಲಯ ಅಧಃಪತನ:

| Published : May 10 2024, 11:46 PM IST

‘ಸರ್ಕಾರಗಳ ದ್ವಿಮುಖ ನೀತಿಗೆ ಕೃಷಿ ವಲಯ ಅಧಃಪತನ:
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ತಾಲ್ಲೂಕಿನ ಬುಡ್ಡಹಟ್ಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮಶಾಖೆಯನ್ನು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು.

ಚಳ್ಳಕೆರೆ: ರೈತ ಎಂದೂ ಸಾಲಗಾರನಾಗಲು ಸಾಧ್ಯವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದ್ವಿಮುಖ ನೀತಿಯೇ ರೈತರನ್ನು ಸಾಲಗಾರರನ್ನಾಗಿ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಅವರು, ಬುಧವಾರ ತಾಲ್ಲೂಕಿನ ಬುಡ್ನಹಟ್ಟಿ ಮತ್ತು ತಳಕು ಹೋಬಳಿಯ ವರವು ಗ್ರಾಮದಲ್ಲಿ ರೈತ ಸಂಘದ ಎರಡು ಗ್ರಾಮ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ ದರು. ಇದೇ ಮೊದಲ ಬಾರಿಗೆ ತನ್ನ ಗ್ರಾಮಗಳ ಪ್ರವೇಶಿಸಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ರಾಜ್ಯ ಕಾರ್ಯ ದರ್ಶಿ ಹನುಮಂತಪ್ಪ ಹೊಳೆಯಾಚೆ ಇವರನ್ನು ರೈತರು ಎತ್ತಿನ ಗಾಡಿನಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಂಡರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಮಸ್ಯೆ ನಿವಾರಣೆ ಮಾಡುವುದಲ್ಲಿ ಯಾವುದೇ ಆಸಕ್ತಿ ತೋರಿಲ್ಲ. ಕೇಂದ್ರ ಸರ್ಕಾರ ಆದಾನಿ, ಅಂಬಾನಿಯವರ ಕೋಟಿಗಟ್ಟಲೇ ಸಾಲವನ್ನು ಮನ್ನಾ ಮಾಡಿದೆ. ಕೈಗಾರಿಕೆಗಳಲ್ಲಿ ನಷ್ಟವೆಂದು ಪರಿಗಣಿಸಿ ಸಾಲ ಮನ್ನಾ ಮಾಡಿದೆ. ಆದರೆ, ಈ ಬಾರಿ ಪ್ರಮಾಣದ ೨೬ ಸಾವಿರ ಕೋಟಿ ರು. ಸಾಲವನ್ನು ಯಾವುದೇ ಸರ್ಕಾರ ಮನ್ನಾ ಮಾಡಿಲ್ಲ. ಕರ್ನಾಟಕದಲ್ಲೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತ ಪಾಲಿಗೆ ಕಂಟಕವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬುಡ್ನಹಟ್ಟಿ ಗ್ರಾಮ ಘಟಕದ ಅಧ್ಯಕ್ಷ ಓಬಯ್ಯ ವಹಿಸಿದ್ದರು, ರಾಜ್ಯ ಕಾರ್ಯದರ್ಶಿ ಹನುಮಂತಪ್ಪ ಹೊಳೆಯಾಚೆ, ತುಮಕೂರು ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ, ಜಿಲ್ಲಾ ಉಪಾಧ್ಯಕ್ಷ ಜೆ.ಎಸ್.ಯರ‍್ರಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಣ್ಣರೆಡ್ಡಿ, ತಾಲ್ಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ, ತಾಲ್ಲೂಕು ಗೌರವಾಧ್ಯಕ್ಷ ಚನ್ನಕೇಶವಮೂರ್ತಿ, ಆರ್.ಬಸವರಾಜ, ತಿಪ್ಪೇಸ್ವಾಮಿ ಗೌಡ, ಮೈರಾಡ ಚಂದ್ರಣ್ಣ, ದೊಡ್ಡ ಉಳ್ಳಾರ್ತಿ ತಿಪ್ಪೇಸ್ವಾಮಿ, ಸುಮಲತಾ, ಲಕ್ಷ್ಮೀದೇವಿ ಮುಂತಾದರಿದ್ದರು.