ಸಾರಾಂಶ
ಕನ್ನಡಪ್ರಭವಾರ್ತೆ ಪಾವಗಡ
ಸರ್ಕಾರ ಜನರಿಗಾಗಿ ಪಂಚಗ್ಯಾರಂಟಿ ಅನುಷ್ಠಾನ ಮಾಡಿದ್ದ ಈ ಸಂಬಂಧ ಇಲಾಖೆಯ ಅಧಿಕಾರಿಗಳು ಜುಲೈ ಹಾಗೂ ಸೆಪ್ಟೆಂಬರ್ ಮಾಹೆಯ ಗ್ಯಾರಂಟಿ ಯೋಜನೆಯ ಪ್ರಗತಿ ಸಂಪೂರ್ಣ 25 ಪ್ರತಿಗಳ ವರದಿಯನ್ನು ಕಚೇರಿಗೆ ತಪ್ಪದೇ ಸಲ್ಲಿಸುವಂತೆ ತಾಪಂ ಇಒ ಬಿ.ಕೆ.ಉತ್ತಮ್ ಆದೇಶಿಸಿದರು.ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ನಾಲ್ಕು ಹೋಬಳಿಯ ವ್ಯಾಪ್ತಿಯ ಗ್ರಾಮಗಳ ವಿವರ ಹಾಗೂ ಜನ ಸಂಖ್ಯೆ ಹಾಗೂ ಪಡಿತರ ಚೀಟಿಗಳ ಸಂಖ್ಯೆ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಯೋಜನೆಯ ವ್ಯಾಪ್ತಿಗೆ ಬರುವ ಕುಟುಂಬಗಳ ಸಂಖ್ಯೆ ಮತ್ತು ಇತರೆ ಯೋಜನೆಗಳು ತಲುಪುವಲ್ಲಿ ಸಮಸ್ಯೆ ಕುರಿತು ಸಿಡಿಪಿಒ ಹಾಗೂ ಆಹಾರ ಇಲಾಖೆ ಶಿರಸ್ತೇದಾರ್ ಮತ್ತು ತಾಲೂಕು ಬಿಸಿಎಂ ವಿಸ್ತಾರಣಾಧಿಕಾರಿ ಮತ್ತು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ, ಸಮಸ್ಯೆ ಇದ್ದರೆ ಕೂಡಲೇ ನಿವಾರಿಸಿ ಪ್ರತಿಯೊಬ್ಬ ಕುಟುಂಬಕ್ಕೂ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಬೇಕು. ಇದು ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾಗಿದ್ದು, ಪ್ರತಿಯೊಬ್ಬ ಕುಟುಂಬದ ಫಲಾನುಭವಿಗೂ ಯೋಜನೆಗಳ ಸೌಲಭ್ಯ ಸಿಗಬೇಕು. ಆದೇಶಿಸಿದರು.
ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಕೆ.ಎಸ್.ಪಾಪಣ್ಣ ಮಾತನಾಡಿ, ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಗ್ಯಾರಂಟಿಗಳಿಂದ ಯಾರು ವಂಚಿತರಾಗಬಾರದು. ಸರ್ಕಾರದ ನಿಯಮನುಸಾರ ಪ್ರತಿಯೊಬ್ಬರಿಗೆ ಯೋಜನೆಯ ಸೌಲಭ್ಯ ಸಿಗಬೇಕು. ಆ ನಿಟ್ಟಿನಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ನಿಗಾವಹಿಸಿ ಕೆಲಸ ಮಾಡಬೇಕು.ಯೋಜನೆಯ ಸಫಲತೆ ಹಾಗೂ ಇತರೆ ಸಮಸ್ಯೆ ಕುರಿತು ಪ್ರತಿ ತಿಂಗಳು ತಾಲೂಕು ಪಂಚಾಯಿತಿಗೆ ದಾಖಲೆ ಸಮೇತ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕು ಪ್ರಗತಿ ಕುರಿತು ಈಗಾಗಲೇ ಶಾಸಕ, ಹಾಗೂ ತುಮುಲ್ ಅಧ್ಯಕ್ಷ,ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ವಿ.ವೆಂಕಟೇಶ್ ಮತ್ತು ಮಾಜಿ ಸಚಿವ ವೆಂಕಟರಮಣಪ್ಪ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆ ಅಡಿ ಕೋಟ್ಯಂತರ ರು.ವೆಚ್ಚ ವಿನಿಯೋಗಿಸಿ ಶಾಲಾ ಕಾಲೇಜು ಕಟ್ಟಡಗಳ ದುರಸ್ತಿ ,ಗ್ರಾಮೀಣ ಸಂಪರ್ಕ ರಸ್ತೆ ಪ್ರಗತಿ, ಕುಡಿಯುವ ನೀರು.ಸಿಸಿರಸ್ತೆ ಚರಂಡಿ ಹಾಗೂ ಶುಭ ಸಮಾರಂಭಗಳಿಗೆ, ಸಮುದಾಯ ಭವನಗಳ ನಿರ್ಮಾಣ,ಶೈಕ್ಷಣಿಕ ಪ್ರಗತಿಗೆ ಶಾಲಾ ಕಾಲೇಜುಗಳ ಮಂಜೂರಾತಿ ಇತರೆ ಅನೇಕ ರೀತಿಯ ಪ್ರಗತಿ ಕಾರ್ಯಗಳು ಕೈಗೊಂಡಿರುವುದು ಸಂತಸ ತಂದಿದೆ. ಇದೇ ರೀತಿಯ ತಾಲೂಕು ಪ್ರಗತಿಯಲ್ಲಿ ಅಧಿಕಾರಿಗಳು ಹೆಚ್ಚು ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ಇದೇ ವೇಳೆ ಗ್ಯಾರಂಟಿ ಅನುಷ್ಟಾನ ಸಮಿತಿಯ ಸದಸ್ಯರಾದ ಕೆ.ಟಿ.ಹಳ್ಳಿಯ ಡಿ.ರಂಗೇಗೌಡ,ಗುಮ್ಮಘಟ್ಟದ ಕೆ.ಶ್ರೀನಿವಾಸಲು,ಹೊಸದುರ್ಗ ದಿವಾಕರ್ ,ಉಮೇಶ್.ಸುಮ ಅನಿಲ್,ಲಕ್ಷ್ಮೀ, ಎಂ.ಎಲ್.ಗೋಪಿ, ವೀರಾಂಜಿನೇಯ, ಹೊಸಕೋಟೆ ಶಂಷುದ್ದೀನ್,ಮಜೀದ್ ಖಾನ್ ಇತರರಿದ್ದರು.