ಶಾಲಾ ಬಸ್‌ಗಳ ವಿಳಂಬ- ವಿದ್ಯಾರ್ಥಿಗಳ ಪ್ರತಿಭಟನೆ

| Published : Dec 15 2023, 01:30 AM IST / Updated: Dec 15 2023, 01:31 AM IST

ಸಾರಾಂಶ

ಸರಿಯಾದ ಸಮಯಕ್ಕೆ ಬಾರದ ಸಾರಿಗೆ ಸಂಸ್ಥೆಯ ಬಸ್‌ಗಳ ವಿರುದ್ಧ ಶಾಲಾ ವಿದ್ಯಾರ್ಥಿಗಳು ಗುರುವಾರ ಕೆಲಗೇರಿಯ ಧಾರವಾಡ-ಗೋವಾ ರಸ್ತೆಯನ್ನು ಕೆಲ ಕಾಲ ತಡೆದು ಪ್ರತಿಭಟಿಸಿದರು.ವಾರದಲ್ಲಿ ಎರಡು ದಿನಗಳ ಕಾಲ ಮಾತ್ರ ಸರಿಯಾದ ಸಮಯಕ್ಕೆ ಬರುತ್ತವೆ. ಉಳಿದ ದಿನ ತಡವಾಗಿ ಬರುವುದರಿಂದ ಶಾಲೆಗೆ ತಡವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಸರಿಯಾದ ಸಮಯಕ್ಕೆ ಬಾರದ ಸಾರಿಗೆ ಸಂಸ್ಥೆಯ ಬಸ್‌ಗಳ ವಿರುದ್ಧ ಶಾಲಾ ವಿದ್ಯಾರ್ಥಿಗಳು ಗುರುವಾರ ಕೆಲಗೇರಿಯ ಧಾರವಾಡ-ಗೋವಾ ರಸ್ತೆಯನ್ನು ಕೆಲ ಕಾಲ ತಡೆದು ಪ್ರತಿಭಟಿಸಿದರು.

ವಾರದಲ್ಲಿ ಎರಡು ದಿನಗಳ ಕಾಲ ಮಾತ್ರ ಸರಿಯಾದ ಸಮಯಕ್ಕೆ ಬರುತ್ತವೆ. ಉಳಿದ ದಿನ ತಡವಾಗಿ ಬರುವುದರಿಂದ ಶಾಲೆಗೆ ತಡವಾಗುತ್ತಿದೆ. ಇದರೊಂದಿಗೆ ಎಲ್ಲ ಬಸ್ಸುಗಳು ತುಂಬ ಗದ್ದಲದಿಂದ ಕೂಡಿದ್ದು ವಿದ್ಯಾರ್ಥಿನಿಯರಿಗೆ ತೀವ್ರ ತೊಂದರೆಯಾಗುತ್ತಿದೆ. ನೂಕಲಾಟದಿಂದ ವಿದ್ಯಾರ್ಥಿನಿಯರಿಗೆ ಹಿಂಸೆಯಾಗುತ್ತಿದೆ. ಕೂಡಲೇ ಡಿಪೋ ನಿರ್ವಾಹಕರು ಸ್ಥಳಕ್ಕೆ ಬಂದು ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಉಪ ನಗರ ಹಾಗೂ ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿನಿಯರ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ. ಆಗ ಡಿಪೋ ನಿರ್ವಾಹಕರನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆ ಹೇಳಲಾಯಿತು. ಇನ್ಮುಂದೆ ಸರಿಯಾದ ಸಮಯಕ್ಕೆ ಬಸ್ಸುಗಳನ್ನು ಬಿಡುವುದಾಗಿ ಭರವಸೆ ನೀಡಿದರು.