ಹಾವೇರಿ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ, ಪಕ್ಷ ಸಂಘಟನೆಗೆ ಶ್ರಮಿಸದ ಶಿಗ್ಗಾಂವಿ ಮತ್ತು ಸವಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರಿಗೆ ಮನವಿ ಸಲ್ಲಿಸಿದರು.
ಶಿಗ್ಗಾಂವಿ ಮತ್ತು ಸವಣೂರು ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನಗರದಲ್ಲಿ ಜಿಲ್ಲಾಧ್ಯಕ್ಷರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. 2025 ಡಿ. 31ರಂದು ಶಿಗ್ಗಾಂವಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಗುಡ್ಡಪ್ಪ ಜಲದಿ, ಸವಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಮೇಶ ಹರಿಜನ ನೇಮಕಗೊಂಡಿದ್ದು, ಇಲ್ಲಿ ವರೆಗೆ ಪಕ್ಷದ ಕಾರ್ಯಕರ್ತರ ಜತೆಗೆ ಯಾವುದೇ ಸಭೆ ಮಾಡಿಲ್ಲ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿಲ್ಲ. ಶಿಗ್ಗಾಂವಿ ಬ್ಲಾಕ್ ಅಧ್ಯಕ್ಷ ಗುಡ್ಡಪ್ಪ ಜಲದಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. 2024ರ ಶಿಗ್ಗಾಂವಿ-ಸವಣೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ನಾವೆಲ್ಲ ಒಗ್ಗೂಡಿಕೊಂಡು ಪಕ್ಷ ಸಂಘಟನೆ ಮಾಡಿ, ಅಭ್ಯರ್ಥಿ ಗೆಲುವಿಗೆ ನಿರಂತರವಾಗಿ ಶ್ರಮಿಸಿದ್ದೇವೆ ಮತ್ತು ಬಹಳ ನೊಂದಿದ್ದೇವೆ. ಆದ್ದರಿಂದ ಎರಡೂ ಬ್ಲಾಕ್ ಅಧ್ಯಕ್ಷರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ವೇಳೆ ಪಕ್ಷದ ಕಾರ್ಯಕರ್ತರಾದ ಶಿವರಾಜ ಅಮರಾಪುರ, ರವಿಕಾಂತ ಕೋಣಪ್ಪನವರ, ಅಣ್ಣಪ್ಪ ನಡಟ್ಟಿ, ಬಾಬಾಹುಸೇನ ಗೌಡಗೇರಿ, ಭಾರತಿ ಕುಂಬಾರ, ಹಾಶೀನಾಬಿ ಹಾವೇರಿ, ಜಾಕೀರಅಹ್ಮದ ಫರಾಶ, ರುದ್ರೇಶ ಗುಡಗೇರಿ, ಡಿ.ಯು ಅಜ್ಜಣ್ಣವರ, ಕಾಳಪ್ಪ ಬಡಿಗೇರ, ನಿಸ್ಸಾರಅಹ್ಮದ ಬುಡ್ಡೆಸಾಬನವರ, ಭಾಷಾಸಾಬ್ ಕಮ್ಮಾರ, ಮಹೇಶ ಹುಲಸೋಗಿ, ರವಿ ಹನುಮನಹಳ್ಳಿ, ಫಕೃದ್ದೀನ ಸವಣೂರ, ಮಹ್ಮದಜಾಫರ ಸಂಶಿ, ಮಾಲಿಂಗಪ್ಪ ಕುಂಬಾರ, ಜಾಫರಸಾಬ ದುಂಡಸಿ, ಅನೀಲ ಕುರಗೋಡಿ, ಸುನೀಲ ಲಮಾಣಿ, ಅಶೋಕ ಮ್ಯಾಗೇರಿ, ಸುರೇಶ ಹರಿಜನ, ರಹೀಂ ಮಲ್ಲೂರ, ಮಹ್ಮದಜಾಫರ ಯಡಹಳ್ಳಿ, ವಿಠ್ಠಲ ಶಿವಾಜಿ, ಹಜರೇಸಾಬ ಕಾರಡಗಿ, ಅಡಿವೆಪ್ಪ ಹರಿಜನ, ಮಲ್ಲಿಕಾರ್ಜುನ ದೇಸಾಯಿ, ಮೌಲಾಲಿ ಶಿರಕೋಳ, ಇಮ್ತಿಯಾಜ ಭಾವಿಕಟ್ಟಿ ಇತರರು ಇದ್ದರು.