ತಾಲೂಕಿನ ಗೌಡಗೆರೆ ಹೋಬಳಿ ಹೆಂದೊರೆ ಗ್ರಾಮದಲ್ಲಿ ಸರಕಾರಿ ಶಾಲೆ ಮತ್ತು ದೇವಸ್ಥಾನದ ಅಕ್ಕಪಕ್ಕದ ಸುಮಾರು ಕಡೆ ಅಂಗಡಿಗಳಲ್ಲಿ ಮತ್ತು ವಾಸದ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೆಆರ್ ಎಸ್ ಪಕ್ಷದ ನರಸಿಂಹರಾಜು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಅವರು ನಗರದ ಮಿನಿವಿಧಾನಸೌಧದಲ್ಲಿ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿ ಮಾತನಾಡಿದರು. ಅಕ್ರಮ ಮದ್ಯ ಮಾರಾಟದಿಂದ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿ ದಿನನಿತ್ಯ ಗಲಾಟೆಗಳಾಗಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಸಾರ್ವಜನಿಕರಿಗೂ ತುಂಬಾ ತೊಂದರೆಯಾಗುತ್ತಿದೆ. ೧೮ ಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರು ಕೂಡ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಶಿರಾ ವಲಯದ ಅಬಕಾರಿ ನಿರೀಕ್ಷಕರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟಮಾಡುತ್ತಿರುವ ವಿರುದ್ಧ ಕಾನೂನೂ ರೀತಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರದೀಪ್ ಕುಮಾರ್, ನಟರಾಜು ಜಿ ಬಿ, ಹೆಂದೊರೆ ಗ್ರಾಮದ ಮಹಿಳೆಯರಾದ ಶ್ವೇತ, ಮಮತ, ಜಲಜಾಕ್ಷಿ, ನಿರ್ಮಲ, ಅನಸೂಯಮ್ಮ ಸೇರಿದಂತೆ ಹಲವರು ಹಾಜರಿದ್ದರು.