ಇಲ್ಲಿನ ಚಂದನವನ ರೈತ ಉತ್ಪಾದಕ ಕಂಪನಿಯ ಆಹಾರ ಸಂಸ್ಕರಣಾ ಘಟಕಕ್ಕೆ ನವದೆಹಲಿಯ ಮೂವರು ಅಧಿಕಾರಿಗಳ ತಂಡ ಇತ್ತೀಚೆಗೆ ಭೇಟಿ ನೀಡಿ, ಕಂಪನಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿತು.
ಚಂದನವನ ರೈತ ಉತ್ಪಾದಕ ಕಂಪನಿಯ ಕಾರ್ಯ ಚಟುವಟಿಕೆಗಳಿಗೆ ಮೆಚ್ಚುಗೆ
ಕನ್ನಡಪ್ರಭ ವಾರ್ತೆ ಡಂಬಳ
ಇಲ್ಲಿನ ಚಂದನವನ ರೈತ ಉತ್ಪಾದಕ ಕಂಪನಿಯ ಆಹಾರ ಸಂಸ್ಕರಣಾ ಘಟಕಕ್ಕೆ ನವದೆಹಲಿಯ ಮೂವರು ಅಧಿಕಾರಿಗಳ ತಂಡ ಇತ್ತೀಚೆಗೆ ಭೇಟಿ ನೀಡಿ, ಕಂಪನಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿತು.ಇದೇ ಸಂದರ್ಭ ಕಂಬನಿಯ ಸಿಬ್ಬಂದಿಗಳಿಗೆ ಆಹಾರ ಉತ್ಪನ್ನಗಳ ಸಂರಕ್ಷಣೆ ಮತ್ತು ಮಾರುಕಟ್ಟೆ ವಿಷಯವಾಗಿ ಬಹಳಷ್ಟು ಸಲಹೆಗಳನ್ನು ನೀಡಿದ ಅಧಿಕಾರಿಗಳು, ಆಹಾರ ಉತ್ಪಾದನಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಂದ ಬಹಳಷ್ಟು ಮಾಹಿತಿ ಪಡೆದರು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಲು ಗುಣಮಟ್ಟ ಹಾಗೂ ಆಕರ್ಷಕ ಪ್ಯಾಕಿಂಗ್ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು.
ಸದ್ಯಕ್ಕೆ ಉಪಯೋಗಿಸುತ್ತಿರುವ ಪ್ಯಾಕಿಂಗ್ ವ್ಯವಸ್ಥೆ ಮತ್ತು ಡಿಸೈನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾರುಕಟ್ಟೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸೋಶಿಯಲ್ ಮೀಡಿಯಾ ಬಳಸಿಕೊಳ್ಳುವಂತೆ ಮಾರ್ಗದರ್ಶನ ಮಾಡಿದರು.ಗದಗ ಜಿಲ್ಲೆಯ ಕೃಷಿ ಉಪ ನಿರ್ದೇಶಕಿ ಸ್ಪೂರ್ತಿ ಜಿ.ಎಸ್., ಕಂಪನಿಯ ಕಾರ್ಯ ಶೈಲಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಕಂಪನಿಯ ಆಡಳಿತ ಮಂಡಳಿಯು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದರಿಂದಲೆ ಕಳೆದ ಜುಲೈ 23 ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಂದ ರಾಷ್ಟ್ರೀಯ ಪ್ರಶಸ್ತಿ ಪಡೆದರು ಎಂಬಿವುದನ್ನು ದೆಹಲಿ ತಂಡಕ್ಕೆ ಮನವರಿಕೆ ಮಾಡಿದರು.
ಬರುವ ದಿನಗಳಲ್ಲಿ ಕಂಪನಿಯ ಕಾರ್ಯ ಚಟುವಟಿಕೆ ಇನ್ನಷ್ಟು ವೇಗವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು. ಕಂಪನಿಯ ಅಧ್ಯಕ್ಷರಾದ ಬಸವರಾಜ ಬೇವಿನಮರದ ಭೇಟಿ ನೀಡಿದ ಕೇಂದ್ರದ ಅಧಿಕಾರಿಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಕಂಪನಿಯ ಕಾರ್ಯ ಚಟುವಟಿಕೆಗಳ ಕುರಿತು ಸ್ಪೂರ್ತಿ ಮಾಹಿತಿ ನೀಡಿದರು.ಈ ಸಂದರ್ಭ ಮುಂಡರಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಡಾ. ಪ್ರಾಣೇಶ್ ಹಾದಿಮನಿ, ಕಮತರ, ಶಿರಗುಪ್ಪಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಎಸ್.ಬಿ. ಸೂಡಿ, ಪರಡ್ಡಿ, ಬಾವಿ, ಶಂಕರಗೌಡ ಪಾಟೀಲ, ಶರಣಮ್ಮ ಪ್ಯಾಟಿ, ಅನಿಲಕುಮಾರ ಪಲ್ಲೇದ, ಬಸವರಾಜ ಹಮ್ಮಿಗಿ, ಲಕ್ಷ್ಮೀ ಸಂದಿಗೋಡ, ಜೈತುನಬಿ ಬಳ್ಳಾರಿ, ತಿಮ್ಮಣ್ಣ ರಾಠಿ, ಸಿಇಓ ಬೀರಪ್ಪ ಬಚೇನಳ್ಳಿ, ಡಿಇಓ ಗೌರಮ್ಮ ಹಡಗಲಿ, ಕಂಪನಿಯ ರೈತ ಮುಖಂಡರಾದ ಬಸವರಾಜ ಪ್ಯಾಟಿ, ಚಿದಾನಂದ ಪರಿಮಳದ, ಮಾರುತಿ ಕರೆಕಲ್ಲ, ಐಸಾಪ್ ಇಂಡಿಯಾ ಫೌಂಡೇಷನ್ ನ ರಾಕೇಶ್ ಗೌಡ ಕದಾಂಪೂರ, ಕಂಪನಿಯ ಸಿಬ್ಬಂದಿಗಳಾದ ದೇವರಾಜ ಕುರಿ, ನವೀನ್ ಬೇವಿನಮರದ, ಅಂಬಿಕಾ ಗುಡಿ ಮತ್ತು ಆಹಾರ ಉತ್ಪಾದನಾ ಘಟಕದ ಸಿಬ್ಬಂದಿಗಳಾದ ಜ್ಯೋತಿ ಬಾವಿ, ಸುಮಿತ್ರಾ ಬೇವಿನಮರದ ಇತರರು ಈ ಸಂದರ್ಭದಲ್ಲಿ ಇದ್ದರು.