ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆಯಲ್ಲಿ ಖಾತೆ ಮಾಡಿಕೊಡಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ರೋಹಿಣಿ ಅವರಿಗೆ ಮನವಿ ನೀಡಿದರು.ನಗರಸಭೆಯಲ್ಲಿ ಅನಧಿಕೃತ ಸ್ವತ್ತುಗಳಿಗೆ ಈ ಖಾತೆ ಮಾಡಲು ಆಗುತ್ತಿರುವ ಲೋಪ ಸರಿಪಡಿಸಬೇಕು. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಈ ಖಾತೆ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಆಸ್ತಿ ಮಾಲೀಕರು ಕಂದಾಯ ಪಾವತಿಸಿ ಈ ಖಾತೆ ಪಡೆಯಬಹುದು. ಆದರೆ, ಖಾತೆ ಮಾಡಿಕೊಡಲು ಪೌರಾಡಳಿತ ಸಚಿವ ರಹೀಮ್ ಖಾನ್ ಸ್ಥಳೀಯ ಸಂಸ್ಥೆಗಳಿಗೆ ಆದೇಶ ಮಾಡಿದ್ದು ಇದನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಮಂಡ್ಯ ನಗರಸಭೆಯಲ್ಲಿ ಖಾತೆ ಮಾಡಿಕೊಡಲು ವಿಳಂಬ ಮಾಡುತ್ತಿರುವುದು ಏಕೆ. ಅಧಿಕಾರಿಗಳು ಮತ್ತು ನೌಕರರು ನಗರಸಭೆ ನೀಡಿರುವ ಎಂಡೋಸ್ಮೆಂಟಿಗೆ ಖಾತೆ ಮಾಡುತ್ತಿಲ್ಲ. ಸಮರ್ಪಕ ಚೆಕ್ಕುಬಂಧಿ ಹಾಕದೆ ಖಾತೆ ಮಾಡುತ್ತಿದ್ದಾರೆ. ೧೩ ವರ್ಷಗಳ ಇಸಿ ನೀಡಿದ್ದರೂ ಸಹ ಮತ್ತೆ ಹಳೆಯ ಇಸಿ ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ವಾರಸುದಾರರಿಗೆ ಕಂದಾಯವನ್ನು ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ. ನಿಯಮಾನುಸಾರ ಅರ್ಜಿಯಲ್ಲಿ ಲೋಪದೋಷವಿದ್ದಲ್ಲಿ ಏಳು ದಿನಗಳೊಳಗಾಗಿ ಹಿಂಬರಹ ನೀಡದೆ ವಿಳಂಬ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಖಾತೆ ಮಾಡುವುದರಲ್ಲಿ ಅಧಿಕಾರಿಗಳಿಗಿಂತ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರಿದರು.
ಈ ಸ್ವತ್ತು ಖಾತೆ ಆಂದೋಲನ ನಡೆಸುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಈ ಖಾತೆ ಅಭಿಯಾನವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.ಮುಖಂಡರಾದ ಶಿವಕುಮಾರ್, ಸುನಿಲ್ ಕುಮಾರ್, ಮಂಜುನಾಥ್, ಪ್ರಸನ್ನಕುಮಾರ್, ಸಚಿನ್, ಚಂದ್ರಶೇಖರ್ ಭಾಗವಹಿಸಿದ್ದರು.
ಆಕ್ಷೇಪಣೆ ಸಲ್ಲಿಸಲು ಮೇ 8 ಕೊನೆ ದಿನನಾಗಮಂಗಲ
ತಾಲೂಕಿನಲ್ಲಿ ಖಾಲಿ ಇದ್ದ 1ಅಂಗನವಾಡಿ ಕಾರ್ಯಕರ್ತೆ, 12 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 39 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಆಯ್ಕೆ ಸಮಿತಿ ಸಭೆಯಲ್ಲಿ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಗುರುತಿಸಲಾಗಿದ್ದು, ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಏ.29 ರಂದು ಪ್ರಕಟಿಸಲಾಗಿದೆ.ಈ ಸಂಬಂಧ ಸಾರ್ವಜನಿಕ ಆಕ್ಷೇಪಣೆಗಳು ಇದ್ದಲ್ಲಿ ಮೇ 8ರೊಳಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸಬಹುದು. ನಂತರ ಬಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))