ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನಲೆಯಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದಿಂದ ಕಾರುಗುಂದದಲ್ಲಿ ವಿದ್ಯಾರ್ಥಿಗಳಿಗೆ ಸವಿಕಾಫಿಯನ್ನು ನೀಡಲಾಯಿತು.ಕೊಡಗು ಕಾಫಿ ಜಾಗೃತಿ ಸಂಘದಿಂದ ಶಾಲೆಗಳಲ್ಲಿ ಮಕ್ಕಳಿಗೆ ಕಾಫಿ ಪಾನೀಯದ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಂಗವಾಗಿ ಕಾರುಗುಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸವಿಯಾದ ಕಾಫಿ ನೀಡಲಾಯಿತು. ಆರೋಗ್ಯದ ಮೇಲೆ ಕಾಫಿಯಿಂದ ಉಂಟಾಗುವ ಉತ್ತಮ ಪರಿಣಾಮಗಳನ್ನು ವಿವರಿಸಲಾಯಿತು. ಕಾಫಿಯಿಂದಾಗಿ ಪ್ರತಿ ನಿತ್ಯ ಮನುಷ್ಯನಿಗೆ ಹೆಚ್ಚು ಲವಲವಿಕೆ ಬರುತ್ತದೆ ಎಂದೂ ತಿಳಿಸಲಾಯಿತು. ಕೊಡಗಿನಲ್ಲಿ ಕಾಫಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಈ ನಿಟ್ಟಿನಲ್ಲಿ ಕೃಷಿಕರು ಮತ್ತು ಕಾರ್ಮಿಕರ ಶ್ರಮವನ್ನೂ ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.ಸಂಸ್ಥೆಯ ಪ್ರಮುಖರಾದ ಕುಟ್ಟೇಟಿರ ಕುಮಾರಿ ಕುಂಜ್ಞಪ್ಪ, ನಾಟೋಳಂಡ ಗಿರಿಜಾ ಚರ್ಮಣ್ಣ, ಕುಟ್ಟೇಟಿರ ಗೌರಮ್ಮ ಕಾವೇರಪ್ಪ, ಜರೀನ್ ಉತ್ತಪ್ಪ, ಮೊಟ್ಟೆಯಂಡ ಲೀನಾ ಕುಟ್ಟಪ್ಪ, ಪಟ್ಟಮಾಡ ಲೇಖಾ ಪೊನ್ನಪ್ಪ, ಕಬ್ಬಚ್ಚಿರ ಸಬಿತ ಉತ್ತಯ್ಯ, ಶಾಲಾ ಮುಖ್ಯ ಶಿಕ್ಷಕಿ ಪರ್ವೀನ್ ಹಾಜರಿದ್ದು ಮಾಹಿತಿ ನೀಡಿದರು.