ದೆಹಲಿ ಫಲಿತಾಂಶ ಮೋದಿ ಪರ ಜನರ ಒಲವು: ಸತೀಶ್ ಕುಂಪಲ

| Published : Feb 09 2025, 01:31 AM IST

ಸಾರಾಂಶ

ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಗಳಿಸಿದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿ ಎದುರು ವಿಜಯೋತ್ಸವ ಆಚರಣೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಗಳಿಸಿದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿ ಎದುರು ವಿಜಯೋತ್ಸವ ಆಚರಣೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತದಾರರು ಭೃಷ್ಟಾಚಾರದ ವಿರುದ್ಧ ತೀರ್ಪು ನೀಡಿದ್ದಾರೆ. ಸ್ವಚ್ಛ ಆಸಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಆಪ್ ಸರ್ಕಾರ, ಸ್ವಜನ ಪಕ್ಷಪಾತ, ಸರ್ವಾಧಿಕಾರ, ಅಬಕಾರಿ ಹಗರಣಗಳಿಂದ ಜನತೆ ರೋಸಿ ಹೋಗುವಂತೆ ಆಡಳಿತ ನಡೆಸಿತ್ತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಜೈಲು ಪಾಲಾಗಿರುವುದು ಅದರ ಭೃಷ್ಟತೆಯ ಪ್ರಮಾಣವನ್ನು ತೋರಿಸಿದೆ ಎಂದರು. 27 ವರ್ಷಗಳ ಬಳಿಕ ಬಿಜೆಪಿ ಮರಳಿ ಅಧಿಕಾರದ ಗದ್ದುಗೆ ಏರಿದೆ. ಮತದಾರ ಕೇಂದ್ರ ಸರ್ಕಾರದ ನರೇಂದ್ರಮೋದಿಯವರ ಸ್ವಚ್ಛ ಜನಪರ, ಅಭಿವೃದ್ಧಿ ಪರ ಆಡಳಿತಕ್ಕೆ ಜೈ ಎಂದಿದ್ದಾರೆ. ದೆಹಲಿ ಅಭಿವೃದ್ಧಿಗೆ ಡಬಲ್ ಎಂಜಿನ್ಸರ್ಕಾರದ ಅವಶ್ಯಕತೆಯನ್ನು ಜನರು ಮನಗಂಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌, ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ, ಮೇಯರ್‌ ಮನೋಜ್‌ ಕುಮಾರ್‌, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು, ರಮೇಶ್‌ ಕಂಡೆಟ್ಟು, ರವಿಶಂಕರ್‌ ಮಿಜಾರ್‌, ಜಗದೀಶ್‌ ಶೇಣವ ಮತ್ತಿತರರಿದ್ದರು.

ಸೇರಿದ್ದ ಕಾರ್ಯಕರ್ತರು, ಪದಾಧಿಕಾರಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ, ಸಿಹಿ ಹಂಚಿ ಸಂಭ್ರಮಿಸಿದರು.

----------ಕುದ್ರೋಳಿಯಲ್ಲಿ ಅಕ್ರಮ ಕಸಾಯಿಖಾನೆಗೆ ಶುಕ್ರವಾರ ಮೇಯರ್ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಡಾ.ಭರತ್‌ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ನಗರ ಪ್ರದೇಶದಲ್ಲಿಯೇ ಗೋವುಗಳನ್ನು ವಧೆ ಮಾಡಲಾಗುತ್ತಿದೆ. ಇಲ್ಲಿನ ಅಳಕೆಯಲ್ಲಿ ಅಕ್ರಮ ಗೋ ವಧೆ ಕೇಂದ್ರವನ್ನು ಮೇಯರ್ ಮನೋಜ್ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸಚಿವ ಮಾಂಕಾಳ್ ವೈದ್ಯ ಹೇಳಿದಂತೆ ದನಗಳ್ಳರ ಮೇಲೆ ಗುಂಡಿಕ್ಕಿ ಕ್ರಮ ಕೈಗೊಂಡರೆ ಗೋ ವಧೆ ನಿಲ್ಲಲಿದೆ. ದರೋಡೆಕೋರರ ಮೇಲೆ ಫೈರಿಂಗ್ ಮಾಡುವ ಪೊಲೀಸರು ಅಕ್ರಮ ಗೋ ಸಾಗಾಟ ಗಾರರ ವಿರುದ್ಧವೂ ಇಂತಹ ಕ್ರಮ ಕೈಗೊಳ್ಳಲಿ ಎಂದರು. ಅಕ್ರಮ ಕಸಾಯಿಖಾನೆ ನಡೆಯುವ ಸ್ಥಳ‌ ಮುಟ್ಟಗೋಲು ಹಾಕಿಕೊಳ್ಳಬೇಕು. ಪೊಲೀಸರು ಕ್ರಮ ಕೈಗಳ್ಳದಿದ್ದರೆ ಬಿಜೆಪಿ ಕಾರ್ಯಕರ್ತರು ಮತ್ತು‌ ಸಂಘಟನೆಗಳು ಅಕ್ರಮ ಕಸಾಯಿಖಾನೆ ನಡೆಯುವ ಸ್ಥಳಕ್ಕೆ ನುಗ್ಗಲಿದ್ದಾರೆ ಎಂದರು.