ನಕಲಿ ಔಷಧಿ ಮಾರಾಟ ವಿರುದ್ಧ ಕ್ರಮಕ್ಕೆ ಆಗ್ರಹ

| Published : Jun 14 2024, 01:09 AM IST

ಸಾರಾಂಶ

ನಕಲಿ ಬಿತ್ತನೆ ಬೀಜದ ಹಾವಳಿ ಮತ್ತೊಂದು ಕಡೆ ತೋಟಗಾರಿಕೆಯಿಂದ ಪರವಾನಗಿ ಪಡೆಯದೆ ಅನಧಿಕೃತ ನರ್ಸರಿ ಮಾಲೀಕರು ಗುಣಮಟ್ಟದವಿಲ್ಲದ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ

ಕನ್ನಡಪ್ರಭ ವಾರ್ತೆ ಮುಳಬಾಗಿಲುಪರವಾನಗಿ ಇಲ್ಲದ ನರ್ಸರಿಗಳು ಹಾಗೂ ಕಳಪೆ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣ ಮಾಡದ ಕೃಷಿ ತೋಟಗಾರಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ವಂಚನೆ ಮಾಡುತ್ತಿರುವ ಔಷಧಿ ಅಂಗಡಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ರೈತ ಸಂಘದಿಂದ ಲೋಕಾಯುಕ್ತ ಅಧೀಕ್ಷಕರಿಗೆ ನಷ್ಟ ಬಿಂಗಿ ಟೊಮೆಟೋ ನಕಲಿ ಔಷದಿಗಳ ಸಮೇತ ಮನವಿ ನೀಡಿ ಒತ್ತಾಯಿಸಿದರು. ಟೊಮೆಟೋಗೆ ಬಾಧಿಸುತ್ತಿರುವ ಬಿಂಗಿ ಊಜಿ, ಚುಕ್ಕೆ ರೋಗಕ್ಕೆ ಗುಣಮಟ್ಟದ ಔಷಧಿಗಳು ಸಿಗದೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಇದ್ದರೂ ಪಸಲು ನಷ್ಟವಾಗಿದೆ. ರೈತ ಸಾಲದ ಸುಳಿಗೆ ಸಿಲುಕುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ರೈತರು ಆರೋಪಿಸಿದ್ದಾರೆ.ನಕಲಿ ಬೀಜಗಳ ಹಾವಳಿ

ಒಂದು ಕಡೆ ನಕಲಿ ಬಿತ್ತನೆ ಬೀಜದ ಹಾವಳಿ ಮತ್ತೊಂದು ಕಡೆ ತೋಟಗಾರಿಕೆಯಿಂದ ಪರವಾನಗಿ ಪಡೆಯದೆ ಅನಧಿಕೃತ ನರ್ಸರಿ ಮಾಲೀಕರು ಗುಣಮಟ್ಟದವಿಲ್ಲದ ಬಿತ್ತನೆ ಬೀಜಗಳನ್ನು ನಾರು ಹಾಕಿ ರೈತರಿಗೆ ಬಿಲ್ ನೀಡದೆ ಸಸಿಗಳನ್ನು ನೀಡುವ ದಂದೆ ಹೆಚ್ಚಾಗಿದ್ದರೂ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.ಕ್ರಮ ಕೈಗೊಳ್ಳುವ ಭರವಸೆ

ಮನವಿ ಸ್ವೀಕರಿಸಿ ಮಾತನಾಡಿದ ಲೋಕಾಯುಕ್ತ ಅಧೀಕ್ಷಕ ಉಮೇಶ್ ರೈತರನ್ನು ವಂಚನೆ ಮಾಡುವ ಔಷದಿ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ಸರ್ಕಾರಿ ಆಸ್ತಿಗಳ ಒತ್ತುವರಿ ಬಗ್ಗೆ ದಾಖಲೆ ನೀಡಿದರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ತಾಲೂಕಾಧ್ಯಕ್ಷ ಯಲುವಳ್ಳಿ ಪ್ರಭಾಕರ್, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಗಿರೀಶ್, ಪಾರುಕ್‌ಪಾಷ, ವಿಜಯ್‌ಪಾಲ್, ಬಂಗಾರಿ ಮಂಜು, ರಾಜೇಶ್, ಭಾಸ್ಕರ್,ಮತ್ತಿತರರು ಇದ್ದರು.