ಮನೆ ಮನೆಗೂ ಅಕ್ಷತೆ ಕಾಳು ಹಾಗೂ ಶ್ರೀರಾಮನ ಪೋಟೋ ತಲುಪಿಸಿ

| Published : Dec 18 2023, 02:00 AM IST

ಸಾರಾಂಶ

ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮಮಂದಿರ ಉದ್ಘಾಟನಾ ಪ್ರಯುಕ್ತ ಪ್ರತಿ ಮನೆ ಮನೆಗೂ ಅಕ್ಷತೆ ಕಾಳು ಹಾಗೂ ಶ್ರೀರಾಮನ ಪೋಟೋವನ್ನು ತಲುಪಿಸಿ ಆಹ್ವಾನಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕ ಕಾರ್ಯವಾಹ ಚಿಕ್ಕದೇವ ಕುಪ್ಪೇಲೂರ ಹೇಳಿದರು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮಮಂದಿರ ಉದ್ಘಾಟನಾ ಪ್ರಯುಕ್ತ ಪ್ರತಿ ಮನೆ ಮನೆಗೂ ಅಕ್ಷತೆ ಕಾಳು ಹಾಗೂ ಶ್ರೀರಾಮನ ಪೋಟೋವನ್ನು ತಲುಪಿಸಿ ಆಹ್ವಾನಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕ ಕಾರ್ಯವಾಹ ಚಿಕ್ಕದೇವ ಕುಪ್ಪೇಲೂರ ಹೇಳಿದರು.

ತಾಲೂಕಿನ ಉದಗಟ್ಟಿ ಗ್ರಾಮದ ಶ್ರೀ ವಿದ್ಯಾಶಂಕರ ಮಠದಲ್ಲಿ ಅಯೋಧ್ಯ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನ ಅಭಿಯಾನದ ಮೆಡ್ಲೇರಿ ಹೋಬಳಿ ಸಭೆಯಲ್ಲಿ ಅವರು ಮಾತನಾಡಿದರು. ರಾಮಮಂದಿರ ನಿರ್ಮಾಣಕ್ಕೆ ಸಾಧು-ಸಂತರು, ರಾಷ್ಟ್ರೀಯ ಸ್ವಯಂ ಸೇವಕರು, ಹಾಗೂ ಅನೇಕ ಮಹಾ ಪುರುಷರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ಅವರ ಹೋರಾಟ, ತ್ಯಾಗ, ಬಲಿದಾನದಿಂದ ರಾಮ ಮಂದಿರ ಜ.22ರಂದು ಲೋಕಾರ್ಪಣೆಗೊಳ್ಳುತ್ತಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಗತಿ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೆಡ್ಲೇರಿ ಮಂಡಲ ಕಾರ್ಯವಾಹ ವಿಶ್ವನಾಥ ದೂಪದ ಮಾತನಾಡಿ, ತಾವೆಲ್ಲರೂ ಭಕ್ತಿಯಿಂದ ಮನೆಮನೆಗೂ ಅಕ್ಷತೆ ಕಾಳನ್ನು ವಿತರಿಸಿ ಆಹ್ವಾನಿಸಬೇಕು. ತಿ ಮನೆಗಳಲ್ಲೂ ರಾಮನಾಮ ಜಪ ಹಾಗೂ ಮನೆಗಳಲ್ಲಿ ಉದ್ಘಾಟನೆ ದಿನದಂದು 5 ದೀಪಗಳನ್ನು ಹಚ್ಚುವ ಮುಖಾಂತರ ಮತ್ತೊಮ್ಮೆ ದೀಪಾವಳಿಯನ್ನು ಆಚರಿಸಬೇಕೆಂದು ಮನವಿ ಮಾಡಿದರು.

ತಾಲೂಕಿನ ಹರನಗಿರಿ, ಮೆಡ್ಲೇರಿ, ಕುದರಿಹಾಳ, ಚಿಕ್ಕಅರಳಿಹಳ್ಳಿ, ಚಿಕ್ಕಕುರುವತ್ತಿ, ಉದಗಟ್ಟಿ, ಬೇಲೂರ, ಹೀಲದಹಳ್ಳಿ, ಚೌಡಯ್ಯದಾನಪುರ, ಕೊಣನತಂಬಿಗೆ ಗ್ರಾಮಗಳ ಶ್ರೀರಾಮ ಭಕ್ತರು ಹಾಗೂ ಯುವಕರು ಉಪಸ್ಥಿತರಿದ್ದರು.