ಸಾರಾಂಶ
ಹುಣಸಗಿ ತಾಲೂಕಿನ ಮುದನೂರು(ಬಿ) ಗ್ರಾಪಂ ಪಿಡಿಒ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ದಲಿತ ಸೇನೆ ತಾಲೂಕು ಸಮಿತಿ ವತಿಯಿಂದ ಉಪತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹುಣಸಗಿ
ಸಮೀಪದ ಮುದನೂರ (ಬಿ) ಗ್ರಾಮದ ಜನತಾ ಕಾಲೋನಿಯಲ್ಲಿ ಅಶುದ್ಧ (ಕಲುಷಿತ) ನೀರು ಸೇವನೆಯಿಂದ ಅಸ್ವಸ್ಥಗೊಂಡ ಬಡ ಜನರ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಭಿವೃದ್ಧಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ತಾಲೂಕು ದಲಿತ ಸೇನೆ ಸಮಿತಿ ವತಿಯಿಂದ ಪಟ್ಟಣದ ತಹಸೀಲ್ ಕಚೇರಿ ಎದುರು ಪ್ರತಿಭಟಿಸಲಾಯಿತು.ಸಂಘದ ತಾಲೂಕು ಅಧ್ಯಕ್ಷ ವಿರೇಶ ಗುಳಬಾಳ ಮಾತನಾಡಿ, ಜನತಾ ಕಾಲೋನಿಯಲ್ಲಿ ಕೊಳವೆ ಬಾವಿ ಹಾಗೂ ಬಾವಿ ನೀರು ಸ್ವಚ್ಛತೆಗೊಳಿಸದೇ ಬೇಜವಾಬ್ದಾರಿ ತೋರಿದ್ದಾರೆ. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೇ ಕರ್ತವ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಜನ ಅಸ್ವಸ್ಥರಾಗಬೇಕಾಯಿತು. ಗ್ರಾಪಂ ಪಿಡಿಒ ಹಾಗೂ ತಾಪಂ ಇಒ ಅವರನ್ನು ತಕ್ಷಣ ಅಮಾನತು ಮಾಡಿ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಾರ್ವಜನಿಕರು ಗ್ರಾಪಂ ಹೋಗಿ ತಮ್ಮ ಸಮಸ್ಯೆ ಹೇಳಿಕೊಂಡರೂ ಅವರ ಅಳಲು ಆಲಿಸುವುದಿಲ್ಲ. ಅಧಿಕಾರ ಮರೆತು ಅಧಿಕಾರಿಗಳು ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ. ಇಂತಹವರನ್ನು ವಜಾಗೊಳಿಸಿ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿ ಪತ್ರವನ್ನು ಉಪತಹಸೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಸಲ್ಲಿಸಲಾಯಿತು.ಈ ವೇಳೆ ದಲಿತ ಸೇನೆಯ ನಿಂಗರಾಜ ಹೊಸಮನಿ, ಮೈಬೂಬ ಹಂದ್ರಾಳ, ಯಂಕು ದೊರೆ, ಮೈಬೂಬ ಮುಲ್ಲಾ, ಆಸಿಮ್ ಪಟೇಲ, ಮಲ್ಲು ನಾಟೇಕಾರ ಸೇರಿದಂತೆ ಇತರರಿದ್ದರು.