ಸಾರಾಂಶ
- ಜಿಲ್ಲಾಡಳಿತ ಭವನದಲ್ಲಿ ಸರ್ಕಾರಕ್ಕೆ ಶ್ರೀರಾಮ ಸೇನೆ ಮನವಿ
- - -ದಾವಣಗೆರೆ: ಬೆಳಗಾವಿ ಜಿಲ್ಲೆಯಲ್ಲಿ ಗೋ ರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಜಿಹಾದಿ ಮತಾಂಧರನ್ನು ತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಶ್ರೀರಾಮ ಸೇನೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಶ್ರೀರಾಮ ಸೇನೆ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತದ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.ಸಂಘಟನೆ ಮುಖಂಡರು ಮಾತನಾಡಿ, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಜೂ.27ರಂದು ಗೋ ರಕ್ಷಣೆಗೆ ಹೋದ ನಾಲ್ವರು ಗೋವುಗಳ ಭಕ್ತರನ್ನು ಕೆಲ ಮತಾಂಧ ಮುಸ್ಲಿಂ ಗೂಂಡಾಗಳು ರಾಕ್ಷಸರಂತೆ ವರ್ತಿಸಿ, ತೆಂಗಿನಮರಕ್ಕೆ ಕಟ್ಟಿ ಹಾಕಿ, ಹತ್ಯೆಗೆ ಪ್ರಯತ್ನಿಸಿದ್ದಾರೆ. ಇದು ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯ. ಜಿಹಾದಿ ಮತಾಂಧರನ್ನು ತಕ್ಷಣ ಬಂಧಿಸಬೇಕು ಎಂದು ತಾಕೀತು ಮಾಡಿದರು.
ಪೊಲೀಸ್ ಇಲಾಖೆ ಜಿಹಾದಿ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಶ್ರೀರಾಮ ಸೇನೆಯೇ ಆ ಗ್ರಾಮಕ್ಕೆ ಹೋಗಿ, ಅಂತಹ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದೂ ಎಚ್ಚರಿಸಿದರು.ಜಿಲ್ಲಾಧ್ಯಕ್ಷ ಕೆ.ಮಣಿ ಸರ್ಕಾರ, ಪ್ರಧಾನ ಕಾರ್ಯದರ್ಶಿ ಪಿ.ಸಾಗರ್, ಉಪಾಧ್ಯಕ್ಷ ರಾಹುಲ್, ಎಚ್.ಶ್ರೀಧರ, ಶಿವು ಪೂಜಾರ, ಆರ್.ಎ.ವಿನಯ್, ಜೆ.ಮಧು, ಅವಿನಾಶ್, ಅನಿಲ್ ಸುರ್ವೆ, ಶ್ರೀಧರ ಸಾಲಕಟ್ಟೆ, ರಾಜು ದೊಡ್ಮನಿ, ಪರಶುರಾಮ, ವಿನೋದರಾಜ, ರಾಘು, ಮಂಜು, ಶಶಿ, ಸುನಿಲ್, ರುದ್ರೇಶ, ಚಂದ್ರು, ಅಜಯ್ ಇದ್ದರು.
- - --30ಕೆಡಿವಿಜಿ5, 6:
ಬೆಳಗಾವಿ ಜಿಲ್ಲೆಯಲ್ಲಿ ಗೋ ರಕ್ಷಕರ ಮೇಲೆ ಜಿಹಾದಿ ಮತಾಂಧರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಶ್ರೀರಾಮ ಸೇನೆಯಿಂದ ದಾವಣಗೆರೆ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.