Demand for action against Pratap Simha
ಆಲ್ದೂರು:ಡಿಎಸ್ಎಸ್ ಮತ್ತು ದಲಿತ ಸಂಘಟನೆಗಳು ಬಳಸುವ ನೀಲಿ ಶಾಲು ಮತ್ತು ಅಂಬೇಡ್ಕರ್ ಕುರಿತು ಮೊದಲು ತಿಳಿಯಿರಿ ಎಂದು ಅವಹೇಳನ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳವಾರ ಬಹುಜನ ಸಮಾಜ ಪಕ್ಷ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಆಲ್ದೂರು ಬ್ಲಾಕ್ ಸಮಿತಿಯ ಪದಾಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದರು.ಈಚೆಗೆ ಮೈಸೂರು ಜಿಲ್ಲೆಯ ಟಿ.ನರಸೀಪುರದ ಗಣಪತಿ ವಿಸರ್ಜನ ಮಹೋತ್ಸವ ಸಮಾರಂಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಡಿಎಸ್ಎಸ್ ಮತ್ತು ದಲಿತ ಸಂಘಟನೆ ಮತ್ತು ನೀಲಿ ಶಾಲು ಹಾಕುವ ಕುರಿತು ಮತ್ತು ಅಂಬೇಡ್ಕರ್ ವಿಚಾರಧಾರೆಗಳನ್ನು ತಿಳಿದುಕೊಳ್ಳಿ ಎಂದು ಅವಹೇಳನಕಾರಿಯಾಗಿ ಮಾತನಾಡಿದ ಹೇಳಿಕೆಯನ್ನು ಖಂಡಿಸಿದರು.ಪ್ರತಾಪ ಸಿಂಹ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ಬಿ ಎಸ್ ಪಿ ಆಲ್ದೂರು ಬ್ಲಾಕ್ ಸಮಿತಿಯ ಮಂಗಳವಾರ ಉಪನಿರೀಕ್ಷಕ ಜಿ ಎ, ರವಿ ಅವರಿಗೆ ದೂರನ್ನು ಸಲ್ಲಿಸಿದರು.
