ಕೇಂದ್ರದ ಸಾಧನೆಗಳ ಮನೆ ಮನೆಗೆ ತಲುಪಿಸಿ: ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್

| Published : Mar 24 2024, 01:40 AM IST

ಕೇಂದ್ರದ ಸಾಧನೆಗಳ ಮನೆ ಮನೆಗೆ ತಲುಪಿಸಿ: ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್
Share this Article
  • FB
  • TW
  • Linkdin
  • Email

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ್ದು, ಈ ವಿಚಾರವೇ ಬಿಜೆಪಿ 370 ಸೀಟುಗಳ ಗೆಲ್ಲಲು ಟಾರ್ಗೆಟ್ ಮಾಡಿದ್ದು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಸೇರಿ ವಿವಿಧ ವಿಚಾರಗಳ ಸಾರ್ವಜನಿಕರ ಮುಂದಿಡುವ ಕೆಲಸ ಆಗಬೇಕು ಎಂದರು. ಈ ಚುನಾವಣೆಯ ನಂತರ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲಿಸಿವುದರಲ್ಲಿ ಸಂದೇಹವಿಲ್ಲ. ಈಗಾಗಲೇ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಕೇಂದ್ರದ ಕಾಂಗ್ರೆಸ್‌ ಮುಖಂಡರ ಎಟಿಎಂ ಆಗಿದೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಮನೆಮನೆಗೆ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.

ಹೊಳೆಹೊನ್ನೂರು, ಆನವೇರಿ ಹಾಗೂ ಅರಹತೊಳಲು ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿ ಕೇಂದ್ರಗಳ ಸಭೆ ಉದ್ದೇಶಿಸಿ ಮಾತನಾಡಿ ಕೇಂದ್ರ ಸರ್ಕಾರದ ಯೋಜನೆಗಳ ಸಂಸದ ಬಿ.ವೈ.ರಾಘವೇಂದ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು, ಸ್ವಚ್ಛ ಭಾರತ್ ಯೋಜನೆ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ, ಜಲ ಜೀವನ್ ಮಿಷನ್ ಯೋಜನೆ, ರೈಲ್ವೆ, ರಸ್ತೆ, ಸಾರಿಗೆ, ವಿಮಾನ ನಿಲ್ದಾಣ, ಶಿಕ್ಷಣ ಸಂಸ್ಥೆ ಇಂತಹ ಹಲವು ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕಿದೆ ಎಂದರು.

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ್ದು, ಈ ವಿಚಾರವೇ ಬಿಜೆಪಿ 370 ಸೀಟುಗಳ ಗೆಲ್ಲಲು ಟಾರ್ಗೆಟ್ ಮಾಡಿದ್ದು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಸೇರಿ ವಿವಿಧ ವಿಚಾರಗಳ ಸಾರ್ವಜನಿಕರ ಮುಂದಿಡುವ ಕೆಲಸ ಆಗಬೇಕು ಎಂದರು. ಈ ಚುನಾವಣೆಯ ನಂತರ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲಿಸಿವುದರಲ್ಲಿ ಸಂದೇಹವಿಲ್ಲ. ಈಗಾಗಲೇ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಕೇಂದ್ರದ ಕಾಂಗ್ರೆಸ್‌ ಮುಖಂಡರ ಎಟಿಎಂ ಆಗಿದೆ ಎಂದರು.

ಕೇಂದ್ರ ಸರ್ಕಾರವು ಜನರಿಗೆ ಶಾಶ್ವತ ಯೋಜನೆಗಳ ನೀಡುವಲ್ಲಿ ಸಫಲಾಗುತ್ತಿದ್ದು, ಇದರೊಂದಿಗೆ ದೇಶದ ಆರ್ಥಿಕತೆ ಕುಸಿಯದಂತೆ ನಿಭಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಮೋದಿ ಆಡಳಿತದಲ್ಲಿ ರಾಷ್ಟ್ರ ಸುಭೀಕ್ಷವಾಗಿದ್ದು, ಜಮ್ಮು ಕಾಶ್ಮೀರದಲ್ಲೂ ಭಾರತದ ಧ್ವಜ ಹಾರಾಡುತ್ತಿರುವುದು ಕಾಣಬಹುದು ಎಂದರು.

ಮಾಜಿ ಶಾಸಕ ಕುಮಾರಸ್ವಾಮಿ, ಕ್ಷೇತ್ರದ ಸಂಚಾಲಕ ವಿರೂಪಾಕ್ಷಪ್ಪ, ಮಂಡಲ ಅಧ್ಯಕ್ಷ ಮಲ್ಲೇಶ್, ಜಿಲ್ಲಾ ಚುನಾವಣಾ ಪ್ರಮುಖ್ ಶ್ರೀನಿವಾಸ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರೇಖಾ ಬೋಸ್ಲೆ, ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರು ಕುಮಾರ್, ಅರಕೆರೆ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರಕೆರೆ ಸಾಗರ್, ಹೊಳೆಹೊನ್ನೂರು ಮಂಡಲದ ರಾಧಾ ಕೃಷ್ಣ ಸೇರಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರಿದ್ದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗೆ ₹50 ಸಾವಿರ ಕೋಟಿ ಅನುದಾನ ನೀಡಿದ್ದು, ಬಿಟ್ಟರೆ ಜಿಲ್ಲೆಗೆ ಯಾವುದೇ ಅನುದಾನ ನೀಡಿಲ್ಲ. ಅಧಿಕಾರಕ್ಕೆ ಬಂದು ವರ್ಷವಾದರೂ ಅಭಿವೃದ್ಧಿ ಬಗ್ಗೆ ಒಂದೇ ಒಂದು ಮಾತನಾಡದೇ ಕಾಲಹರಣ ಮಾಡುತ್ತಿದೆ. ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಜನರ ದಾರಿ ತಪ್ಪಿಸಲು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದೆ.

ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ