ರಾಷ್ಟ್ರೀಯ ಹಬ್ಬ ಆಚರಿಸದ ಕಾನ್ವೆಂಟ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯ

| Published : Sep 19 2025, 01:00 AM IST

ರಾಷ್ಟ್ರೀಯ ಹಬ್ಬ ಆಚರಿಸದ ಕಾನ್ವೆಂಟ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿರುವ, ರಾಷ್ಟ್ರೀಯ ಹಬ್ಬಗಳನ್ನು ತಿರಸ್ಕರಿಸುತ್ತಿರುವ ಕಾನ್ವೆಂಟ್ ಶಾಲೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಮುಖಾಂತರ ಶ್ರೀರಾಮ ಸೇನಾ ಜಿಲ್ಲಾ ಘಟಕ ಒತ್ತಾಯಿಸಿದೆ.

- ದಸರಾ ವೇಳೆ ಕಾನ್ವೆಂಟ್‌ನಲ್ಲಿ ಪರೀಕ್ಷೆಗಳು: ಶ್ರೀರಾಮ ಸೇನೆ ಆಕ್ರೋಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯ ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿರುವ, ರಾಷ್ಟ್ರೀಯ ಹಬ್ಬಗಳನ್ನು ತಿರಸ್ಕರಿಸುತ್ತಿರುವ ಕಾನ್ವೆಂಟ್ ಶಾಲೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಮುಖಾಂತರ ಶ್ರೀರಾಮ ಸೇನಾ ಜಿಲ್ಲಾ ಘಟಕ ಒತ್ತಾಯಿಸಿದೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಶ್ರೀರಾಮ ಸೇನೆ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಮನವಿ ಅರ್ಪಿಸಿದರು.

ಮುಖಂಡರು ಮಾತನಾಡಿ, ಕಾನ್ವೆಂಟ್ ಶಾಲೆಗಳು ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸುತ್ತಿವೆ. ರಾಷ್ಟ್ರೀಯ ಹಬ್ಬಗಳನ್ನು ತಿರಸ್ಕಾರ ಮಾಡುತ್ತಿವೆ. ನಮ್ಮ ನೆಲದ ಆಚರಣೆಗಳು ವೈವಿಧ್ಯತೆಯಿಂದ ಕೂಡಿವೆ. ಆಹಾರ, ಬಂಧುತ್ವ, ವೇಷಭೂಷಣ, ಪೂಜಾ ವಿಧಾನ, ಸಾಮರ್ಥ್ಯದಿಂದ ಕೂಡಿದ ಹಬ್ಬಗಳನ್ನು ಆಚರಿಸುವುದು, ಮುಂದಿನ ಪೀಳಿಗೆಗೆ ಅವುಗಳನ್ನು ಬಿಟ್ಟು ಹೋಗಬೇಕು, ದಸರಾ (ವಿಜಯ ದಶಮಿ) ಹಬ್ಬ ಅತ್ಯಂತ ಮಹತ್ವ ಪಡೆದಿದೆ. ಜಾತಿ, ಭಾಷೆ, ರಾಜ್ಯ ಎಲ್ಲವನ್ನೂ ಮೀರಿ ಆಚರಿಸುವ ಹಬ್ಬವಿದು. ಕಾನ್ವೆಂಟ್ ಸೇರಿದಂತೆ ಶಾಲಾ- ಕಾಲೇಜುಗಳಿಗೆ ರಜೆ ಕೊಟ್ಟು, ಮಕ್ಕಳಿಗೆ ಹಬ್ಬ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಕಾನ್ವೆಂಟ್ ಶಾಲೆಗಳಲ್ಲಿ ಶೇ.90ರಷ್ಟು ವಿದ್ಯಾರ್ಥಿಗಳು, ಶಿಕ್ಷಕ- ಶಿಕ್ಷಕಿಯರು, ಸಿಬ್ಬಂದಿ ಹಿಂದೂಗಳೇ ಇದ್ದರೂ ದಸರಾ ರಜೆ ರದ್ದುಪಡಿಸಿದ್ದು, ತಕ್ಷಣ‍ ಅದನ್ನು ಸರಿಪಡಿಸಲಿ. ದಸರಾ ರಜೆ ನೀಡದ ಕಾನ್ವೆಂಟ್ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನ್ವೆಂಟ್‌ ಶಾಲೆಗಳಲ್ಲಿ ಶೇ.5ರಿಂದ 10ರಷ್ಟು ಮಾತ್ರ ಕ್ರೈಸ್ತ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಹುಸಂಖ್ಯಾತ ಹಿಂದೂ ಮಕ್ಕಳಿದ್ದರೂ ಕಡ್ಡಾಯವಾಗಿ ಕ್ರಿಸ್‌ಮಸ್‌ಗೆ 10 ದಿನ ರಜೆ ನೀಡುತ್ತಾರೆ ಎಂದು ದೂರಿದ ಅವರು, ಸಂಬಂಧಿಸಿದ ಕಾನ್ವೆಂಟ್ ಶಾಲೆಗಳ ಆಡಳಿತ ಮಂಡಳಿಗಳು, ಮುಖ್ಯಸ್ಥರು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಮುಖಂಡರು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಮಣಿ ಸರ್ಕಾರ, ಎಂ.ಶ್ರೀಧರ, ಪಿ.ಸಾಗರ, ರಾಜು ದೊಡ್ಡಮನೆ, ಆಲೂರು ರಾಜಶೇಖರ, ಆರ್.ಎ.ವಿನಯ್, ಎನ್.ರಘು, ಶ್ರೀಧರ ಕಂಮಾಸ್, ಜೆ.ಮಧು, ಸುನೀಲ್‌ ವಾಲಿ, ವೈ.ಮಂಜು, ಶಿವಕುಮಾರ ಪೂಜಾರಿ, ವಿನೋದ, ಎನ್.ಸೋಮಶೇಖರ ಇತರರು ಇದ್ದರು.

- - -

-18ಕೆಡಿವಿಜಿ1.ಜೆಪಿಜಿ: