ಸಾರಾಂಶ
ಪ್ರಯಾಣಿಕರ ಲಗ್ಗೇಜ್‌ಗಳು, ಬ್ಯಾಗ್‌ಗಳು ಹಾಗೂ ವಾಹನಗಳ ಪಾರ್ಕಿಂಗ್ ಪ್ರದೇಶಗಳು ನಿಖರವಾಗಿ ತಪಾಸಣೆಗೊಳಗಾಗುತ್ತಿವೆ. ಬಸ್ ನಿಲ್ದಾಣದ ಆವರಣ, ಕಸದ ತೊಟ್ಟಿ, ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು ಹಾಗೂ ನಿಲುಗಡೆ ಪ್ರದೇಶಗಳಲ್ಲೂ ತೀವ್ರ ತಪಾಸಣೆ ನಡೆಯುತ್ತಿದೆ.
ಕನ್ನಡಪ್ರಭ ವಾರ್ತೆ ಹಾಸನ
ದೆಹಲಿಯ ಕಾರ್ ಸ್ಫೋಟದ ಬಳಿಕ ರಾಜ್ಯಾದ್ಯಂತ ಸುರಕ್ಷತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, ಹಾಸನದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಜನಸಂಧಣಿ ಪ್ರದೇಶಗಳಲ್ಲಿ ಶ್ವಾನ ದಳ ಮತ್ತು ಬಾಂಬ್ ಸ್ಕ್ವಾಡ್ ತಂಡಗಳು ತೀವ್ರ ಪರಿಶೀಲನೆ ನಡೆಸುತ್ತಿವೆ.ಪ್ರಯಾಣಿಕರ ಲಗ್ಗೇಜ್‌ಗಳು, ಬ್ಯಾಗ್‌ಗಳು ಹಾಗೂ ವಾಹನಗಳ ಪಾರ್ಕಿಂಗ್ ಪ್ರದೇಶಗಳು ನಿಖರವಾಗಿ ತಪಾಸಣೆಗೊಳಗಾಗುತ್ತಿವೆ. ಬಸ್ ನಿಲ್ದಾಣದ ಆವರಣ, ಕಸದ ತೊಟ್ಟಿ, ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು ಹಾಗೂ ನಿಲುಗಡೆ ಪ್ರದೇಶಗಳಲ್ಲೂ ತೀವ್ರ ತಪಾಸಣೆ ನಡೆಯುತ್ತಿದೆ. ಮಂಗಳವಾರ ಜಿಲ್ಲೆಯ ವಿವಿಧ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ತಪಾಸಣೆ ಕಾರ್ಯಾಚರಣೆ ಆರಂಭಿಸಿದ್ದು, ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳ ಚಲನವಲನದ ಮೇಲೆ ಕಣ್ಗಾವಲು ಇರಿಸಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅನುಮಾನಾಸ್ಪದ ಬ್ಯಾಗ್, ಪ್ಯಾಕೆಟ್ ಅಥವಾ ವಸ್ತುಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ವಿನಂತಿಸಿದೆ. ಜನರ ಸುರಕ್ಷತೆಗಾಗಿ ಕ್ರಮಗಳು ಕೈಗೊಳ್ಳಲಾಗಿದ್ದು, ಹಾಸನದಲ್ಲಿ ಭದ್ರತಾ ವಲಯ ಕಟ್ಟೆಚ್ಚರಿಕೆಯಿಂದ ಕ್ರಮ ವಹಿಸಲಾಗಿದೆ.
;Resize=(128,128))
;Resize=(128,128))
;Resize=(128,128))