ನಕಲಿ ಬಿತ್ತನೆ ಬೀಜದಿಂದ ನಷ್ಟವಾಗಿರುವ ಗಡಿಭಾಗದ ನಂದಾಲಗಡ್ಡ ರೈತ ಚಂಗಾಲರೆಡ್ಡಿ ತೋಟಕ್ಕೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದ ನಾರಾಯಣಗೌಡ, ರೈತರನ್ನು ಶೋಷಣೆ ಮಾಡುವ ನಕಲಿ ಬಿತ್ತನೆ ಬೀಜ ಹಾಗೂ ಅನಧಿಕೃತ ನರ್ಸರಿಗಳಿಗೆ ಕಡಿವಾಣ ಹಾಕಲು ಸರ್ಕಾರ ಪ್ರಬಲ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ, ಕೆಜಿಎಫ್ನಕಲಿ ಟೊಮೆಟೋ ಬಿತ್ತನೆ ಬೀಜ ವಿತರಣೆ ಮಾಡಿ ರೈತರಿಗೆ ಲಕ್ಷಾಂತರ ರುಪಾಯಿ ನಷ್ಟ ಉಂಟು ಮಾಡಿರುವ ಸೆಮಿನೀಸ್ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಂಡು ನಷ್ಟವಾಗಿರುವ ನಂದಾಲಗಡ್ಡ ರೈತ ಚಂಗಾಲರೆಡ್ಡಿ ಅವರಿಗೆ ೫೦ ಲಕ್ಷ ರು. ಪರಿಹಾರ ನೀಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ನಕಲಿ ಬಿತ್ತನೆ ಬೀಜದಿಂದ ನಷ್ಟವಾಗಿರುವ ಗಡಿಭಾಗದ ನಂದಾಲಗಡ್ಡ ರೈತ ಚಂಗಾಲರೆಡ್ಡಿ ತೋಟಕ್ಕೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದ ನಾರಾಯಣಗೌಡ, ರೈತರನ್ನು ಶೋಷಣೆ ಮಾಡುವ ನಕಲಿ ಬಿತ್ತನೆ ಬೀಜ ಹಾಗೂ ಅನಧಿಕೃತ ನರ್ಸರಿಗಳಿಗೆ ಕಡಿವಾಣ ಹಾಕಲು ಸರ್ಕಾರ ಪ್ರಬಲ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದರು. ಮಾರುಕಟ್ಟೆಯಲ್ಲಿ ಟೊಮೆಟೋಗೆ ಉತ್ತಮ ಬೆಲೆ ಇದ್ದು, ಬೆಳೆಯೂ ಸಮೃದ್ಧವಾಗಿ ಬಂದಿದೆ. ಆದರೆ ಸಮನೀಸ್ ಕಂಪನಿಯ ಅಥಿಕ್ ತಳಿಯ ಟೊಮೆಟೋ ಸಸಿಗಳು ಗಿಡತುಂಬ ಕಾಯಿ ಬಿಟ್ಟಿದ್ದು, ಶೇಕಡ ೭೫ ರಷ್ಟು ಮುಡ್ಡಿ ಡ್ಯಾಗ್ ಕಪ್ಪು ರೋಗ ಬಂದಿದ್ದು, ಸಂಪೂರ್ಣವಾಗಿ ಕೈಗೆ ಬಂದ ಫಸಲು ಬಾಯಿಗೆ ಬಾರದೆ ಲಕ್ಷಾಂತರ ರು. ಬಂಡವಾಳ ಹಾಕಿರುವ ರೈತರು ಕಣ್ಣೀರು ಹಾಕುತ್ತಿರುವುದಾಗಿ ತಿಳಿಸಿದರು.ಯುವ ರೈತ ಭಾಸ್ಕರ್‌ರೆಡ್ಡಿ ಮಾತನಾಡಿ, ೨೫ ವರ್ಷದಿಂದ ಟೊಮೆಟೋ ಬೆಳೆಯುತ್ತಿದ್ದೇವೆ. ಯಾವ ವರ್ಷವು ಈ ರೀತಿ ಕಳಪೆ ಟೊಮೆಟೋ ಬೆಳೆದಿಲ್ಲ. ಉತ್ತಮವಾದ ಸಸಿಗಳನ್ನು ನೀಡುತ್ತಿದ್ದ ಕಂಪನಿಗಳು ಇಂದು ತೋಟಗಾರಿಕಾ ಅಧಿಕಾರಿಗಳ ಹಿಡಿತವಿಲ್ಲದೆ ತಮಗೆ ಇಷ್ಟ ಬಂದ ಹೊಸ ತಳಿಗಳನ್ನು ಕೆಲವು ನರ್ಸರಿಗಳ ಜೊತೆ ಶಾಮೀಲಾಗಿ ರೈತರನ್ನು ವಂಚನೆ ಮಾಡುತ್ತಿರುವುದಾಗಿ ತಿಳಿಸಿದರು.
ಕಂಪನಿಯಿಂದ ೫೦ ಲಕ್ಷ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ನಷ್ಟ ಬೆಳೆ ಸಮೇತ ನ್ಯಾಯಕ್ಕಾಗಿ ಸ್ಥಳೀಯ ಶಾಸಕರಾದ ರೂಪಶಶಿಧರ್ ರವರ ಮನೆ ಮುಂದೆ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.ತೋಟ ವೀಕ್ಷಣಾ ಸಮಯದಲ್ಲಿ ಕಾರಿವಿಶ್ವನಾಥ, ಬೇತಮಂಗಲ ನಾರಾಯಣಸ್ವಾಮಿ, ಕ್ಯಾಸಂಬಳ್ಳಿ ಪ್ರತಾಪ್, ಪುತ್ತೇರಿ ರಾಜು, ಗಿರೀಶ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ನೊಂದ ರೈತರು ಹಾಜರಿದ್ದರು.೨೭ಕೆಜಿಎಫ್೩ನಕಲಿ ಬೀಜಗಳಿಂದ ಫಸಲು ಬಾರದೆ ಇರುವ ಟೊಮೆಟೋ ತೋಟದಲ್ಲಿ ರೈತರ ಪ್ರತಿಭಟನೆ.೨೭ಕೆಜಿಎಫ್೪ಕಳಪೆ ಬಿತ್ತನೆ ಬೀಜದಿಂದ ಟೊಮೆಟೋ ನೆಲಕ್ಕೆ ಉದಿರಿರುವುದು.