ಷರತ್ತು ಉಲ್ಲಂಘಿಸುತ್ತಿರುವ ಬಾರ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹ

| Published : Apr 02 2024, 01:01 AM IST

ಷರತ್ತು ಉಲ್ಲಂಘಿಸುತ್ತಿರುವ ಬಾರ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ ನಗರದಲ್ಲಿ ಬಾರ್‌ಗಳು ನಿಗದಿತ ಸಮಯಕ್ಕೂ ಮುಂಚೆ ತೆರೆಯುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಕರ್ನಾಟಕ ಯುವಗರ್ಜನೆ ಪದಾಧಿಕಾರಿಗಳು ಅಬಕಾರಿ ಇಲಾಖೆಯ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ಬಾರ್‌ಗಳು ನಿಗದಿತ ಸಮಯಕ್ಕೂ ಮುಂಚೆ ತೆರೆಯುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಕರ್ನಾಟಕ ಯುವಗರ್ಜನೆ ಪದಾಧಿಕಾರಿಗಳು ಅಬಕಾರಿ ಇಲಾಖೆಯ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಬಸವರಾಜ ಖಂಡೇಕರ ಮಾತನಾಡಿ, ವಿಜಯಪುರ ನಗರದ ಹಲವು ಬಾರ್‌ಗಳು ನಸುಕಿನ ಜಾವ ತೆರೆಯುತ್ತಿದ್ದು, ಇದರಿಂದ ಕುಡಿತದ ವ್ಯಸನಕ್ಕೆ ಒಳಗಾದವರು ಬೆಳಗ್ಗೆಯೇ ಹೋಗಿ ಕುಡಿದು ನಗರದ ರಸ್ತೆಗಳಲ್ಲಿ ಬಿದ್ದು ಒದ್ದಾಡುವುದು, ಅಸಭ್ಯ ವರ್ತನೆ ತೋರುತ್ತಾ ನಗರದಲ್ಲಿ ತಿರುಗುವುದರಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ನಗರದಲ್ಲಿ ತಿರುಗಾಡದಂಥ ಪರಿಸ್ಥಿತಿ ಉಂಟಾಗಿದೆ. ನಗರದ ಹಲವು ಬಾರ್‌ಗಳು ಅಬಕಾರಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೊರಿ ರಾಜಾರೋಷವಾಗಿ ಮಧ್ಯ ಮಾರಾಟ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದೂರಿದರು.

ಇಲಾಖೆಯಿಂದ ಮದ್ಯ ಅಂಗಡಿಗಳಿಗೆ ಷರತ್ತುಗಳೊಂದಿಗೆ ಪರವಾನಗಿ ನೀಡಿರುತ್ತಾರೆ. ಛಿಟ-೪ ಪರವಾನಗಿ ಹೊಂದಿದ್ದರೆ ಕೌಂಟರ್‌ನಲ್ಲಿ ಪಾರ್ಸೆಲ್‌ ತೆಗೆದುಕೊಂಡು ಹೋಗಬೇಕು. ಆದರೆ ಅನೇಕ ಬಾರ್‌ಗಳಲ್ಲಿ ಅಲ್ಲಿಯೇ ಕುಡಿಯಲು ಕೊಡುತ್ತಿದ್ದಾರೆ. ಛಿಟ-೪ ಪರವಾನಗಿ ಹೊಂದಿದ್ದಲ್ಲಿ ಕ್ಲಬ್ ಸದಸ್ಯರಿಗೆ ಮಾತ್ರ ಮದ್ಯ ಕುಡಿಯಲು ಅವಕಾಶ ಇದ್ದು, ಆದರೆ, ಇಲ್ಲಿ ಎಲ್ಲರಿಗೂ ಮದ್ಯ ಸೇವನೆಗೆ ಅವಕಾಶ ನೀಡುತ್ತಾರೆ. ಇದು ಅಕ್ಷಮ್ಯ ಅಪರಾಧ. ವಿಜಯಪುರ ನಗರದ ಹೃದಯ ಭಾಗವಾದ ಗಾಂಧಿ ಚೌಕ್ ಸುತ್ತಮುತ್ತಲಿನ ಬಾರ್‌ಗಳು ಬೆಳಗ್ಗೆಯೇ ಓಪನ್ ಆಗಿರುತ್ತವೆ. ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.೧೫ ದಿನಗಳಲ್ಲಿ ಇವುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ವಿಜಯಪುರ ಜಿಲ್ಲಾಧಿಕಾರಗಳ ಕಚೇರಿ ಎದುರು ಜಿಲ್ಲಾ ಉಸ್ತುವಾರಿ ಸಚಿವರು ಹೋರಾಟದ ಸ್ಥಳಕ್ಕೆ ಬರುವವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಂಘಟನೆಯ ಸದಸ್ಯ ಮಹೇಶ ವಠಾರ, ಗಣಪತಿ ಉಪ್ಪಾರ, ಸೋಮು ಹಿರೇಮಠ, ಸಾಗರ ಸವದಿ, ಸಿದ್ದು ನಾಗಠಾಣ, ಲಾಳೇಮಶಾಕ ನದಾಫ, ಮಹಾದೇವ ಪವಾರ ಮುಂತಾದವರು ಇದ್ದರು.